ಕಾವ್ಯಾ ಶೈವ ಜೊತೆ ಸಂಬಂಧ ; ಸಿಡಿದೆದ್ದ ಧನುಷ್ ಗೌಡ

ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.

ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಒಂದು ಕಡೆ ಚಿತ್ರರಂಗದಲ್ಲಿನ ಮಹಿಳೆಯರಿಗೆ, ಕೊಡಬಾರದ ಕಾಟ ಕೊಡುತ್ತಾರೆ. ಕೇಳಬಾರದ ಪ್ರಶ್ನೆಗಳನ್ನು ಕೇಳುತ್ತಾರೆ. ಚಾರಿತ್ಯ್ರ ಹರಣ ಕೂಡ ಮಾಡ್ತಾರೆ.

Dhanush Gowda Fires Back at Vicious Second Wife Trolls Targeting Kavya Shaiva

ಇದಕ್ಕೆ ಒಂದು ಉದಾಹರಣೆ ಎಂಬಂತೆ ಕೆಲ ದಿನಗಳ ಹಿಂದೆ ತಮ್ಮ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಿಮ್ಮ ಮನದಲ್ಲಿರುವ ಪ್ರಶ್ನೆ ಕೇಳಿದರೆ ಉತ್ತರ ನೀಡುವುದಾಗಿ ಹೇಳಿದ್ದರು.

ಅದ್ರಂತೆ ಹಲವರು ಪ್ರಶ್ನೆಗಳನ್ನು ಕೇಳಿದರು ಕೂಡ. ಆದರೆ ಇದೇ ಸಮಯದಲ್ಲಿ ವಿಕೃತ ಮನಸ್ಸಿನ ಒಬ್ಬ ವ್ಯಕ್ತಿಯೊಬ್ಬ ಕಾವ್ಯ ಶೈವಗೆ ಇಲ್ಲಸಲ್ಲದ ಪ್ರಶ್ನೆ ಕೇಳಿದ್ದ. ಬೇಕು ಬೇಕಂತಲೇ ಕೆರಳಿಸಿದ್ದ. ಕಾವು, ನೀವು ಧನುಷ್​ ಅವರ 2ನೇ ಹೆಂಡತಿ ಅಂತೆ ಹೌದಾ ಎಂದು ಪ್ರಶ್ನೆ ಮಾಡಿದ್ದ.

ಇದಕ್ಕೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಕಾವ್ಯ ತಿರುಗೇಟು ನೀಡಿದ್ದರು. ಸಾರಿ. ನಿಮ್ಮ ಸಹೋದರಿ ಅವರ ಎರಡನೆಯ ಪತ್ನಿ ಎಂದು ಕೇಳಿದ್ದೇನೆ. ಕೇಳಲು ಎಷ್ಟು ಚೆನ್ನಾಗಿರತ್ತೆ ಅಲ್ವಾ ಎಂದು ಪ್ರಶ್ನಿಸಿದ್ದರು. ಇಂಥ ಪ್ರಶ್ನೆ ಕೇಳುವುದರಿಂದ ಏನು ಖುಷಿ ಸಿಗುತ್ತದೆ, ಸಾಕು ನಿಲ್ಲಿಸಿ, ನಾವೂ ಮನುಷ್ಯರೇ ಎಂದು ಕೆಂಡ ಕಾರಿದ್ದರು.

ಇದೀಗ ಇದೇ ವಿಚಾರಕ್ಕೆ ಧನುಷ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡಿಗರಾಗಿ‌ ನಾವು ಒಬ್ಬರನ್ನೊಬ್ಬರು ಬೆಳೆಸುವ ಗುಣ ಬೆಳೆಸಿಕೊಳ್ಳಬೇಕೆ ಹೊರತು ಈ ತರಹದ ಕೆಲಸ ಮಾಡಬಾರದು ಎಂದು ಬುದ್ದಿಮಾತು ಹೇಳಿದ್ದಾರೆ.

dhanush-gowda-fires-back-at-vicious-second-wife-trolls-targeting-kavya-shaiva

ಈ ಕುರಿತು ''ವಿಶ್ವವಾಣಿ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಧನುಷ್ ಗೌಡ, ಮಾತಾಡೋರು ಮಾತಾಡ್ತಾರೆ, ಎಲ್ಲದಕ್ಕೂ ನಾವು ಮಾತಾಡ್ತಾ ಇದ್ದರೆ, ಎಷ್ಟು ಅಂತ ಮಾತಾಡೋದು ಎಂದು ಹೇಳಿದ್ದಾರೆ.

ನಮ್ಮನ್ನು ಪ್ರೀತಿ ಮಾಡೋರಿಗೆ, ನಮಗೆ ಆಶೀರ್ವಾದ ಮಾಡೋರಿಗೆ ನಾವು ಪ್ರೀತಿ ಕೊಡಬಹುದು ಆದರೆ ಈ ರೀತಿ ನೆಗೆಟಿವ್‌ ಕಾಮೆಂಟ್‌ ಹಾಕೋರಿಗೆ ಏನೂ ಉತ್ತರ ಕೊಡೋದೇ ಬೇಕಾಗಿಲ್ಲ ಎಂದು ಹೇಳಿರುವ ಧನುಷ್ ಗೌಡ, ಮೌನವಾಗಿರುವುದೇ ಒಳ್ಳೆಯದು ಎಂದಿದ್ದಾರೆ.ನಮ್ಮ ಕೆಲಸ ಮಾತಾಡಬೇಕು. ಯಾರು ಯಾರು ನಮಗೆ ಕೆಟ್ಟ ಕಾಮೆಂಟ್ಸ್‌ ಹಾಕ್ತಾರೋ ಅವರಿಗೂ ಇಷ್ಟ ಆಗುವಂತ ಕೆಲಸ ಮಾಡಬೇಕು, ಮಾಡ್ತೀನಿ ಎಂದು ಹೇಳಿದ್ದಾರೆ.

ಮುಂದುವರೆದು ನನ್ನ ಬಗ್ಗೆ ಮಾತಾಡಲಿ, ಇನ್ನೊಬ್ಬ ಹೆಣ್ಣುಮಗಳ ಬಗ್ಗೆ ಮಾತಾಡ್ತಾರೆ. ನನಗೂ ಒಂದು ಫ್ಯಾಮಿಲಿ ಇದೆ. ಅವರಿಗೂ ಒಂದು ಫ್ಯಾಮಿಲಿ ಇದೆ ಎಂದು ಹೇಳಿರುವ ಧನುಷ್ ಗೌಡ,ಅವರು ಕೂಡ ಮುಂದೆ ಮದುವೆ ಆಗಬೇಕಾಗಿರುತ್ತೆ,ಒಬ್ಬರ ಬಗ್ಗೆ ಮಾತನಾಡಬೇಕಾದರೆ, ಸ್ವಲ್ಪ ನೋಡಿಕೊಂಡು ಮಾತನಾಡಿ ಎನ್ನುವುದಷ್ಟೇ ನನ್ನ ಮನವಿ ಎಂದು ಹೇಳಿದ್ದಾರೆ.

ಕನ್ನಡ ಇಂಡಸ್ಟ್ರೀಯಲ್ಲಿ ಯಾರಿಗೆ ಸಪೋರ್ಟ್‌ ಮಾಡಿದ್ರು ನನಗೆ ತುಂಬಾ ಅಂದರೆ ತುಂಬಾ ಖುಷಿ, ಕನ್ನಡ ಇಂಡಸ್ಟ್ರೀ ಬೆಳಿಬೇಕು, ಕನ್ನಡದವರು ಬೆಳಿಬೇಕು, ಆದರೆ, ಇನ್ನೊಬರ ಬಗ್ಗೆ ಕೆಟ್ಟ ಕಾಮೆಂಟ್‌ ಹಾಕೋದು, ಕಾಲೆಳೆಯುವುದನ್ನ ಸ್ವಲ್ಪ ಕಡಿಮೆ ಮಾಡೋಣ ಎಂದು ಹೇಳಿರುವ ಧನುಷ್ ಗೌಡ, ಕನ್ನಡದವರು ಕನ್ನಡದವರನ್ನ ಬೆಳೆಸೋಣ ಎಂದು ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕಾವ್ಯಾ ಜೊತೆ ಕೂಡ‌ ಮಾತನಾಡಿದೆ, ಇದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಕೂಡ ನಾನು ಹೇಳಿದೆ ಎಂದಿರುವ ಧನುಷ್ ಗೌಡ, ನಮ್ಮ ಮನೆಯಲ್ಲಿಯೂ ಕೂಡ ತುಂಬಾ ಬೇಜಾರು ಮಾಡ್ಕೊಂಡರು ಆದಷ್ಟು ನಾನು ಸಮಾಧಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. ದಯವಿಟ್ಟು ಕೆಟ್ಟ ಕಾಮೆಂಟ್‌ ಕಡಿಮೆ ಮಾಡಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.

English summary
Dhanush Gowda has had enough! Watch how the star shut down a "second wife" troll targeting Kavya Shaiva. A must-read response on respecting women in the industry.`
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X