ನಾಗಿಣಿ ಅಲ್ಲ ಸಮೀರಾ: ಮತ್ತೆ ಕಿರುತೆರೆಗೆ ಬಂದ ದೀಪಿಕಾ ದಾಸ್

By ಪ್ರಿಯಾ ದೊರೆ

ದೀಪಿಕಾ ದಾಸ್ ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಆಕೆ 'ನಾಗಿಣಿ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಮಿಂಚಿದ್ದರು. ಕನ್ನಡದ ಬಿಗ್‌ ಬಾಸ್‌ ಸೀಸನ್ 7 ಮತ್ತು 9 ಎರಡರಲ್ಲೂ ಸ್ಪರ್ಧಿಯಾಗಿ ಕೂಡ ಭಾಗವಹಿಸಿದ್ದರು. ಸೀಸನ್‌ ಏಳರಲ್ಲಿ ನವೀನಳಾಗಿಯೂ ಸೀಸನ್‌ ಒಂಭತ್ತರಲ್ಲಿ ಪ್ರವೀಣೆಯಾಗಿಯೂ ಕಾಣಿಸಿಕೊಂಡಿದ್ದರು. ವೀಕ್ಷಕರನ್ನು ರಂಜಿಸಿದ್ದರು.

ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ದೀಪಿಕಾ ದಾಸ್‌ ಅವರನ್ನು ಎಲ್ಲರೂ ನಾಗಿಣಿ ಎಂದೇ ಗುರುತಿಸುತ್ತಾರೆ. ನಾಗಿಣಿ ಧಾರಾವಾಹಿಯ ಮೂಲಕ ದೀಪಿಕಾ ದಾಸ್ ಅವರು ಜನಮನ ಗೆದ್ದಿದ್ದರು. ಬೆಂಗಳೂರಿನ ನಿವಾಸಿಯಾಗಿರುವ ದೀಪಿಕಾ ದಾಸ್‌ ಅವರು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಸೋದರ ಸಂಬಂಧಿ. ಯಶ್ ಅವರ ಚಿಕ್ಕಮ್ಮನ ಮಗಳು ದೀಪಿಕಾ ದಾಸ್. 2014ರಲ್ಲಿ ತೆರೆಕಂಡ ಸ್ಯಾಮುವೆಲ್ ಟೋನಿ ನಿರ್ದೇಶನದ 'ದೂದ್ ಸಾಗರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು.

Deepika Das comes on-board for colors kannada new serial Antharapata

ತೆಲುಗಿನ 'ಈ ಮನಸೇ' ಚಿತ್ರದಲ್ಲಿ ನಟಿಸಿ, 2017 ರಲ್ಲಿ ತೆರೆಕಂಡ 'ಡ್ರೀಮ್ ಗರ್ಲ್' ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದರು. 2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ 'ನಾಗಿಣಿ' ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದರು. ಈ ಧಾರಾವಾಹಿ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿ ದೀಪಿಕಾರವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿತು. ಈ ಧಾರಾವಾಹಿಯಲ್ಲಿ ಅಮೃತಾ ಮತ್ತು ನಾಗಿಣಿ ಆಗಿ ಮೋಡಿ ಮಾಡಿದ್ದರು.

ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಭಾಗಿಯಾಗಿದ್ದ ದೀಪಿಕಾ ದಾಸ್, ಎರಡನೇ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದರು. ಇನ್ನು 'ಸೂಪರ್‌ ಟಾಕ್‌ ಟೈಮ್‌' ಕಾರ್ಯಕ್ರಮದಲ್ಲೂ ದೀಪಿಕಾ ದಾಸ್‌ ಅವರು ಕಾಣಿಸಿಕೊಂಡರು. ದೀಪಿಕಾ ದಾಸ್ ಅವರು ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿ ಇರುತ್ತಾರೆ. ತಮ್ಮ ಅಭಿಮಾನಿಗಳ ಜೊತೆಗೆ ಒಡನಾಟವನ್ನ ಇಟ್ಟುಕೊಳ್ಳುತ್ತಿರುತ್ತಾರೆ. ಅದೇ ರೀತಿ ಅವರು ಈಗ ಬೋಲ್ಡ್ ಲುಕ್‌ನಲ್ಲಿ ಫೋಟೋಶೂಟ್‌ ಮಾಡಿಸುತ್ತಿರುತ್ತಾರೆ.

Deepika Das comes on-board for colors kannada new serial Antharapata

ಟ್ರೆಡಿಷನಲ್‌ ಹಾಗೂ ಮಾರ್ಡನ್‌ ಲುಕ್‌ ಎರಡರಲ್ಲೂ ಸಖತ್‌ ಆಗಿ ಕಾಣುತ್ತಿರುತ್ತಾರೆ. ಇನ್ನು ದೀಪಿಕಾ ದಾಸ್‌ ಅವರಿಗೆ ಟ್ರಾವೆಲ್‌ ಮಾಡುವುದೆಂದರೆ ಬಹಳ ಇಷ್ಟವಂತೆ. ಸಾಕಷ್ಟು ಬಾರಿ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಕೆಗೆ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಆದರೆ ಚಿತ್ರರಂಗದಲ್ಲಿ ಮಾತ್ರ ಈಕೆಗೆ ಒಳ್ಳೆ ಬ್ರೇಕ್ ಸಿಗಲಿಲ್ಲ.

ನಟಿ ದೀಪಿಕಾ ದಾಸ್ ಈಗ 'ಪಾಯಲ್' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್‌ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದರ ಜೊತೆಗೆ ದೀಪಿಕಾ ದಾಸ್‌ ಅವರು ಕಿರುತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಈ ವಾರವಷ್ಟೇ ಪ್ರಾರಂಭವಾದ 'ಅಂತರಪಟ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಸ್ವತಃ ದೀಪಿಕಾ ದಾಸ್‌ ಅವರೇ ಮಾಹಿತಿ ನೀಡಿದ್ದಾರೆ.

Deepika Das comes on-board for colors kannada new serial Antharapata

ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ 'ಅಂತರಪಟ' ಧಾರಾವಾಹಿಯಲ್ಲಿ ನಟಿಸಿರುವ ದೃಶ್ಯವನ್ನು ಶೇರ್‌ ಮಾಡಿಕೊಂಡಿದ್ದಾರೆ. ಗೆಸ್ಟ್‌ ರೋಲ್‌ನಲ್ಲಿ ದೀಪಿಕಾ ದಾಸ್ ಅವರು ಕಾಣಿಸಿಕೊಂಡಿದ್ದು, ಸಮೀರಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಸದ್ಯ ದೀಪಿಕಾ ದಾಸ್‌ ಅವರು ಬ್ಯುಸಿಯಾಗಿದ್ದಾರೆ. ಆದರೆ, 'ಅಂತರಪಟ' ಧಾರಾವಾಹಿಯಲ್ಲಿ ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ಶೂಟಿಂಗ್‌ನಲ್ಲಿ ದೀಪಿಕಾ ದಾಸ್‌ ಭಾಗಿ ಆಗಿದ್ದಾರೆ.

More from Filmibeat

English summary
Deepika Das comes on-board for colors kannada new serial. Nagini Fame Tv Actress Latest PhotoShoot Goes viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X