'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಿಂದ ಹೊರಬಂದ ದೀಪಕ್ ಗೌಡ: ಆ ಪಾತ್ರಕ್ಕೆ ಬಂದವರು ಇವರೇ

By ಅನಿತಾ ಬನಾರಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಧಾರಾವಾಹಿಯಲ್ಲಿ 'ಸಮರ್ಥ್' ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ದೀಪಕ್ ಗೌಡ ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದಾರೆ. ಅಂದಹಾಗೆ ಧಾರಾವಾಹಿಯಿಂದ ಹೊರಬಂದಿರುವ ದೀಪಕ್ ತಮ್ಮ ನಿರ್ಧಾರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.

ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ದೀಪಕ್ ಗೌಡಗೆ ಸಮರ್ಥ್ ಪಾತ್ರ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಮಾತ್ರವಲ್ಲದೇ ಕಿರುತೆರೆ ವೀಕ್ಷಕರು ಸಮರ್ಥ್ ಹಾಗೂ ಸಿರಿ ಜೋಡಿಯನ್ನು ಕೂಡಾ ಮೆಚ್ಚಿಕೊಂಡಿದ್ದರು. ಇದ್ದರೆ ಇವರಂತೆ ಇರಬೇಕು ಎಂದು ತುಂಬಾ ಜನ ಅಂದುಕೊಂಡಿದ್ದರು. ಇದೀಗ ಅವರು ಆ ಪಾತ್ರಕ್ಕೆ ವಿದಾಯ ಹೇಳಿರುವುದು ವೀಕ್ಷಕರಿಗೆ ಬೇಸರ ತಂದಿದೆ.

Deepak Gowda who came out of Zee Kannada Serial Shrirastu Shubhamastu

ನಮ್ಮನೆ ಯುವರಾಣಿಯಲ್ಲಿಯೂ ಮೋಡಿ

'ಶ್ರೀ ರಸ್ತು ಶುಭಮಸ್ತು' ಧಾರಾವಾಹಿಯ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ರಾಜ್ ಗುರು ಮನೆತನದ ಅನಿಕೇತ್ ರಾಜ್ ಗುರು ಆಗಿ ನಟಿಸಿದ್ದ ದೀಪಕ್ ಗೌಡ ಅಲ್ಲೂ ಕೂಡಾ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಬಿಳಿ ಹೆಂಡ್ತಿಯ ಗಂಡನಾಗಿ ಮಿಂಚಿದ ದೀಪಕ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ನಾಯಕ ಅಜಿತ್ ಆಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ದೀಪಕ್ ಗೌಡ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಬಣ್ಣ ಹಚ್ಚಿದ್ದರೂ, ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಅವರು 'ಶ್ರೀ ರಸ್ತು ಶುಭಮಸ್ತು'ವಿನಿಂದ ಹೊರಬಂದಿದ್ದು ಸಿನಿಮಾಗಳಲ್ಲಿ ಅಭಿನಯಿಸುತ್ತಾರಾ ಅನ್ನೋ ಕುತೂಹಲವಿದೆ.

Deepak Gowda who came out of Zee Kannada Serial Shrirastu Shubhamastu

ಹೊಸ ನಟನ ಎಂಟ್ರಿ

ಇದರ ಜೊತೆಗೆ ಸಮರ್ಥ್ ಪಾತ್ರಕ್ಕೆ ಈಗಾಗಲೇ ಹೊಸ ನಟನ ಆಗಮನವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಧಾರಾವಾಹಿಯಲ್ಲಿ ನಾಯಕಿ ದೀಪಿಕಾಳ ಅಣ್ಣ ಆಗಿ ನಟಿಸಿದ್ದ ದರ್ಶಿತ್ ಗೌಡ ಇನ್ನು ಮುಂದೆ ಸಮರ್ಥ್ ಆಗಿ ನಟಿಸಲಿದ್ದಾರೆ. ಈಗಾಗಲೇ ದರ್ಶಿತ್ ಅವರು ಧಾರಾವಾಹಿ ತಂಡ ಸೇರಿದ್ದು ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತಾರಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

ಏತನ್ಮಧ್ಯೆ, ಶ್ರೀರಸ್ತು ಶುಭಮಸ್ತು ಧಾರಾವಾಹಿ ಕಥೆಯು ವಿಧವೆಯಾದ ತುಳಸಿ ಎಂಬ ಹುಡುಗಿಯ ಸುತ್ತ ಸುತ್ತುತ್ತದೆ. ಅವಳು ತನ್ನ ಸೊಸೆ ಸಿರಿಯಿಂದಾಗಿ ಸ್ನೇಹಿತ ಮತ್ತು ಬೆಂಬಲಿಗನನ್ನು ಕಂಡುಕೊಳ್ಳುತ್ತಾಳೆ. ತುಳಸಿಯನ್ನು ಮರುಮದುವೆ ಮಾಡಿಸಲು ಸಿರಿ ತನ್ನ ಕುಟುಂಬ ಮತ್ತು ಸಮಾಜದ ವಿರುದ್ಧ ನಿಲ್ಲುತ್ತಾಳೆ.

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯು ಮರಾಠಿಯ 'ಅಗ್ಗಾಬಾಯಿ ಸಾಸುಭಾಯಿ'ಯ ರಿಮೇಕ್ ಆಗಿದೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕೆಲವು ಬದಲಾವಣೆಗಳೊಂದಿಗೆ ಇದನ್ನು ಕನ್ನಡದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. 'ಶ್ರೀರಸ್ತು ಶುಭಮಸ್ತು' 100 ಕ್ಕೂ ಹೆಚ್ಚು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮಾತ್ರವಲ್ಲದೇ ಕನ್ನಡ ಟಿವಿಯಲ್ಲಿ ವೀಕ್ಷಕರು ಇಷ್ಟಪಟ್ಟು ನೋಡುವ ಧಾರಾವಾಹಿಗಳಲ್ಲಿ ಇದೂ ಒಂದಾಗಿ ಹೊರಹೊಮ್ಮಿದೆ.

More from Filmibeat

English summary
Deepak Gowda who came out of Zee Kannada Serial Srirasthu Shubhamastu. Darshith Gowda stepped in as Samarth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X