twitter
    For Quick Alerts
    ALLOW NOTIFICATIONS  
    For Daily Alerts

    ಶನಿ, ಮಹಾಕಾಳಿ ನಂತರ ಮತ್ತೆರಡು ಪೌರಾಣಿಕ ಧಾರಾವಾಹಿಗಳು

    |

    Recommended Video

    ಪೌರಾಣಿಕ ಧಾರಾವಾಹಿಗಳ ದರ್ಬಾರ್ ಶುರು ಆಗಲಿದೆ..! | Filmibeat Kannada

    ಸಂಜೆಯಾದ್ರೆ ಇರೋ ಕೆಲಸಗಳನ್ನ ಬಿಟ್ಟು ಟಿವಿ ಮುಂದೆ ಕುಳಿತುಕೊಳ್ಳುವ ವರ್ಗವಿದೆ. ಸೀರಿಯಲ್ ನಲ್ಲಿ ನಡೆಯೋ ಕಥೆಗಳನ್ನ ನಮ್ಮದೇ ಕಥೆ ಎಂದು ಭಾವಿಸುವ ಪ್ರೇಕ್ಷಕರಿದ್ದಾರೆ.

    ಅದರಲ್ಲೂ ಅಗ್ನಿಸಾಕ್ಷಿ, ಪುಟ್ಟಗೌರಿ ಮದುವೆ, ರಾಧರಮಣ, ಲಕ್ಷ್ಮಿ ಬಾರಮ್ಮ ಅಂತಹ ಮೆಗಾ ಧಾರಾವಾಹಿಗಳಿಗೆ ಹೆಚ್ಚು ಟಿ.ಆರ್.ಪಿ. ಎಲ್ಲಾ ಧಾರಾವಾಹಿಗಳಲ್ಲೂ ಬಹುತೇಕ ಒಂದೇ ಕಥೆ. ಮನೆಯಲ್ಲಿ ವಿಲನ್, ಕಿಡ್ನಾಪ್, ಲವ್, ಸೇಡು ಹೀಗೆ ನೋಡಿ ನೋಡಿ ಕೆಲವು ಪ್ರೇಕ್ಷಕರಂತೂ ಬೇಜಾರಾಗೋಗಿದ್ದಾರೆ.

    ಇಂತಹ ಧಾರಾವಾಹಿಗಳ ಮಧ್ಯೆ ಹೊಸತನವನ್ನ ನೀಡಿ, ಹೊಸ ಪ್ರೇಕ್ಷಕರನ್ನ ಸೆಳೆಯುವಂತಹ ಸಾಹಸ ಮಾಡುತ್ತಿವೆ ಪೌರಾಣಿಕ ಧಾರಾವಾಹಿಗಳು. ಈ ಹಿಂದೆ ಕೆಲವು ಪೌರಾಣಿಕ ಕಥೆ ಯಶಸ್ಸು ಸಿಕ್ಕಿಲ್ಲ ಅಂತ ನಿಂತಿದ್ದವು. ಆದ್ರೀಗ, ಸಾಲು ಸಾಲು ಪೌರಾಣಿಕ ಕಥೆಗಳು ನಿಮ್ಮ ಮುಂದೆ ಬರ್ತಿದೆ. ಅವು ಯಾವುದು.? ಮುಂದೆ ಓದಿ.....

    ಜನಮನ ಗೆದ್ದ ಶನಿ

    ಜನಮನ ಗೆದ್ದ ಶನಿ

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಶನಿ' ಧಾರಾವಾಹಿ ಜನರ ಮನ ಗೆದ್ದಿದೆ. ರೆಗ್ಯುಲರ್ ಧಾರಾವಾಹಿಗಳಿಗೆ ಪೈಪೋಟಿ ನೀಡುತ್ತಾ ಸಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ರಾತ್ರಿ 8.30ಕ್ಕೆ ಬಹುತೇಕ ಮಂದಿ ಉಳಿದ ಕಾರ್ಯಕ್ರಮಗಳನ್ನ ಬಿಟ್ಟು ಶನಿ ನೋಡ್ತಾರೆ.

    ಶನಿಯನ್ನ ಹಿಂಬಾಲಿಸಿದ ಮಹಾಕಾಳಿ

    ಶನಿಯನ್ನ ಹಿಂಬಾಲಿಸಿದ ಮಹಾಕಾಳಿ

    'ಶನಿ' ಧಾರಾವಾಹಿಯ ಯಶಸ್ಸು ನೋಡಿದ ಕಲರ್ಸ್ ಕನ್ನಡ ಮತ್ತೊಂದು ಪೌರಾಣಿಕ ಕಥೆಯನ್ನ ಪ್ರಸ್ತುತ ಪಡಿಸುತ್ತಿದೆ. ಅದರ ಹೆಸರು ಮಹಾಕಾಳಿ. ಪ್ರತಿವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಮಹಾಕಾಳಿ ಪ್ರಸಾರವಾಗುತ್ತೆ. ಮಹಾಕಾಳಿಯ ಪುರಾಣವನ್ನ ಇಲ್ಲಿ ಹೇಳುತ್ತಾ ಸಾಗಿದೆ.

    ಊಘೇ ಊಘೇ ಮಾದೇಶ್ವರ

    ಊಘೇ ಊಘೇ ಮಾದೇಶ್ವರ

    ಇನ್ನು ಕಲರ್ಸ್ ಕನ್ನಡದಲ್ಲಿ ಶನಿ, ಮಹಾಕಾಳಿಗೆ ಸಿಕ್ಕ ಪ್ರಶಂಸೆ ಹಾಗೂ ಸಕ್ಸಸ್ ಮತ್ತಷ್ಟು ಪೌರಾಣಿಕ ಧಾರಾವಾಹಿಗಳಿಗೆ ಸ್ಫೂರ್ತಿಯಾಗಿದೆ. ಹೌದು, ಇತ್ತೀಚಿಗಷ್ಟೆ ಜೀ ಕನ್ನಡದಲ್ಲಿ 'ಊಘೇ ಊಘೇ ಮಾದೇಶ್ವರ' ಎಂಬ ಸೀರಿಯಲ್ ಪ್ರಸಾರವಾಗ್ತಿದೆ. ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಈ ಮಾದೇಶ್ವರ ಸಾಹಸಗಾಥೆ ಮೂಡಿಬರ್ತಿದೆ.

    ವಿಷ್ಣು ದಶಾವತಾರ

    ವಿಷ್ಣು ದಶಾವತಾರ

    ಜೀ ಕನ್ನಡದಲ್ಲಿ ''ಊಘೇ ಊಘೇ ಮಾದೇಶ್ವರ' ಪ್ರಸಾರವಾಗುತ್ತಿರುವಾಗಲೇ ಮತ್ತೊಂದು ಪೌರಾಣಿಕ ಕಥೆ ಬರ್ತಿದೆ ಎಂಬ ಪ್ರೋಮೋ ಪ್ರಸಾರವಾಗ್ತಿದೆ. 'ವಿಷ್ಣು ದಶಾವತಾರ' ಎಂಬ ಹೊಸ ಕಥೆ ಆರಂಭವಾಗಲಿದ್ದು, ಸಮಯ ಮತ್ತು ಯಾವಾಗ ಆರಂಭ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.

    English summary
    The demand increasing for mythological series on Kannada TV channels.
    Wednesday, September 19, 2018, 16:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X