25 ಲಕ್ಷದ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ದೇವಮ್ಮ 'ಕೋಟ್ಯಧಿಪತಿ' ಆಟ ಕ್ವಿಟ್ ಮಾಡಿದ್ದೇಕೆ?

ಈ ಆವೃತ್ತಿಯ ಕನ್ನಡದ ಕೋಟ್ಯಧಿಪತಿಯಲ್ಲಿ ದೊಡ್ಡ ಮೊತ್ತ ಗೆದ್ದವರ ಸಂಖ್ಯೆ ಬಹಳ ಕಮ್ಮಿ. ನಾಲ್ಕನೇ ಆವೃತ್ತಿಯ ಮೊದಲ ಸ್ಪರ್ಧಿ 12.5 ಲಕ್ಷ ಗೆದ್ದಿದ್ದರು. ಅದನ್ನ ಬಿಟ್ಟರೇ ಎಲ್ಲರೂ ಅದಕ್ಕಿಂತ ಕಡಿಮೆ ಹಣ ಗಳಿಸಿಕೊಂಡಿದ್ದಾರೆ.

ಈ ಶನಿವಾರ ಕೋಟ್ಯಧಿಪತಿ ಹಾಟ್ ಸೀಟ್ ನಲ್ಲಿ ಕುಳಿತುಕೊಂಡಿದ್ದ ದೇವಮ್ಮ ಕೂಡ 12.5 ಲಕ್ಷ ಗೆದ್ದಿದ್ದರು. ನಂತರ 25 ಲಕ್ಷದ ಪ್ರಶ್ನೆ ಎದುರಿಸಿದ ದೇವಮ್ಮ ಅವರಿಗೆ ಜನಗಣತಿಗೆ ಸಂಬಂಧಿಸಿದ ಪ್ರಶ್ನೆ ಸಿಕ್ತು.

ಮೂರು ಲೈಫ್ ಲೈನ್ ಬಳಸಿಕೊಂಡಿದ್ದ ದೇವಮ್ಮ ಬಳಿ ಡಬಲ್ ಡಿಪ್ ಮಾತ್ರ ಬಾಕಿ ಇತ್ತು. ಒಂದು ವೇಳೆ ಈ ಪ್ರಶ್ನೆಗೆ ದೇವಮ್ಮ ಸರಿಯಾದ ಉತ್ತರ ನೀಡಿದ್ದರೇ 25 ಲಕ್ಷ ಹಣ ಗಳಿಸಬಹುದಿತ್ತು. ಆದರೆ, ಉತ್ತರ ಗೊತ್ತಿದ್ದರೂ ಆಟ ಮುಂದುವರಿಸಲಿಲ್ಲ. ಆಟವನ್ನ ಕ್ವಿಟ್ ಮಾಡಿದ್ರು. ಅಷ್ಟಕ್ಕೂ, ದೇವಮ್ಮ ಈ ನಿರ್ಧಾರ ಮಾಡಿದ್ದೇಕೆ? ಮುಂದೆ ಓದಿ....

ದೇವಮ್ಮನಿಗೆ ಬೇಕಿತ್ತು 5 ಲಕ್ಷ

ದೇವಮ್ಮನಿಗೆ ಬೇಕಿತ್ತು 5 ಲಕ್ಷ

ಮೈಸೂರಿನ ಹೆಚ್.ಡಿ. ಕೋಟೆ ಮೂಲದ ದೇವಮ್ಮ ವೃತ್ತಿಯಲ್ಲಿ ಟೀಚರ್. ಮದುವೆ ಆಗಿ ಆರು ವರ್ಷದ ಆಗಿದ್ದರೂ ಮಕ್ಕಳಾಗಿಲ್ಲ. ಹೀಗಾಗಿ, IVF (ವೈಜ್ಞಾನಿಕ ಮಗು ಪಡೆಯುವ ವಿಧಾನ) ಮೂಲಕ ಮಕ್ಕಳು ಪಡೆಯಲು ದೇವಮ್ಮ ನಿರ್ಧರಿಸಿದ್ದರು. ಈ ಚಿಕಿತ್ಸೆಗಾಗಿ ದೇವಮ್ಮನಿಗೆ ಸುಮಾರು 5 ಲಕ್ಷ ಹಣ ಬೇಕಿತ್ತು. ಕನ್ನಡದ ಕೋಟ್ಯಧಿಪತಿಯಲ್ಲಿ ಹೇಗಾದರೂ ಮಾಡಿ 5 ಲಕ್ಷ ಗೆಲ್ಲಬೇಕು ಎಂದು ಆಸೆಯಿಂದ ಬಂದಿದ್ದ ದೇವಮ್ಮನಿಗೆ ಆ ದೇವರು ಕೈಹಿಡಿದ.

ಕೋಟ್ಯಧಿಪತಿಯಲ್ಲಿ ದೊಡ್ಡ ಮೊತ್ತ ಗೆದ್ದ ಸಾಫ್ಟ್ ವೇರ್ ಇಂಜಿನಿಯರ್ ಜ್ಞಾನೇಶ್

12.5 ಲಕ್ಷ ಬಾಚಿಕೊಂಡ ದೇವಮ್ಮ

12.5 ಲಕ್ಷ ಬಾಚಿಕೊಂಡ ದೇವಮ್ಮ

ಸತತ ಹತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ದೇವಮ್ಮ 3.20 ಲಕ್ಷ ಹಣ ಗೆದ್ದು ಸೇಫ್ ಮಾಡಿಕೊಂಡರು. ನಂತರ ಆಟ ಮುಂದುವರಿಸಿದ ಟೀಚರ್, ಹನ್ನೆರಡು ಪ್ರಶ್ನೆಗಳಿಗೆ ಉತ್ತರಿಸಿ 12.5 ಲಕ್ಷ ತನ್ನ ಖಾತೆಗೆ ಹಾಕಿಕೊಂಡರು. ಆಮೇಲೆ 25 ಲಕ್ಷದ ಪ್ರಶ್ನೆ ಸ್ವಲ್ಪ ಗೊಂದಲ ಉಂಟು ಮಾಡಿತು. ಹಾಗಾಗಿ, ಆಟ ಮುಂದುವರಿಸಲು ಹೋಗಲಿಲ್ಲ. ಕ್ವಿಟ್ ಮಾಡಿದರು. ಈ ಪ್ರಶ್ನೆಗೆ ನಿಖರವಾಗಿ ಉತ್ತರ ಗೊತ್ತಿರಲಿಲ್ಲ. ಆದರೂ, ದೇವಮ್ಮನಿಗೆ ಒಂದು ಉತ್ತರದ ಮೇಲೆ ಭಾರಿ ಅನುಮಾನ ಇತ್ತು. ದುರಾದೃಷ್ಟವಶಾತ್ ಆ ಅನುಮಾನದ ಉತ್ತರವೇ ಸರಿ ಆಗಿತ್ತು.

ಯಾವುದು ಆ 25 ಲಕ್ಷದ ಪ್ರಶ್ನೆ

ಯಾವುದು ಆ 25 ಲಕ್ಷದ ಪ್ರಶ್ನೆ

2011ರ ಜನಗಣತಿ ಪ್ರಕಾರ, 2001ರ ಜನಗಣತಿಗೆ ಹೋಲಿಸಿದರೇ ಜನಸಂಖ್ಯೆ ಕಡಿಮೆ ಆಗಿದ್ದ ಒಂದೇ ಒಂದು ರಾಜ್ಯ ಯಾವುದು?

A ಮಣಿಪುರ
B ಅರುಣಾಚಲ ಪ್ರದೇಶ
C ಕೇರಳ
D ನಾಗಲ್ಯಾಂಡ್

ದುಡ್ಡು ಸಾಕು ಎಂದು ಕ್ವಿಟ್ ಮಾಡಿದ ದೇವಮ್ಮ

ದುಡ್ಡು ಸಾಕು ಎಂದು ಕ್ವಿಟ್ ಮಾಡಿದ ದೇವಮ್ಮ

ಆಯ್ಕೆ D ನಾಗಲ್ಯಾಂಡ್ ಉತ್ತರ ಇರಬಹುದು ಎಂದು ಹೇಳುತ್ತಿದ್ದ ದೇವಮ್ಮ ಲಾಕ್ ಮಾಡೋಣ ಎಂದು ಯೋಚಿಸಿದರು. ಒಂದು ವೇಳೆ ಉತ್ತರ ತಪ್ಪಾದರೇ ಕೈಯಲ್ಲಿದ್ದ 12.5 ಲಕ್ಷದಲ್ಲಿ 9 ಲಕ್ಷದ ವರೆಗೂ ಕಳೆದುಕೊಳ್ಳಬೇಕಾಗುತ್ತೆ ಎಂಬ ಭಯ ಕಾಡಿತು. ಹಾಗಾಗಿ, ಇಷ್ಟು ದುಡ್ಡು ಸಾಕು. ಇದರಿಂದ ಮಗು ಪಡೆಯಬಹುದು ಎಂದು ನಿರ್ಧರಿಸಿ ಆಟ ಕ್ವಿಟ್ ಮಾಡಿದರು. ದುರಾದೃಷ್ಟವಶಾತ್ D ನಾಗಲ್ಯಾಂಡ್ ಸರಿ ಉತ್ತರ ಆಗಿತ್ತು.

More from Filmibeat

English summary
Kannadada Kotyadhipathi 4: HD Kote based Devamma Won 12.5 Lakh In Kannadada Kotyadhipathi 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X