Deekshith Shetty: 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ ತೆಲುಗಿನಲ್ಲಿ ಫುಲ್ ಬ್ಯುಸಿ!

By ಪ್ರಿಯಾ ದೊರೆ

'ನಾಗಿಣಿ' ಧಾರಾವಾಹಿಯಲ್ಲಿ ಚಾಕ್ಲೆಟ್ ಬಾಯ್ ಆಗಿ ಎಂಟ್ರಿಕೊಟ್ಟಿದ್ದ ನಟ ದೀಕ್ಷಿತ್ ಶೆಟ್ಟಿ ಈಗ ಎಲ್ಲಿದ್ದಾರೆ..? ಏನ್ ಮಾಡ್ತಿದ್ದಾರೆ.? ಅವಕಾಶಗಳಿಂದ ವಂಚಿತರಾದ, ದೀಕ್ಷಿತ್ ನಟನೆಯನ್ನೇ ಬಿಟ್ಟು ಬಿಟ್ಟರಾ..? ಇಲ್ಲವೇ, ಸಿನಿಮಾ, ಧಾರಾವಾಹಿ ಎಲ್ಲಾ ಬಿಟ್ಟು ಮತ್ತೆ ರಂಗಭೂಮಿಯತ್ತ ಮುಖ ಮಾಡಿದ್ರಾ..? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಟ ದೀಕ್ಷಿತ್ ಶೆಟ್ಟಿ 'ನಾಗಿಣಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಲೋಕಕ್ಕೆ ಪಾದಾರ್ಪಣೆ ಮಾಡಿದರು. 'ನಾಗಿಣಿ' ಧಾರಾವಾಹಿಯಲ್ಲಿ ದೀಪಿಕಾ ದಾಸ್ ಜೋಡಿಯಾಗಿ ಅರ್ಜುನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ 'ದಿಯಾ' ಚಿತ್ರದ ಮೂಲಕವೂ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು. 'ದಿಯಾ' ಚಿತ್ರದಲ್ಲಿನ ದೀಕ್ಷಿತ್ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.

ಆದರೆ, ಇದಾದ ಮೇಲೆ ದೀಕ್ಷಿತ್ ಶೆಟ್ಟಿಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅವಕಾಶ ಸಿಗಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಸರಿ ಸುಮಾರು ಆರು ತಿಂಗಳ ಕಾಲ ಕೆಲಸವಿಲ್ಲದೇ ಒದ್ದಾಡಿದ್ದರು. ಈ ಬಗ್ಗೆ ಸ್ವತಃ ದೀಕ್ಷಿತ್ ಮಾಹಿತಿ ಹಂಚಿಕೊಂಡಿದ್ದರು. ಆದರೆ ಈಗ ದೀಕ್ಷಿತ್ ತುಂಬಾ ಬ್ಯುಸಿಯಾಗಿದ್ದಾರೆ.

Dia Movie Fame Actor Deekshith Shetty Busy With Movies In Telugu

ಉಷಾ ಭಂಡಾರಿಯವರ ನಟನಾ ಶಾಲೆಯಿಂದ ದೀಕ್ಷಿತ್ ನಟನೆಯನ್ನು ಆರಂಭಿಸಿದವರು. ಕಳೆದ ವರ್ಷ ಮತ್ತೆ ರಂಗಭೂಮಿಗೆ ಪ್ರವೇಶಿಸಿದ ದೀಕ್ಷಿತ್ ಅವರು ಹಲವು ನಾಟಕಗಳಿಗೆ ಬಣ್ಣ ಹಚ್ಚಿದರು. 'ನಾವಲ್ಲ', 'ಮಾಮೂಷಿ' ಹೀಗೆ ಕೆಲ ನಾಟಕಗಳಲ್ಲಿ ಅಭಿನಯಿಸಿದರು. ರಂಗಭೂಮಿಯತ್ತ ಸದಾ ಒಲವಿಟ್ಟುಕೊಂಡಿರುವ ದೀಕ್ಷಿತ್, "ನನ್ನ ಮನಸ್ಸು ಯಾವಾಗಲೂ ಈ ಕಡೆಯೇ ತುಡಿಯುತ್ತಿರುತ್ತದೆ. ಇಲ್ಲಿಗೆ ಬಂದಾಗಲೆಲ್ಲಾ ನಾನು ಹೊಸತನ್ನು ಕಲಿಯುತ್ತೇನೆ. ನಾಟಕಕ್ಕೆ ಒಂದು ಶಿಸ್ತಿರುತ್ತದೆ" ಎಂದು ಹೇಳಿದ್ದರು.

ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು 'ದಿಯಾ' ಚಿತ್ರದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದ ಸ್ಪುರದ್ರೂಪಿ ನಟ ದೀಕ್ಷಿತ್ ಶೆಟ್ಟಿ ಈಗ ತೆಲುಗಿನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಟ ನಾನಿ ಸಹೋದರಿ ದೀಪ್ತಿ ಘಂಟಾ ನಿರ್ದೇಶನದ ಚಿತ್ರದಲ್ಲಿ ದೀಕ್ಷಿತ್ ನಟಿಸಿದರು. ದೀಕ್ಷಿತ್ ಜೊತೆಗೆ ಆಕಾಂಕ್ಷಾ ಸಿಂಗ್ ತೆರೆ ಹಂಚಿಕೊಂಡಿದ್ದು, 'ಮೀಟ್ ಕ್ಯೂಟ್' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. 'ದಿಯಾ' ಚಿತ್ರ ತೆಲುಗಿಗೆ ಡಬ್ ಆಗಿತ್ತು. ಈ ಚಿತ್ರವನ್ನು ನೋಡಿ ದೀಕ್ಷಿತ್‌ಗೆ ಈ ಅವಕಾಶ ಸಿಕ್ಕಿದೆ. ಇಷ್ಟೇ ಅಲ್ಲದೇ, ದೀಕ್ಷಿತ್ ಕೈಯಲ್ಲಿ ಹಲವು ಚಿತ್ರಗಳಿವೆ.

'ಬ್ಲಿಂಕ್' ಎಂಬ ಚಿತ್ರದಲ್ಲೂ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. 'ಬ್ಲಿಂಕ್' ಚಿತ್ರದ ಮೂರನೇ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಟೀಸರ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ರವಿಚಂದ್ರ ಎ.ಜೆ ಎಂಬುವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಶ್ರೀನಿಧಿ 'ಬೆಂಗಳೂರು ಕಥೆ' ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಇನ್ನು ದೀಕ್ಷಿತ್ ಕೈಯಲ್ಲಿ ಕೆಲ ಚಿತ್ರಗಳಿದ್ದು, ಫುಲ್ ಬ್ಯುಸಿಯಾಗಿದ್ದಾರೆ. 'ಸಾಗುತ ದೂರ ದೂರ', 'ಕೆಟಿಎಂ', 'ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು' ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗಿನಲ್ಲಿ 'ಮೀಟ್ ಕ್ಯೂಟ್' ಅಲ್ಲದೇ, 'ಮುಗ್ಗುರು ಮೋಸಗಾಳ್ಳು' ಎಂಬ ಚಿತ್ರದಲ್ಲಿ ನಟಿಸಿದ್ದು. ಕಳೆದ ವರ್ಷ ತೆರೆ ಕಂಡಿತ್ತು. ಇದೇ ಚಿತ್ರವನ್ನು ಕನ್ನಡಕ್ಕೆ 'ಆಣಿ ಮುತ್ತುಗಳು' ಎಂದು ಡಬ್ ಮಾಡಲಾಗಿದೆ.

More from Filmibeat

English summary
Dia Movie Fame Actor Deekshith Shetty Busy With Movies In Telugu And Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X