»   » 'ದೇವ್ರಂಥ ಮನುಷ್ಯ'ನ ಟೀಸರ್ ರಿಲೀಸ್! ಪ್ರಥಮ್ ಡೈಲಾಗ್ ಗೆ ತಲೆ ಗಿರಗಿಟ್ಲೆ

'ದೇವ್ರಂಥ ಮನುಷ್ಯ'ನ ಟೀಸರ್ ರಿಲೀಸ್! ಪ್ರಥಮ್ ಡೈಲಾಗ್ ಗೆ ತಲೆ ಗಿರಗಿಟ್ಲೆ

Posted By:
Subscribe to Filmibeat Kannada

'ಬಿಗ್ ಬಾಸ್ ವಿನ್ನರ್' ಒಳ್ಳೆ ಹುಡುಗ ಪ್ರಥಮ್ ನಾಯಕ ನಟನಾಗಿ ಸ್ಯಾಂಡಲ್ ವುಡ್ ಬ್ಯುಸಿಯಾಗಿರುವುದು ಎಲ್ಲರಿಗೂ ಗೊತ್ತಿದೆ. ಪ್ರಥಮ್ ಅಭಿನಯದ ಮೊದಲ ಚಿತ್ರ 'ದೇವ್ರಂಥ ಮನುಷ್ಯ' ಶೂಟಿಂಗ್ ಭರದಿಂದ ಸಾಗುತ್ತಿದೆ.

ಹೀಗೆ ಟೈಟಲ್ ನಿಂದ ಗಮನ ಸೆಳೆದಿದ್ದ 'ದೇವ್ರಂಥ ಮನುಷ್ಯ' ಈಗ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಿದೆ. ಪ್ರಥಮ್ ತಮ್ಮ ಸ್ಟೈಲ್ ನಲ್ಲೇ ಭರ್ಜರಿ ಡೈಲಾಗ್ ಹೊಡೆದಿದ್ದು ಕುತೂಹಲ ಮೂಡಿಸಿದೆ. ಅಂದ್ಹಾಗೆ, ಪ್ರಥಮ್ ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಪೂರ್ಣಿಮಾ ಮತ್ತು ಬೆತ್ತನಗೆರೆ ಖ್ಯಾತಿಯ ನಯನ ಹೀರೋಯಿನ್ ಆಗಿ ಬಣ್ಣ ಹಚ್ಚಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ಕಿರಿಕ್ ಕೀರ್ತಿ ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.['ದೇವ್ರಂಥ ಮನುಷ್ಯ' ಪ್ರಥಮ್ ಗೆ ಇಬ್ಬರು ನಾಯಕಿಯರು]

Devrantha Manushya Movie Teaser Released

ಕಿರಿಣ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಮಂಜುನಾಥ್, ಸುರೇಶ್ ಮತ್ತು ವೆಂಕಟ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಅರುಣ್ ಸುರೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ರಾಜೇಶ್ ರಾಮನಾಥ್ ಅವರ ಸಂಗೀತವಿದೆ. ಇನ್ನು ಜುಲೈ ತಿಂಗಳಲ್ಲಿ 'ದೇವ್ರಂಥ ಮನುಷ್ಯ'ನನ್ನ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.['ಬಿಗ್ ಬಾಸ್' ಪ್ರಥಮ್ ಬಗ್ಗೆ ಬಂತು ಬಿಗ್ ಬ್ರೇಕಿಂಗ್ ನ್ಯೂಸ್.!]

'ದೇವ್ರಂಥ ಮನುಷ್ಯ' ಚಿತ್ರದ ಟೀಸರ್ ಇಲ್ಲಿದೆ ನೋಡಿ

English summary
Biggboss Kannada 4 Winner, Kannada Actor Pratham Starring Devrantha Manushya Movie Teaser Released. The Movie Directed by Kiran Shetty

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X