ಆರ್‌ಸಿಬಿ ಕ್ರಿಕೆಟಿಗನ ಮಾಜಿ ಪತ್ನಿಗೆ ಬಲೆ ಬೀಸಿದ ಬಿಗ್ ಬಾಸ್ ? ವಿಚ್ಛೇದನದ ರಹಸ್ಯ ಬಯಲಾಗುತ್ತಾ ?

'ಬಿಗ್ ಬಾಸ್' ಹಲವರ ಕನಸಿನ ಕಾರ್ಯಕ್ರಮ. ಹೇಗಾದರೂ ಮಾಡಿ 'ಬಿಗ್ ಬಾಸ್‌' ಮನೆಯನ್ನು ಪ್ರವೇಶ ಮಾಡಬೇಕೆಂದು ಹಲವರು ಪ್ರತಿ ಬಾರಿ ಅಂದುಕೊಳ್ಳುತ್ತಾರೆ. ಆ ದಿಸೆಯಲ್ಲಿ ಪ್ರಯತ್ನವನ್ನು ಕೂಡ ಮಾಡುತ್ತಾರೆ. ಆದರೆ ಈ ಯೋಗ ಎಲ್ಲರಿಗೆ ಕೂಡಿ ಬರುವುದಿಲ್ಲ. ಬದಲಿಗೆ ಬಿಗ್ ಬಾಸ್ ಮನೆಗೆ ಹೋಗಲೇಬಾರದು ಎಂದುಕೊಂಡವರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶ ಹುಡುಕಿಕೊಂಡು ಹೋಗುತ್ತೆ.

ಇದಕ್ಕೆ ಈ ಹಿಂದೆ ಹಲವಾರು ಉದಾಹರಣೆಗಳು ಕೂಡ ಇವೆ. ಈ ಬಾರಿ ಕೂಡ ಇಂತಹದ್ದೇ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಸ್ಫರ್ಧಿಗಳ ವಿಚಾರದಲ್ಲಿ ಅನೇಕರು ಈಗಾಗಲೇ ಅನೇಕರು ಹಾಕಿರುವ ಲೆಕ್ಕಾಚಾರ ತಲೆ ಕೆಳಗಾಗಬಹುದೆನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹಿಂದಿಯ ಖ್ಯಾತ ನಟ ರಾಮ್ ಕಪೂರ್ ಅವರನ್ನು ಬಿಗ್ ಬಾಸ್‌ ಮನೆಯಲ್ಲಿ ನೋಡಲು ಹಲವರು ಆಸೆ ವ್ಯಕ್ತಪಡಿಸಿದ್ದರು.

dhanashree-verma-set-to-ignite-bigg-boss-19-will-yuzvendra-chahals-ex-wife-spill-divorce-secrets

ಆದರೆ.. ಖುದ್ದು ರಾಮ್ ಕಪೂರ್ ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ 20 ಕೋಟಿ ನೀಡಿದರೂ ಕೂಡ ಬಿಗ್ ಬಾಸ್‌ ಮನೆಯನ್ನು ನಾನು ಪ್ರವೇಶಿಸಲಾರೆ ಎಂದು ಹೇಳಿದ್ದಾರೆ. ಹೀಗಿರುವಾಗ ಇದೀಗ ಭಾರತದ ಖ್ಯಾತ ಕ್ರಿಕೆಟ್ ಪ್ಲೇಯರ್ ಯುಜ್ವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಹೆಸರು ಅಂತೆ-ಕಂತೆಯ ಸಂತೆಯಲ್ಲಿ ಸದ್ಯ ಕೇಳಿ ಬರಲು ಶುರುವಾಗಿದೆ.

ಹೌದು, ಬಿಗ್ ಬಾಸ್ ಹಿಂದಿ ಸೀಸನ್ 19ಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಆಗಸ್ಟ್ 29ರಿಂದ ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಶುರುವಾಗಲಿದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಇದರ ನಡುವೆ ಈಗ ಧನಶ್ರೀ ವರ್ಮಾ ಹೆಸರು ಇದೇ ಬಿಗ್ ಬಾಸ್ ಮನೆಯ ಸುತ್ತ ಮುತ್ತ ಕೇಳಿ ಬರಲು ಶುರುವಾಗಿದೆ.

ಬಿಗ್ ಬಾಸ್‌ನ ತಂಡದವರೇ ಈ ಕುರಿತು ಸುಳಿವನ್ನು ನೀಡಿರುವುದಾಗಿ ನ್ಯೂಸ್ 18 ವರದಿಯನ್ನು ಮಾಡಿದ್ದು ಯುಜ್ವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯನ್ನು ತೋರಿಸಿದ್ಧಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಸಂಭಾವನೆಯ ಕುರಿತು ಅಂತಿಮ ಹಂತದ ಮಾತುಕಥೆ ನಡೆಯುತ್ತಿದೆ ಎಂದು ಕೂಡ ಉಲ್ಲೇಖಿಸಲಾಗಿದೆ.

dhanashree-verma-set-to-ignite-bigg-boss-19-will-yuzvendra-chahals-ex-wife-spill-divorce-secrets

ನಿಜಕ್ಕೂ ಧನಶ್ರೀ ವರ್ಮಾ ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಾರಾ ಎನ್ನುವ ಪ್ರಶ್ನೆಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆಯಾದರು ಸದ್ಯ ಈ ಸುದ್ದಿ ಕೇಳಿ ಹಲವರು ಎಕ್ಸಾಯಟ್ ಆಗಿದ್ದಾರೆ. ಯುಜ್ವೇಂದ್ರ ಚಹಾಲ್ ಜೊತೆ ದಾಂಪತ್ಯ ಮುರಿದು ಬೀಳಲು ನಿಜವಾದ ಕಾರಣವೇನು ಎನ್ನುವ ಪ್ರಶ್ನೆಗೆ ಉತ್ತರ ಧನಶ್ರೀ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಸಿಗಬಹುದು ಎಂದು ಮಾತನಾಡುತ್ತಿದ್ದಾರೆ.

ಅಂದ್ಹಾಗೇ ಈ ಹಿಂದೆ ಧನಶ್ರೀ ವರ್ಮಾ 'ಖತರೋ ಕೆ ಕಿಲಾಡಿ'ಯ ಹದಿನೈದನೇ ಸೀಸನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ. ಆ ಸುದ್ದಿ ಸುಳ್ಳಾಯ್ತು. ಹೀಗಾಗಿ ಈ ಸುದ್ದಿಯಾದರು ನಿಜವಾಗುತ್ತಾ ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿದೆ. ಇನ್ನುಳಿದಂತೆ ಈ ಬಾರಿಯ ಹಿಂದಿಯ ಬಿಗ್ ಬಾಸ್ 5 ತಿಂಗಳು ನಡೆಯಲಿದ್ದು ಸಲ್ಮಾನ್ ಖಾನ್ ಮಾತ್ರ ನಿರೂಪಣೆ ಮಾಡುವುದಿಲ್ಲ ಬದಲಿಗೆ ಫರ್ಹಾ ಖಾನ್.. ಕರಣ್ ಜೋಹರ್ ಮತ್ತು ಅನಿಲ್ ಕಪೂರ್ ವಿಶೇಷ ನಿರೂಪಕರಾಗಿ ಬರುವ ಸಾಧ್ಯತೆ ಇದೆ ಎಂದು ''ದಿ ಇಂಡಿಯನ್ ಎಕ್ಸ್‌ಪ್ರೆಸ್‌'' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಕಿರುತೆರೆಗಿಂತ ಮೊದಲು ಓಟಿಟಿಯಲ್ಲಿ ಪ್ರಸಾರವಾಗಲಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ಗಂಟೆಯ ಮೊದಲು ಜೀಯೋ ಹಾಟ್‌ ಸ್ಟಾರ್‌ನಲ್ಲಿ ಕಾರ್ಯಕ್ರಮ ಶುರುವಾಗಲಿದೆ ಎಂದು ಕೂಡ ಸುದ್ದಿ ಚಾಲ್ತಿಯಲ್ಲಿದೆ. ಈ ಎಲ್ಲ ಅಂತೆ-ಕಂತೆಗಳಿಗೆ ಉತ್ತರ ಸದ್ಯದಲ್ಲಿಯೇ ಸ್ಪಷ್ಟವಾಗಿ ಸಿಗುವ ನಿರೀಕ್ಷೆ ಇದೆ.

More from Filmibeat

English summary
Dhanashree Verma likely to join Bigg Boss 19! The popular dancer and Yuzvendra Chahal's ex-wife could bring explosive revelations to the reality show. Find out more
Read more about: bigg boss cricket ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X