Dhanush Gowda: ಪಂಚೆ ಉಟ್ಟು ಧನುಷ್ ಗೌಡ ಫೋಟೋಶೂಟ್.. ಸಿಕ್ಸ್ ಪ್ಯಾಕ್ ನೋಡಿ ಫ್ಯಾನ್ಸ್ ಫಿದಾ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಧನುಷ್ ಗೌಡ. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಧನುಷ್ ಗೌಡ 'ಮನೆ ಮೆಚ್ಚಿದ ಅಳಿಯ'ನ ಜೊತೆಗೆ 'ಮನೆ ಮೆಚ್ಚಿದ ಮಗ' ಆಗಿಯೂ ಗುರುತಿಸಿಕೊಂಡ ಹ್ಯಾಂಡ್ ಸಮ್ ಹುಡುಗ.
ಹೌದು, ಕಳೆದ ವರ್ಷ ನಡೆದ ಅನುಬಂಧ ಅವಾರ್ಡ್ಸ್‌ನಲ್ಲಿ ಧನುಷ್ ಗೌಡ 'ಮನೆ ಮೆಚ್ಚಿದ ಅಳಿಯ' ಪ್ರಶಸ್ತಿ ಪಡೆದಿದ್ದರು. ಧನುಷ್ ಗೌಡ ಈ ಬಾರಿಯ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್‌ನಲ್ಲಿ 'ಮನೆ ಮೆಚ್ಚಿದ ಮಗ' ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಧನುಷ್ ಗೌಡ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲೂ ಕೊಂಚ ಆ್ಯಕ್ಟಿವ್ ಜಾಸ್ತಿ ಅನ್ನಿ.

ಇದೀಗ ಧನುಷ್ ಗೌಡ ಹಾಕಿರುವಂತಹ ಫೋಟೋ ಕಂಡು ನೆಟ್ಟಿಗರು ಹೌಹಾರಿದ್ದಾರೆ. ತಮ್ಮ ಫಿಟ್ನೆಸ್ ಬಗ್ಗೆ ಸಾಕಷ್ಟು ಕಾಳಜಿಯನ್ನು ತೋರುತ್ತಿರುವ ಧನುಷ್ ಗೌಡ ಆಗಾಗ ತಮ್ಮ ಸಿಕ್ಸ್ ಪ್ಯಾಕ್ ತೋರಿಸುವಂತಹ ಫೋಟೋಗಳನ್ನೇ ಹಂಚಿಕೊಳ್ಳುತ್ತಿರುತ್ತಾರೆ. ಅಂದ ಹಾಗೇ ಈ ಬಾರಿಯೂ ಅವರು ಸಿಕ್ಸ್ ಪ್ಯಾಕ್ ತೋರಿಸುವಂತಹ ಫೋಟೋವನ್ನೇ ಅಪ್ ಲೋಡ್ ಮಾಡಿದ್ದು ಅದರಲ್ಲಿ ಅವರು ಪಂಚೆಯುಟ್ಟಿದ್ದೇ ವಿಶೇಷ.
ಪಂಚೆಯುಟ್ಟುಕೊಂಡಿರುವ ಧನುಷ್ ಗೌಡ ಅವರು ಶರ್ಟ್ ಹಾಕದೇ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಗ್ಗದಷ್ಟು ದಪ್ಪದ ಚಿನ್ನದ ಸರವನ್ನು ಕುತ್ತಿಗೆಯಲ್ಲಿ ಧರಿಸಿರುವ ಧನುಷ್ ಗೌಡ ಅವರು ಕೈಗೆ ಚಿನ್ನದ ಕಡಗವನ್ನು ಕೂಡಾ ಹಾಕಿದ್ದಾರೆ. ಈ ರೀತಿಯಲ್ಲಿ ತಮ್ಮ ಸಿಕ್ಸ್ ಪ್ಯಾಕ್ ಅನ್ನು ಪ್ರದರ್ಶನ ಮಾಡಿರುವ ಧನುಷ್ ಗೌಡಗೆ ಕಮೆಂಟ್‌ಗಳ ಸುರಿಮಳೆಯೇ ಹರಿದುಬರುತ್ತಿದೆ.
'ಜಸ್ಟ್ ಲುಕಿಂಗ್ ಲೈಕ್ ಎ ವಾವ್' ಎಂಬ ಕಮೆಂಟ್ ಜೊತೆಗೆ ತುಂಬಾ ಹಾಟ್ ಆಗಿ ಕಾಣುತ್ತಿದ್ದೀರಿ, ಫೋಟೋಶೂಟ್ ಸೂಪರ್ ಆಗಿದೆ, ಪಂಚೆಯನ್ನು ಚೆನ್ನಾಗಿ ಕಾಣಿಸುತ್ತಿದ್ದೀರಿ, ಬಾಡಿ ತುಂಬಾ ಸಕತ್ ಆಗಿದೆ, ದೃಷ್ಟಿ ಬೀಳಬಹುದು ಹೀಗೆ ಕಮೆಂಟ್ ಗಳ ಮೇಲೆ ಕಮೆಂಟ್ ಬಂದಿದೆ. ಇನ್ನು ಫಿಟ್ನೆಸ್ ವಿಚಾರದಲ್ಲಿ ಕೊಂಚವೂ ರಾಜಿ ಮಾಡಿಕೊಳ್ಳದ ಧನುಷ್ ಗೌಡ ಅವರು ನಾನು ಬಾಡಿ ಬಿಲ್ಡ್ ಮಾಡಲು ಹಾರ್ಡ್ ವರ್ಕ್ ಕಾರಣ ಎಂದು ಹೇಳಿದ್ದಾರೆ.

ಇಂಜಿನಿಯರಿಂಗ್ ಪದವೀಧರರಾಗಿರುವ ಧನುಷ್ ಗೌಡ ಅವರು ತಮ್ಮ ಹಾಗೂ ಮಾವನ ಆಸೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ನಟನೆಗೆ ಕಾಲಿಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ನಟನಾಗುವ ನಿರ್ಧಾರ ಮಾಡಿದ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ 'ಟೆಂಟ್' ಸಿನಿಮಾ ಸೇರಿ ನಟನೆಯ ಆಗು ಹೋಗುಗಳನ್ನು ತಿಳಿದುಕೊಂಡರು. ತದ ನಂತರ 'ಗೀತಾ' ಧಾರಾವಾಹಿಯ ವಿಜಯ್ ಆಗಿ ಕಿರುಪರದೆಯತ್ತ ಮುಖ ಮಾಡಿದ ಧನುಷ್ ಗೌಡ ಅವರು ತಮ್ಮ ನಟನೆಯ ಮೂಲಕವೇ ಗುರುತಿಸಿಕೊಂಡಿರುವ ಹ್ಯಾಂಡ್ ಸಮ್ ಹುಡುಗ.


Click it and Unblock the Notifications











