ರಚಿತಾ ರಾಮ್ ಜೊತೆ ಲಿಪ್ ಲಾಕ್ ಮಾಡಬೇಕು ಎಂದ ಆ ನಟ ಇವರೇ!

By Naveen

Recommended Video

ನಟಿ ರಚಿತಾ ರಾಮ್ ಜೊತೆ ಈ ನಟ ಲಿಪ್ ಲಾಕ್ ಮಾಡಬೇಕಂತೆ | Filmibeat Kannada

ಸಿನಿಮಾ ಅಂದಮೇಲೆ ಕಿಸ್ಸಿಂಗ್ ದೃಶ್ಯಗಳು ಸಾಮಾನ್ಯ. ಬಾಲಿವುಡ್ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇನ್ನೂ ಆ ಮಟ್ಟಿನ ಮುತ್ತಿನ ಮಳೆಯನ್ನು ಸುರಿಸಿದ ಸಿನಿಮಾ ಬಂದಿದ್ದು ತೀರಾ ಕಡಿಮೆ. ಆದರೆ ಇದೀಗ ಕನ್ನಡದ ನಟರೊಬ್ಬರು ಲಿಪ್ ಲಾಕ್ ಬಗ್ಗೆ ಮಾತನಾಡಿದ್ದಾರೆ. ನಟಿ ರಚಿತಾ ರಾಮ್ ಜೊತೆಗೆ ಆನ್ ಸ್ಕ್ರೀನ್ ಲಿಪ್ ಲಾಕ್ ಮಾಡಬೇಕು ಎಂದು ಹೇಳಿದ್ದಾರೆ.

ಸದ್ಯ ಲಿಪ್ ಲಾಕ್ ಬಗ್ಗೆ ಮಾತನಾಡಿರುವುದು ಬೇರೆ ಯಾರು ಅಲ್ಲ ಡಾಲಿ ಅಲಿಯಸ್ ಧನಂಜಯ್. ಧನಂಜಯ್ ಇದ್ದಕ್ಕಿದ್ದ ಹಾಗೆ ಲಿಪ್ ಲಾಕ್ ಬಗ್ಗೆ ಮಾತನಾಡುವುದಕ್ಕು ಒಂದು ಕಾರಣ ಇದೆ. 'ಟಗರು' ಸಿನಿಮಾದಲ್ಲಿ ನಟಿಸಿದ್ದ ಧನಂಜಯ್, ವಸಿಷ್ಟ ಮತ್ತು ಮಾನ್ವಿತಾ ಹರೀಶ್ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಟಗರು ಶಿವ ಶಿವರಾಜ್ ಕುಮಾರ್ ಕೇಳಿರುವ ತರ್ಲೆ ಪ್ರಶ್ನೆಗಳಿಗೆ ಡಾಲಿ, ಚಿಟ್ಟೆ ಉತ್ತರ ನೀಡಿದ್ದಾರೆ. ಅದರಲ್ಲಿಯೂ ಲಿಪ್ ಲಾಕ್ ದೃಶ್ಯದ ಬಗ್ಗೆ ಧನಂಜಯ್ ಯಾವುದೇ ಮುಜುಗರ, ಸಂಕೋಚ ಇಲ್ಲದೆ ಮಾತನಾಡಿದ್ದಾರೆ. ಮುಂದೆ ಓದಿ...

ಲಿಪ್ ಲಾಕ್

ಲಿಪ್ ಲಾಕ್

ಕಾರ್ಯಕ್ರಮದ ಕೊನೆಯ ಸುತ್ತಿನಲ್ಲಿ ಶಿವಣ್ಣ ''ಆನ್ ಸ್ಕ್ರೀನ್ ನಲ್ಲಿ ನಿಮಗೆ ಯಾರ ಜೊತೆಗೆ ಲಿಪ್ ಲಾಕ್ ಮಾಡಬೇಕು ಅಂತ ಆಸೆ ಇದೆ.?'' ಎಂದು ಧನಂಜಯ್ ಗೆ ಪ್ರಶ್ನೆ ಕೇಳಿದರು. ಆಗ ಧನಂಜಯ್ ದೀಪಿಕಾ ಪಡುಕೋಣೆ ಎಂದು ಹೇಳಿದರು. ಮತ್ತೆ ಶಿವಣ್ಣ ''ಓಕೆ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ, ಆದರೆ ಕನ್ನಡದಲ್ಲಿ ಯಾರು?'' ಎಂದು ಹೇಳಿದರು. ಯಾರ ಹೆಸರು ಹೇಳಲಿ ಎಂದು ಯೋಚನೆ ಮಾಡಿದ ಧನಂಜಯ್ ಕೊನೆಗೆ ರಚಿತಾ ರಾಮ್ ಅವರ ಹೆಸರನ್ನು ತೆಗೆದುಕೊಂಡರು.

ಕ್ಯೂಟೆಸ್ಟ್ ನಟಿ - ಶ್ರದ್ಧಾ ಶ್ರೀನಾಥ್

ಕ್ಯೂಟೆಸ್ಟ್ ನಟಿ - ಶ್ರದ್ಧಾ ಶ್ರೀನಾಥ್

''ಕನ್ನಡದಲ್ಲಿ ನಿಮ್ಮ ಪ್ರಕಾರ ಕ್ಯೂಟೆಸ್ಟ್ ನಟಿ ಯಾರು'' ಎಂದು ಶಿವಣ್ಣ ಮತ್ತೊಂದು ಪ್ರಶ್ನೆ ಕೇಳಿದರು. ಆಗ ಧನಂಜಯ್ ಪಟ್ ಅಂತ ಶ್ರದ್ಧಾ ಶ್ರೀನಾಥ್ ಎಂದು ಹೇಳಿದರು. ಎಷ್ಟೊ ಹುಡುಗರ ಕ್ರಶ್ ಆಗಿರುವ 'ಯೂ ಟರ್ನ್' ಹುಡುಗಿ ಶ್ರದ್ಧಾ ಶ್ರೀನಾಥ್ ಡಾಲಿಯ ಮನಸ್ಸನ್ನು ಕೂಡ ಕದ್ದಿದ್ದಾರೆ.

ರಮ್ಯಾಗೆ ಕಿಸ್

ರಮ್ಯಾಗೆ ಕಿಸ್

''ಕನ್ನಡದ ನಟಿಯರಲ್ಲಿ ಯಾರಿಗೆ ನೀವು ಹಗ್ ಮಾಡುತ್ತೀರಾ, ಯಾರಿಗೆ ಕಿಸ್ ಕೊಡುತ್ತೀರ, ಮತ್ತು ಯಾರ ಹತ್ತಿರ ರಾಖಿ ಕಟ್ಟಿಸಿಕೊಳ್ಳುತ್ತೀರಾ?'' ಎಂಬ ಶಿವಣ್ಣನ ಪ್ರಶ್ನೆಗೆ ಧನಂಜಯ್ ಪಕ್ಕದಲ್ಲಿಯೇ ಇದ್ದ ಮಾನ್ವಿತಾ ತೋರಿಸಿ ''ನಾನು ಮಾನ್ವಿತಾ ಅವರನ್ನು ಹಗ್ ಮಾಡುತ್ತೇನೆ. ರಮ್ಯಾ ಅವರಿಗೆ ಕಿಸ್ ಕೊಡುತ್ತೇನೆ. ಮತ್ತು ರಶ್ಮಿಕಾ ಮಂದಣ್ಣ ಅವರಿಂದ ರಾಖಿ ಕಟ್ಟಿಸಿಕೊಳ್ಳುತ್ತೇನೆ'' ಎಂದು ಉತ್ತರಿಸಿದರು. ರಾಖಿಯ ಬಗ್ಗೆ ಧನಂಜಯ್ ಹೇಳಿದ ಜಾಣ್ಮೆಯ ಉತ್ತರ ಕೇಳಿ ಶಿವಣ್ಣ ಸಖತ್ ಖುಷಿ ಆದರು.

ಗ್ಲಾಮರಸ್ ನಟಿ - ಶ್ರದ್ಧಾ ಶ್ರೀನಾಥ್

ಗ್ಲಾಮರಸ್ ನಟಿ - ಶ್ರದ್ಧಾ ಶ್ರೀನಾಥ್

'ಶೃತಿ ಹರಿಹರನ್, ಪಾರುಲ್ ಯಾದವ್, ರಚಿತಾ ರಾಮ್, ಶ್ರದ್ಧಾ ಶ್ರೀನಾಥ್ ಹಾಗೂ ಮಾನ್ವಿತಾ ಹರೀಶ್' ಈ ನಟಿಯರನ್ನು ಅವರ ಗ್ಲಾಮರ್ ಗೆ ತಕ್ಕಂತೆ ರಾಂಕ್ ನೀಡಿ ಎಂಬ ಪ್ರಶ್ನೆಗೆ ಧನಂಜಯ್ 'ಶ್ರದ್ಧಾ ಶ್ರೀನಾಥ್, ಶೃತಿ ಹರಿಹರನ್, ಮಾನ್ವಿತಾ ಹರೀಶ್, ರಚಿತಾ ರಾಮ್ ಮತ್ತು ಪಾರುಲ್ ಯಾದವ್' ಎಂದು ಹೇಳಿದರು. ಧನಂಜಯ್ ಪ್ರಕಾರ ಗ್ಲಾಮರ್ ನಲ್ಲಿ ಶ್ರದ್ಧಾ ಶ್ರೀನಾಥ್ ಮೊದಲ ಸ್ಥಾನ ಪಡೆದರೆ, ಪಾರುಲ್ ಯಾದವ್ ಕೊನೆಯ ಸ್ಥಾನ ಪಡೆದರು.

ನಟಿ ಶ್ರದ್ಧಾ ಶ್ರೀನಾಥ್

ನಟಿ ಶ್ರದ್ಧಾ ಶ್ರೀನಾಥ್

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಹೇಳಿದ ಎರಡು ಮುಖ್ಯ ಪ್ರಶ್ನೆಗಳಿಗೆ ಧನಂಜಯ್ ನಟಿ ಶ್ರದ್ಧಾ ಶ್ರೀನಾಥ್ ಅವರ ಹೆಸರು ತೆಗೆದುಕೊಂಡರು. ಧನಂಜಯ್ ಅವರಿಗೆ ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಗ್ಲಾಮರಸ್ ಮತ್ತು ಕ್ಯೂಟೆಸ್ಟ್ ನಟಿ ಆಗಿದ್ದಾರೆ ಎಂಬುದು ಈ ಮೂಲಕ ತಿಳಿಯಿತು. ಇನ್ನು ಧನಂಜಯ್ ತಮ್ಮ ಇಷ್ಟದ ನಟಿ ಶ್ರದ್ಧಾ ಶ್ರೀನಾಥ್ ಜೊತೆಗೆ ಸಿನಿಮಾ ಮಾಡುವ ಕಾಲ ಯಾವಾಗ ಬರುತ್ತೋ ನೋಡಬೇಕು.

More from Filmibeat

English summary
Dhananjay spoke about Rachita Ram in Star Suvarna's new show 'No1 yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X