For Quick Alerts
  ALLOW NOTIFICATIONS  
  For Daily Alerts

  ಟಿವಿಯಲ್ಲಿ ಬರ್ತಿದೆ 'ಪೊಗರು': ಕೊನೆಗೂ ಬಹಿರಂಗವಾಯ್ತು ಪ್ರಸಾರದ ದಿನಾಂಕ ಮತ್ತು ಸಮಯ

  |

  ಸ್ಯಾಂಡಲ್ ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯ ಪೊಗರು ಸಿನಿಮಾ ರಿಲೀಸ್ ಆಗಿ ಎರಡು ತಿಂಗಳಾಗಿದ್ದು, ಆಗಲೇ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಕೊರೊನಾ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ತೆರೆಗೆ ಬಂದ ಮೊದಲ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ.

  ಇದೀಗ ಟಿವಿಯಲ್ಲಿ ನೋಡಿ ಎಂಜಾಯ್ ಮಾಡುವ ಸಮಯ ಬಂದಿದೆ. ಅಂದಹಾಗೆ ಪೊಗರು ಸಿನಿಮಾ ಟಿವಿಯಲ್ಲಿ ಪ್ರಸಾರವಾಗುತ್ತೆ ಎಂದು ತಿಂಗಳ ಹಿಂದೆಯೇ ಬಹಿರಂಗ ಪಡಿಸಿದ್ದರು. ಆದರೆ ಯಾವ ದಿನ ಮತ್ತು ಸಮಯದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಪೊಗರು ಪ್ರಸಾರದ ದಿನಾಂಕ ಮತ್ತು ಸಮಯ ರಿವೀಲ್ ಆಗಿದೆ.

  2021ರ ಕ್ವಾಟರ್ ರಿಪೋರ್ಟ್: ಗೆದ್ದಿದ್ದು ಯಾರು, ದುಡ್ಡು ಮಾಡಿದ್ದು ಯಾರು?

  ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗಿದ್ದು, ಇದೇ ತಿಂಗಳು 13ರಂದು ಸಂಜೆ 6 ಗಂಟೆಗೆ ಪೊಗರು ದರ್ಶನವಾಗಲಿದೆ. ಯುಗಾದಿ ಹಬ್ಬದ ವಿಶೇಷವಾಗಿ ಪೊಗರು ಸಿನಿಮಾ ಪ್ರಸಾರ ಮಾಡಲಾಗುತ್ತಿದೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಮಾಡಿಕೊಂಡವರು ಮನೆಯಲ್ಲೇ ಕುಟುಂಬದವರ ಜೊತೆ ಹಬ್ಬ ಮುಗಿಸಿ ಆರಾಮಾಗಿ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.

  ಅಂದಹಾಗೆ ಪೊಗರು ಸಿನಿಮಾದ ಸ್ಯಾಟಲೈಟ್ ರೈಟ್ಸ್ ಕನ್ನಡದ ಅತೀ ದೊಡ್ಡ ಮನರಂಜನಾ ವಾಹಿನಿ ಉದಯ ಟಿವಿಗೆ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಕಳೆದ ಕೆಲವು ದಿನಗಳಿಂದ ಪೊಗರು ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ಪ್ರೋಮೋ ಮೂಲಕ ಅಭಿಮಾನಿಗಳ ಕುತೂಹಲ ನಿರೀಕ್ಷೆ ಹೆಚ್ಚಿಸಿದ್ದರು.

  ಕೊನೆಗೂ ಪೊಗರು ನೋಡುವ ಸಮಯ ರಿವೀಲ್ ಆಗಿದೆ. ನಂದ ಕಿಶೋರ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗೀತಾ ಟೀಚರ್ ಆಗಿ ರಶ್ಮಿಕಾ ಗಮನ ಸೆಳೆದಿದ್ದಾರೆ. ಇನ್ನು ಚಿತ್ರದ ಖರಾಬು ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.

  English summary
  Dhruva Sarja Starrer Pogaru Kannada Movie Television Premiere on April 13 at 6 pm on the occasion of Ugadi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X