ಮದುವೆಯಾದ ಎರಡು ವರ್ಷದ ನಂತರ ಸಿಹಿ ಸುದ್ದಿ ನೀಡಿದ ಖ್ಯಾತ ಕಿರುತೆರೆ ನಟಿ, ಆದರೆ ಹಾಕಿದ ಫೋಟೊಗೆ ಅಪಸ್ವರ

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಇಂತಹ ಪ್ರಶ್ನೆಗಳಿಗೆ ಹಲವು ಸಲ ಹಲವಾರು ತಾರೆಯರು ಉರಿದು ಬಿದ್ದಿದ್ದು ಇದೆ.

ಆದರೂ ಕೂಡ ಈ ಪ್ರಶ್ನೆ ಎದುರಾಗಿಯೇ ಆಗುತ್ತೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಸೋನಾರಿಕಾ ಉತ್ತರವನ್ನು ನೀಡಿದ್ದಾರೆ. ತಾವು ಗರ್ಭಿಣಿಯಾಗಿರುವ ಸಿಹಿ ಸುದ್ದಿಯನ್ನು ನೀಡಿದ್ದಾರೆ.

Devon Ke Dev Mahadev s Parvati is Pregnant Sonarika Bhadoria Shares Heartwarming News

ಹೌದು.. ಸೋನಾರಿಕಾ ಭಡೋರಿಯಾ. ಹಿಂದಿ ಕಿರುತೆರೆಯ ಖ್ಯಾತ ನಾಯಕಿ. ''ದೇವೋ ಕೆ ದೇವ್ ಮಹಾದೇವ್‌'' ಧಾರಾವಾಹಿಯಲ್ಲಿ ಪಾರ್ವತಿ ದೇವಿಯ ಪಾತ್ರವನ್ನು ನಿರ್ವಹಿಸಿದ್ದವರು ಇವರು. ಈ ಪಾತ್ರದ ಮೂಲಕ ಹಲವರನ್ನು ಮೂಕವಿಸ್ಮಿತಗೊಳಿಸಿದ್ದ ಸೋನಾರಿಕಾ ಅಷ್ಟೇ ಪ್ರಮಾಣದಲ್ಲಿ ಅಭಿಮಾನಿಗಳನ್ನು ಕೂಡ ಸಂಪಾದಿಸಿದರು.

ಆ ನಂತರ ''ಪೃಥ್ವಿ ವಲ್ಲಬ್''.. ''ದಾಸ್ತಾನ್ ಎ ಮೊಹಬ್ಬತ್-ಸಲೀಂ ಅನಾರ್ಕಲಿ''.. ''ಇಷ್ಕ್ ಮೇ ಮರಜಾವಾ''.. ಧಾರಾವಾಹಿಗಳಲ್ಲಿ ಪಾತ್ರಕ್ಕೆ ಜೀವ ತುಂಬಿದ ಸೋನಾರಿಕಾ ತಮಿಳಿನ ''ಇಂದ್ರಜಿತ್'' ಸೇರಿ ಕೆಲ ಚಿತ್ರಗಳಲ್ಲಿ ಕೂಡ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು.

ಇಂಥಾ ಸೋನಾರಿಕಾ ಭಡೋರಿಯಾ 2023ರಲ್ಲಿ ವಿಕಾಸ್ ಅವರನ್ನು ಮದುವೆಯಾಗಿದ್ದರು. ಮದುವೆ ಮುನ್ನ 07 ವರ್ಷ ಪ್ರೀತಿ ಪ್ರೇಮ ಎಂದು ಕೂಡ ಇಬ್ಬರು ಜೊತೆಯಲ್ಲಿ ಸುತ್ತಾಡಿದ್ದರು. ಹೀಗೆ ಮದುವೆಯಾದ ಸೋನಾರಿಕಾ ಸದ್ಯ ಮದುವೆಯಾದ ಎರಡು ವರ್ಷದ ನಂತರ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಗರ್ಭಿಣಿಯಾದ ವಿಚಾರವನ್ನು ತಮ್ಮ ಸಮಸ್ತ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಬೇಬಿ ಬಂಪ್ ಫೋಟೊ ಕೂಡ ಹಂಚಿಕೊಂಡಿದ್ದಾರೆ.

ಸದ್ಯ ಹಲವಾರು ಜನ ಸೋನಾರಿಕಾ ಅವರಿಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಆರತಿ ಸಿಂಗ್.. ಬಾಲಿವುಡ್‌ನ ಪ್ರಖ್ಯಾತ ನಟ ವಿಕ್ರಾಂತ್ ಮೆಸ್ಸಿ ಸೇರಿ ಕಿರುತೆರೆ ಮತ್ತು ಬೆಳ್ಳಿತೆರೆಯ ಹಲವಾರು ಕಲಾವಿದರು ಸೋನಾರಿಕಾ ಮತ್ತು ವಿಕಾಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ.. ಇದೇ ಸಮಯದಲ್ಲಿ ಕೆಲವರು ಸೋನಾರಿಕಾ ಹಾಕಿಕೊಂಡ ಬಿಕಿನಿ ಫೋಟೊ ಕಂಡು ಅಪಸ್ವರ ತೆಗೆಯುತ್ತಿದ್ದಾರೆ.

Devon Ke Dev Mahadev s Parvati is Pregnant Sonarika Bhadoria Shares Heartwarming News

ಹೌದು, ಎಲ್ಲರಿಗೆ ಗೊತ್ತಿರುವಂತೆ ಈಗೀಗ ಪ್ರೆಗ್ನಿಂಟ್ ಆಗುವುದು ಒಂದು ಕಡೆಯಾದರೆ ಅದಾದ ಮೇಲೆ ಮಗು ಆಗುವವರೆಗೂ ತಮ್ಮ ಬೇಬಿ ಬಂಪ್ ನಲ್ಲಿ ಫೋಟೋಗೆ ಪೋಸ್ ಕೊಡುವುದು ಒಂದು ರೀತಿಯ ಟ್ರೆಂಡ್ ಆಗಿ ಹೋಗಿದೆ. ಅದರಲ್ಲೂ ಬಾಲಿವುಡ್ ಮಂದಿ ಇಂತಹ ವಿಚಿತ್ರ ಖಯಾಲಿಗಳಲ್ಲಿ ಎತ್ತಿದ ಕೈ. ಸದ್ಯ ಸೋನಾರಿಕಾ ಕೂಡ ಇದೇ ಟ್ರೆಂಡ್‌ನ್ನು ಫಾಲೋ ಮಾಡಿದ್ದಾರೆ. ತುಂಡುಡುಗೆಯಲ್ಲಿ ಕ್ಯಾಮರಾಗೆ ಖುಷಿಯಿಂದ ಫೋಸ್ ನೀಡಿದ್ದಾರೆ. ಆದರೆ ಇವರ ಈ ಖುಷಿ ಕೆಲವರ ಕಣ್ಣು ಕೆಂಪಾಗಿಸಿದೆ.

ಇದಕ್ಕೆ ಪುರಾವೆ ಎನ್ನುವಂತೆ ಟ್ರೋಲ್ ಹೆಸರಿನಲ್ಲಿ ಸದ್ಯ ಹಲವಾರು ಜನ ಸೋನಾರಿಕಾ ಅವರ ಕಾಲೆಳೆಯುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ಮತ್ತೂ ಕೆಲವರು ಎಂದಿನಂತೆ ಅಸಹ್ಯ-ಅಶ್ಲೀಲ ಮತ್ತು ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಡೆದುಕೊಳ್ಳುತ್ತಿದ್ದಾರೆ.

ಇನ್ನುಳಿದಂತೆ 2023ರಲ್ಲಿ ವಿಕಾಸ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಆ ನಂತರ 2024ರಲ್ಲಿ ಮದುವೆಯಾದ ಸೋನಾರಿಕಾ ಈ ವರ್ಷದ ಆರಂಭದಲ್ಲಿ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವದ ಸಮಯದಲ್ಲಿ ಮದುವೆಯ ಕೆಲ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಮ್ಮ ಜೀವನದಲ್ಲಿ ಎಲ್ಲರ ಬದುಕಿನಲ್ಲಿರುವಂತೆ ಹಲವು ಏರಿಳಿತಗಳಿರಬಹುದು. ಆದರೆ ಎದುರಾದ ಈ ಅಗ್ನಿ ಪರೀಕ್ಷೆಗಳನ್ನು ನಾವು ಧೈರ್ಯವಾಗಿ ಎದುರಿಸಿದ್ದೇವೆ.. ಉತ್ತೀರ್ಣರಾಗಿದ್ದೇವೆ.. ನೀನೆ ಮೊದಲು, ನೀನೆ ಕೊನೆ..ಒಂದು ದಶಕದ ನಮ್ಮ ಲವ್ ಸ್ಟೋರಿಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದರು.

More from Filmibeat

English summary
Actress Sonarika Bhadoria, famous for her role as Parvati in Devon Ke Dev Mahadev, has announced her pregnancy. Read more about her exciting news and see the stunning photos.
Read more about: pregnant pregnancy ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X