ಶ್ವೇತಾ ವಿರುದ್ಧ ಬಕೆಟ್ ಹಿಡಿಯುತ್ತಿರುವ ಆರೋಪ
ಮನೆಯಲ್ಲಿ ರೇಷನ್ ಮುಗಿದ ಬಗ್ಗೆ ಮಹಿಳಾ ಸದಸ್ಯರು ಚರ್ಚಿಸಿದರು. ಮೂರು ದಿನಕ್ಕೆ ಯಾವುದೇ ಕಾರಣಕ್ಕೂ ರೇಷನ್ ಆಗಲ್ಲ. ಅಕ್ಕಿ, ಗೋಧಿ ಸ್ವಲ್ಪವೇ ಇದೆ ಎಂದು ಮಾತನಾಡಿಕೊಂಡರು.
ಕ್ಯಾಪ್ಟನ್ ಆದವರ ಜೊತೆ ಶ್ವೇತಾ ಚೆಂಗಪ್ಪ ಬಕೆಟ್ ಹಿಡಿಯುತ್ತಿದ್ದಾರೆ ಎಂದು ದೀಪಿಕಾ ಹಾಗೂ ಆದಿ ಚರ್ಚಿಸಿದರು. ಅದರೆ ಈ ಮಾತನ್ನು ಅಕುಲ್ ಬಾಲಾಜಿ ಒಪ್ಪಲಿಲ್ಲ. ನಾನು ಕ್ಯಾಪ್ಟನ್ ಆಗಿದ್ದಾಗ ಯಾರೂ ನನಗೆ ಸರಿಯಾಗಿ ಊಟವನ್ನೂ ಹಾಕಲಿಲ್ಲ ಎಂದರು.

ಬಿಗ್ ಬಾಸ್ ಕೊಟ್ಟ ನೋಟ್ ಬುಕ್ ಮತ್ತು ಪೆನ್ನನ್ನು ತಮ್ಮ ಟೀ ಶರ್ಟಿನೊಳಗೆ ಬಚ್ಚಿಟ್ಟುಕೊಂಡರು ಶ್ವೇತಾ ಚೆಂಗಪ್ಪ. ಇನ್ನೊಂದು ಕಡೆ ಆದಿ, ನೀತೂ, ದೀಪಿಕಾ ಈ ಬಾರಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಬಗ್ಗೆ ಚರ್ಚಿಸಿದರು.
ತನ್ನ ಬಗ್ಗೆ ದೀಪಿಕಾ ಚಾಡಿ ಹೇಳಿರುವ ಬಗ್ಗೆ ಸಂತೋಷ ಅವರು ಸ್ವಲ್ಪ ಗರಂ ಆಗಿದ್ದರು. ಈ ಬಗ್ಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ನನಗೆ ಒಳ್ಳೆಯ ಸರ್ಟಿಫಿಕೇಟ್ ಕೊಟ್ಟಿದ್ದೀಯಾ ಎಂದರು ಸಂತೋಷ್. ನನ್ನ ಬಗ್ಗೆ ಯಾವಾಗಲೂ ನೀವು ನೆಗಟೀವ್ ಆಗಿ ಕಾಣಿಸುತ್ತೀರಾ ಎಂದರು ದೀಪಿಕಾ. ವಾಟರ್ ಬಾಟಲನ್ನು ಸಂತೋಷ್ ಕಡೆಗೆ ಎಸೆದು ಕೋಪದಿಂದ ಹೊರಟು ಹೋದರು ದೀಪಿಕಾ.
ಈ ಬಾರಿ ಮನೆಯಲ್ಲಿ ಇನ್ನೊಂದು ಆಟ ಶುರುವಾಯಿತು. ಅದೇನೆಂದರೆ ಕುಸ್ತಿ. ಬಾಹುಬಲ ತೋರಲು ಬಿಗ್ ಬಾಸ್ ಅವಕಾಶ ಮಾಡಿಕೊಟ್ಟರು. ಆಕ್ಟಿವಿಟಿ ಏರಿಯಾದಲ್ಲಿ ಮಲ್ಲಯುದ್ಧ ನಡೆಯಲಿದೆ. ಗೆದ್ದ ಪುರುಷರಿಗೆ ಜಗದೇಕ ಮಲ್ಲ, ಮಹಿಳೆಯರಿಗೆ ಜಗತ್ ಜಟ್ಟಿ ಎಂಬ ಪ್ರಶಸ್ತಿ ನೀಡಲಾಗುತ್ತದೆ ಎಂದು ಹೇಳಿದರು.


Click it and Unblock the Notifications











