ಕನಸುಗಳು ನನಸಾಗಲು ಶ್ರಮಪಟ್ಟ 'ದಿಯಾ' ಹೀರೊ ದೀಕ್ಷಿತ್ ಶೆಟ್ಟಿ: 'ದಸರಾ' ಬಳಿಕ ತೆಲುಗಿನಲ್ಲಿ ಬ್ಯುಸಿ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ'ಯಲ್ಲಿ ನಾಯಕ ಅರ್ಜುನ್ ಆಗಿ ಅಭಿನಯಿಸಿದ್ದ ನಟ ದೀಕ್ಷಿತ್ ಶೆಟ್ಟಿ ಇದೀಗ ಸಿನಿಮಾ ರಂಗದಲ್ಲಿ ಬಹಳಷ್ಟು ಬ್ಯುಸಿ. ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಕಾಲಿಟ್ಟು ಮುಂದೆ ನಾಗಿಣಿ ಧಾರಾವಾಹಿಯ ಮೂಲಕ ನಾಯಕನಾಗಿ ಭಡ್ತಿ ಪಡೆದ ದೀಕ್ಷಿತ್ ಶೆಟ್ಟಿ 'ದಿಯಾ' ಸಿನಿಮಾದ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಹಾರಿದರು.

ಟ್ರಾಜಿಕ್ ಲವ್ ಸ್ಟೋರಿ ಆಗಿದ್ದಂತಹ 'ದಿಯಾ' ಸಿನಿಮಾ ಬಹಳಷ್ಟು ಫೇಮಸ್ ಆಯಿತು. ಇದರಲ್ಲಿಯೂ ಹೆಸರು ಮಾಡಿದ ನಟ ದೀಕ್ಷಿತ್ ಶೆಟ್ಟಿಗೆ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ತಮ್ಮ 'ದಸರಾ' ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು. 'ದಸರಾ' ಚಿತ್ರದಲ್ಲಿ ದಿಯಾ ಚಿತ್ರಕ್ಕಿಂತ ತದ್ವಿರುದ್ಧವಾದಂತಹ ರೋಲ್‌ನಲ್ಲಿ ದೀಕ್ಷಿತ್ ಶೆಟ್ಟಿ ತಮ್ಮ ನಟನ ಕೌಶಲ್ಯವನ್ನು ತೋರಿಸಿ ಇನ್ನಷ್ಟು ತೆಲುಗು ಹಾಗೂ ಕನ್ನಡದಲ್ಲಿ ಜನಪ್ರಿಯತೆ ಪಡೆದಿದ್ದಾರೆ.

Dheekshith Shetty said that Dasara movie gave break to my film Journey

ತೆಲುಗು ಸಿನಿಮಾಗಳಲ್ಲಿ ಬ್ಯುಸಿ

ಅದಾದ ಮೇಲೆ ಈಗ ದೀಕ್ಷಿತ್ ಶೆಟ್ಟಿಗೆ ತೆಲುಗು ಸಿನಿಮಾ ಇಂಡಸ್ಟ್ರಿ ಬಾ ಬಾ ಎಂದು ಕೈ ಬಿಸಿ ಕರೆದಿದೆಯಂತೆ. ಮೇಲಿಂದ ಮೇಲೆ ಒಳ್ಳೊಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡುವುದರಲ್ಲಿ ಬ್ಯುಸಿ ಇದ್ದಾರೆ. ಕನ್ನಡ ಕಿರುತೆರೆಯಿಂದ ಆರಂಭವಾಗಿ ಇದು, ಇದೀಗ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವುದು ನಟ ದೀಕ್ಷಿತ್ ಶೆಟ್ಟಿಗೆ ಬಹಳ ಖುಷಿ ತಂದಿದೆ.

ಕನಸುಗಳು ನನಸಾಗಲು ಶ್ರಮಪಟ್ಟ ದೀಕ್ಷಿತ್ ಶೆಟ್ಟಿ

ಒಂದು ಕಾಲದಲ್ಲಿ ಪ್ರತಿದಿನ ಆಡಿಶನ್ ಕೊಡಲು ಬಿಎಂಟಿಸಿ ಬಸ್‌ನಲ್ಲಿ ಓಡಾಡುತ್ತಿದ್ದರು ದೀಕ್ಷಿತ್ ಶೆಟ್ಟಿ. ಆದರೆ, ಈಗ ಆಫೀಸ್‌ನಲ್ಲಿ ಕೂತು ಬೇರೆ ಬೇರೆ ಕಥೆಗಳನ್ನು ಕೇಳಿ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಇದರ ಹಿಂದೆ ಬಹಳಷ್ಟು ಜನರ ಪ್ರೀತಿ ವಿಶ್ವಾಸ ಸಹಕಾರ ಜೊತೆಗೆ ಅವರ ಶ್ರಮವೂ ಇದೆ. ದೀಕ್ಷಿತ್ ಕಂಡಿರುವ ದೊಡ್ಡ ದೊಡ್ಡ ಕನಸುಗಳು, ಇದಿನ್ನೂ ಪುಟ್ಟ ಮೆಟ್ಟಿಲುಗಳಷ್ಟೇ ಎಂದು ನಂಬಿದ್ದಾರೆ. ಹಾಗೂ ಅವರು ಕನಸುಗಳತ್ತ ಶ್ರಮಪಡಲು ಸದಾ ಸಿದ್ಧನಿದ್ದಾರೆ.

ಉತ್ತಮ ಪಾತ್ರಗಳ ಹುಡುಕಾಟದಲ್ಲಿದ್ದೇನೆ

ದೀಕ್ಷಿತ್‌ಗೆ ಯಾವುದೇ ರೀತಿಯ ಜಾನರ್ ರಿಪೀಟ್ ಮಾಡಲು ಇಷ್ಟವಿಲ್ಲ. ಹಾಗಾಗಿ ಬೇರೆ ಬೇರೆ ವಿಭಿನ್ನವಾದ ಸ್ಕ್ರಿಪ್ಟ್ ಗಳ ಆಯ್ಕೆಯಲ್ಲಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಇಂಡಸ್ಟ್ರಿಯಿಂದ ಬಹಳಷ್ಟು ಆಫರ್ ಗಳು ಬರುತ್ತಿದೆ. ಉತ್ತಮ ಪಾತ್ರಗಳ ಬೇಟೆಯಲ್ಲಿ ದೀಕ್ಷಿತ್ ಅವರಿದ್ದಾರೆ.

Dheekshith Shetty said that Dasara movie gave break to my film Journey

ವೆಬ್ ಸಿರೀಸ್ ನಲ್ಲೂ ಮೋಡಿ

ಸದ್ಯಕ್ಕೆ ನಟ ದೀಕ್ಷಿತ್ ಶೆಟ್ಟಿ ಅವರ 'ಕೆಟಿಎಂ' ಹಾಗೂ 'ಬ್ಲಿಂಕ್' ಎಂಬ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದೆ. ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಅವರ ಆಸೆ ಇನ್ನು ಹಾಗೆ ಉಳಿದಿದೆಯಂತೆ. ಇದೆರಡೇ ಅಲ್ಲದೆ, ಇನ್ನೂ ಒಂದಷ್ಟು ಚಿತ್ರಗಳು ಕೈಗೆ ಸಿಕ್ಕಿದ್ದು ಆದಷ್ಟು ಬೇಗ ಅದರ ಬಗ್ಗೆ ಮಾಹಿತಿ ಕೊಡಲಿದ್ದಾರಂತೆ. ಜೊತೆಗೆ ಎರಡು ವೆಬ್ ಸೀರೀಸ್‌ನಲ್ಲೂ ಮುಗಿಸಿ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ದೀಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಹೀರೊ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

More from Filmibeat

English summary
Dheekshith Shetty said that Dasara movie gave break to my film Journey, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X