ಬಿಗ್ ಬಾಸ್‌ನ ಮುದ್ದಾದ ಜೋಡಿಗಳ ಮೇಲೆ ಬಿತ್ತು ವಕ್ರದೃಷ್ಟಿ, ಮದುವೆಯಾಗಲು ಸಿದ್ಧವಾದವರು ಈಗ ದೂರ ದೂರ..!
ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ.
ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇವತ್ತು 'ಐ ಲವ್ ಯೂ' ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಎಲ್ಲವನ್ನೂ ಮರೆತು ಹೊಸ ಬದುಕಿನ ಹುಡುಕಾಟ ನಡೆಸುತ್ತಾರೆ. ಉದಾಹರಣೆಗೆ ಪ್ರಿಯಾಂಕ ಚಾಹರ್ ಚೌಧರಿ ಮತ್ತು ಅಂಕಿತ್ ಗುಪ್ತಾ.

ಹೌದು, ಪ್ರಿಯಾಂಕಾ ಮತ್ತು ಅಂಕಿತ್ ಹಿಂದಿ ಕಿರುತೆರೆಯ ಪ್ರಣಯ ಪಕ್ಷಿಗಳು. 'ಉದಾರಿಯನ್' ಧಾರಾವಾಹಿ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಆ ನಂತರ ಬಿಗ್ ಬಾಸ್‌ನ 16ನೇ ಸೀಸನ್‌ನಲ್ಲಿ ಕೂಡ ಕಾಣಿಸಿಕೊಂಡಿತ್ತು. ಇದೇ ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಪ್ರೀತಿ ಕೂಡ ಚಿಗುರಿತ್ತು. ಬಿಗ್ ಬಾಸ್ ಮನೆಯಲ್ಲಿ ಇಬ್ಬರನ್ನು ನೋಡಿದ್ದ ಅನೇಕರು ಇಬ್ಬರದ್ದು ಹೇಳಿ ಮಾಡಿಸಿದ ಜೋಡಿಯೆನ್ನುವ ಮಾತುಗಳನ್ನಾಡಿದ್ದರು.
ಅಲ್ಲಿಂದ ಇಲ್ಲಿವರೆಗೆ ಹೆಚ್ಚು ಕಡಿಮೆ ಮೂರು ವರ್ಷ ಪ್ರೇಮದ ಅಲೆಯಲ್ಲಿ ತೇಲಿದ ಇಬ್ಬರು ಹಬ್ಬ ಹರಿದಿನದಂದು ಶುಭಾಶಯ ಕೋರುತ್ತಿದ್ದರು. ಆಗಾಗ ಜೊತೆಯಲ್ಲಿ ಕ್ಯಾಮರಾಗೆ ಫೋಸ್ ನೀಡಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು. ಇಬ್ಬರನ್ನು ಮೆಚ್ಚಿದ್ದ ಅಭಿಮಾನಿಗಳು ಇವರನ್ನು Priyankit ಎಂದೇ ಕರೆಯಲು ಶುರು ಮಾಡಿದ್ದರು. ಈ ವರ್ಷ ಇಬ್ಬರು ಮದುವೆಯಾಗುತ್ತಾರೆ ಎಂದು ಅಂದುಕೊಂಡಿದ್ದರು.
ಇಂಥಾ ಪ್ರಿಯಾಂಕ ಮತ್ತು ಅಂಕಿತ್ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಈ ವರ್ಷ ಮದುವೆಯಾಗಲು ಅಣಿಯಾಗಿದ್ದ ಇಬ್ಬರು ಈಗ ದೂರವಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಇವರ ಈ ನಡೆ ಈಗ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಪ್ರಿಯಾಂಕ ಮತ್ತು ಅಂಕಿತ್ ಅವರ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿದೆಯಾ ಎನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ.
ಅಂದ್ಹಾಗೇ ತಾವು ಇಬ್ಬರು ಪ್ರೀತಿ ಮಾಡುತ್ತಿದ್ದೇವೆ ಎಂದು ಈ ಹಿಂದೆ ಪ್ರಿಯಾಂಕ ಚಾಹರ್ ಚೌಧರಿ ಕೂಡ ಹೇಳಿಲ್ಲ. ಈಗ ನಾವು ದೂರವಾಗಿದ್ದೇವೆ ಎಂದು ಕೂಡ ಅಂಕಿತ್ ಹೇಳಿಲ್ಲ. ಆದರೂ ಕೂಡ ಇಬ್ಬರು ಪ್ರೀತಿಯಲ್ಲಿದ್ದರು ಎಂದೇ ವಾದ ಮಾಡುತ್ತಿರುವ ಅನೇಕರು ಸದ್ಯ ಈ ಚೆಂದದ ಜೋಡಿ ದೂರವಾಗಿದ್ದೇಕೆ ಎನ್ನುವ ಕಾರಣವನ್ನು ಹುಡುಕುತ್ತಿದ್ದಾರೆ. ನಿಮ್ಮ ನಡುವೆ ಏನಾಗಿದೆ ಎಂದು ನಮಗೆ ಹೇಳಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಇವರ ದುಂಬಾಲನ್ನು ಅನೇಕರು ಬಿದ್ದಿದ್ದಾರೆ.
ಇನ್ನು ಸಾಮಾನ್ಯವಾಗಿ ಸಂಬಂಧಗಳಲ್ಲಿ ಬಿರುಕು ಮೂಡಿದಾಗ ಪರಸ್ಪರ ಅನ್‌ಫಾಲೋ ಮಾಡುವ ಈ ಸೆಲೆಬ್ರಿಟಿ ಜೋಡಿಗಳು ಆ ನಂತರ ತಮ್ಮ ಪ್ರೇಮದ ಸುಂದರ ನೆನಪುಗಳನ್ನೆಲ್ಲ ಅಳಿಸಿ ಹಾಕುತ್ತಾರೆ. ಜೊತೆಯಾಗಿ ತೆಗೆಸಿಕೊಂಡ ಫೋಟೊಗಳನ್ನೆಲ್ಲ ಡಿಲೀಟ್ ಮಾಡುತ್ತಾರೆ. ಆದರೆ, ಪ್ರಿಯಾಂಕ ಚಾಹರ್ ಚೌಧರಿ ತಮ್ಮ ಹುಡುಗ ಅಂಕಿತ್ ಜೊತೆ ತೆಗೆಸಿಕೊಂಡ ಫೋಟೊಗಳನ್ನು ಇನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಗೇ ಉಳಿಸಿಕೊಂಡಿದ್ದಾರೆ. ಅಂಕಿತ್ ಗುಪ್ತಾ ಕೂಡ ಫೋಟೊಗಳನ್ನಾಗಲಿ ವಿಡಿಯೋಗಳನ್ನಾಗಲಿ ಡಿಲೀಟ್ ಮಾಡಿಲ್ಲ. ಹೀಗಾಗಿಯೇ ಇಬ್ಬರ ನಡುವೆ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯ ಇರಬಹುದು ಹೀಗಾಗಿ ಕೋಪದಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲ ಪಬ್ಲಿಸಿಟಿ ಗಿಮಿಕ್ ಅಷ್ಟೇ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











