For Quick Alerts
  ALLOW NOTIFICATIONS  
  For Daily Alerts

  ವಂಚನೆ ಆರೋಪ: ಖ್ಯಾತ ಡ್ಯಾನ್ಸರ್ ಮತ್ತು 'ಬಿಗ್ ಬಾಸ್' ಖ್ಯಾತಿಯ ಸಪ್ನಾ ವಿರುದ್ಧ FIR ದಾಖಲು

  |

  ಖ್ಯಾತ ನೃತ್ಯಗಾರ್ತಿ ಮತ್ತು ಬಿಗ್ ಬಾಸ್ ಖ್ಯಾತಿಯ ಸಪ್ನಾ ಚೌಧರಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಸಪ್ನಾ ಚೌಧರಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಪ್ನಾ ವಿರುದ್ಧ ಒಟ್ಟು 4 ಕೋಟಿ ರೂ ವಂಚನೆ ಆರೋಪ ಕೇಳಿಬಂದಿದೆ.

  ಸಪ್ನಾ ಚೌಧರಿ 2018ರಲ್ಲಿ ಸ್ಟೇಜ್ ಶೋಗಾಗಿ ಪಿ ಆರ್ ಕಂಪೆನಿಯ ಪಂಕಜ್ ಚಾವ್ಲಾ ಅವರಿಂದ 1 ಕೋಟಿ ರೂ. ಮುಂಗಡ ಹಣ ಪಡೆದಿದ್ದರು. ನೃತ್ಯ ಮತ್ತು ಗಾಯನ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಮುಂಗಡ ಹಣದಲ್ಲಿ ಸಪ್ನಾ ಗುರಗಾಂವ್ ನಲ್ಲಿ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ. ಆದರೆ ಒಪ್ಪಂದ ಪ್ರಕಾರ ಸಪ್ನಾ ವೇದಿಕೆಯಲ್ಲಿ ಪ್ರದರ್ಶನ ನೀಡಲಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

  ಮಲಯಾಳಂ ಬಿಗ್‌ಬಾಸ್ 3 ಪ್ರಸಾರ ದಿನಾಂಕ, ಸಮಯ ಪ್ರಕಟ

  ದೂರಿನಲ್ಲಿ, ಪವನ್ ಚಾವ್ಲಾ ಅವರು ಸಪ್ನಾ ಚೌಧರಿ ಅವರನ್ನು ಸಂಪರ್ಕ ಮಾಡಿದಾಗ ಬೆದರಿಕೆ ಹಾಕಿದ್ದಾರೆ. ಸಂಸ್ಥೆಯು ಹಲವಾರು ಈವೆಂಟ್ ಗಾಗಿ ಹಣವನ್ನು ಎಲ್ಲಿ, ಹೇಗೆ ಯಾವಾಗ ಸಂಗ್ರಹಿಸಿದೆ ಎಂದು ಕಂಡು ಹಿಡಿಯಬೇಕು. ಆರೋಪಿ ನಂ.1 ಸಪ್ನಾ ಚೌಧರಿ ಖಾತೆಯ ದಾಖಲೆಗಳನ್ನು ಪರೀಕ್ಷೆಗೆ ಒಳಪಡಿಸಬೇಕು. 3.5 ಕೋಟಿಗಿಂತ ಹೆಚ್ಚಿನ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅದನ್ನು ವಸೂಲಿ ಮಾಡಿಕೋಡಬೇಕು ಎಂದು ಉಲ್ಲೇಖಿಸಿದ್ದಾರೆ.

  ಸಪ್ನಾ ಚೌಧರಿ ಮೋಹಕ ನೃತ್ಯದ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸಪ್ನಾ ಚೌಧರಿ ಆಗಾಗ ನೃತ್ಯದ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸಪ್ನಾ ಚೌಧರಿ ಡ್ಯಾನ್ಸ್ ವಿಡಿಯೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿದೆ. ಇನ್ನೂ ಸಪ್ನಾ ಬಿಗ್ ಬಾಸ್ 11ರಲ್ಲಿ ಭಾಗಿಯಾಗಿದ್ದರು.

  English summary
  Delhi police fir filed against Bigg Boss fame Sapna Chaudhari over 4 crore fraud case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X