ತನ್ನ ಜೀವದ ಗೆಳತಿಯನ್ನೇ ಮದುವೆಯಾದರಾ ನಟಿ ? ಸಲಿಂಗ ವಿವಾಹದ ಫೋಟೊಗಳು ವೈರಲ್..!
ಭಾರತದಲ್ಲಿ ಈಗೀಗ ಸಲಿಂಗ ಪ್ರೇಮ.. ಸಲಿಂಗ ವಿವಾಹಗಳು ಹೆಚ್ಚಾಗುತ್ತಿವೆ. ಗಂಡಿನ ಜೊತೆ ಗಂಡಿನ.. ಹೆಣ್ಣಿನ ಜೊತೆ ಹೆಣ್ಣಿನ ಮದುವೆಗಳು ನಡೆಯುತ್ತಿವೆ. ಸಲಿಂಗ ಸಂಬಂಧ .. ಸಲಿಂಗ ವಿವಾಹ.. ಎಂಬುದು ಭಾರತೀಯತೆ ಅಲ್ಲ.. ಭಾರತದ ಸಂಸ್ಕ್ರತಿಯೂ ಅಲ್ಲ.. ನೈಸರ್ಗಿಕವೂ ಅಲ್ಲ ಬದಲಿಗೆ ಪಾಶ್ಚಾತ್ಯ ದೇಶಗಳಿಂದ ಬಂದ ಸಂಸ್ಕ್ರತಿ ಎಂದು ಅನೇಕರು ವಾದ ಮಾಡಿದರೂ.. ಭಾರತೀಯ ಸಂಸ್ಕ್ರತಿ ಅಲ್ಲದೇ...
ಇರುವುದರಿಂದ ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಬಾರದೆಂದು ಹಿಂದೆ ಕೇಂದ್ರ ಸರ್ಕಾರ ಪ್ರತಿಪಾದಿಸಿದರು ಕೂಡ ಸಲಿಂಗಕಾಮವು ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಕ್ಕೆ ಅವಕಾಶವಿದೆಯೇ ಹೊರತು, ಎಲ್ಲಾ ರೀತಿಯ ಸಂಬಂಧಗಳಿಗೆ ಕಾನೂನಿನ ಮಾನ್ಯತೆ ನೀಡಲೇಬೇಕು ಎಂದೇನಿಲ್ಲ ಎಂದು ಕೂಡ ಹೇಳಿದೆ.

ಇನ್ನು ಇಲ್ಲಿಯವರೆಗೆ ಭಾರತದಲ್ಲಿ ಅನೇಕ ಸಲಿಂಗ ವಿವಾಹಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಯುವಕರು ಮದುವೆಯಾದ ಉದಾಹರಣೆ ಇದೆ.
ಒಡಿಶಾದಲ್ಲಿ ಇಬ್ಬರು ಆದಿವಾಸಿ ಮಹಿಳೆಯರು ತಮ್ಮ ಬುಡಕಟ್ಟು ಸಮುದಾಯದ ಸಂಪ್ರದಾಯದಂತೆ ಮದುವೆಯಾದ ನಿದರ್ಶನ ಕೂಡ ಇದೆ. ಈ ಸಾಲಿಗೆ ಈಗ ಮಲಯಾಳಂನ ನಟಿ ಪ್ರಾರ್ಥನಾ ಕೃಷ್ಣನ್ ಮತ್ತು ಮಾಡೆಲ್ ಅನ್ಸಿಯಾ ಕೂಡ ಸೇರಿಕೊಂಡಿದ್ದಾರಾ ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ.

ಹೌದು, 'ಕೊಡೆಯಿಡ' ಎಂಬ ಧಾರಾವಾಹಿಯ ಮೂಲಕ ಮಲಯಾಳಂ ಪ್ರೇಕ್ಷಕರ ಗಮನ ಸೆಳೆದ ಪ್ರಾರ್ಥನಾ ಕೃಷ್ಣನ್ ನಾಯರ್ ತಮ್ಮ ಆಪ್ತ ಸ್ನೇಹಿತೆಯಾದ ಅನ್ಸಿಯಾ ಜೊತೆಗಿರುವ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ನೋಡುತ್ತಿದ್ದರೆ ಇಬ್ಬರು ಮದುವೆಯಾಗಿದ್ದಾರಾ ಎನ್ನುವ ಅನುಮಾನ ಎಂಥವರಿಗಾದರೂ ಬಂದೇ ಬರುತ್ತೆ.
ಯಾಕೆಂದರೆ .. ದೇವಸ್ಥಾನದಲ್ಲಿ ಪರಸ್ಪರ ತಾಳಿ ಹಾಕುವುದು .. ಹಾರ ಬದಲಾಯಿಸುವುದನ್ನು .. ಪ್ರಾರ್ಥನಾ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕಾಣಬಹುದು. ಇನ್ನು, ಮನಸ್ಸಿನಲ್ಲಿ ವಿಷ ತುಂಬಿದ, ಜನರ ಮುಂದೆ ನಾಟಕವಾಡುವ ಸಂಕುಚಿತ ಮನಸ್ಸುಗಳು ದೂರವಾಗಲಿ ಎಂದು ಪ್ರಾರ್ಥನಾ ಬರೆದುಕೊಂಡಿದ್ದರೆ ಅನ್ಸಿಯಾ ಲೆಸ್ಬಿಯನ್.. ಮೈ ಲವ್.. ಡ್ರೀಮ್ ಕಮ್ ಟ್ರೂ ಎಂಬ ಹ್ಯಾಶ್ ಟ್ಯಾಗ್‌ಗಳನ್ನು ಅನ್ಸಿಯಾ ಉಪಯೋಗಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ಹಿನ್ನೆಲೆ .. ಅನೇಕರು ಸದ್ಯ ಪ್ರಾರ್ಥನಾ ಕೃಷ್ಣನ್ ನಾಯರ್ ಮತ್ತು ಅನ್ಸಿಯಾ ಅವರ ಸಂಬಂಧದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಕೆಲವರು ಇದೆಲ್ಲ ಪ್ರಚಾರದ ಗಿಮಿಕ್ ಎಂದು ಹೇಳಿದರೆ, ಇನ್ನು ಹಲವರು ಇಬ್ಬರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ನಿಮ್ಮ ಮುಂದಿನ ಬದುಕು ಸುಂದರವಾಗಿರಲಿ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಇಬ್ಬರನ್ನು ಸದ್ಯ ಟ್ರೋಲ್ ಮಾಡುತ್ತಿದ್ದಾರೆ.
ಇನ್ನು ಇಬ್ಬರ ಈ ಮದುವೆಯ ಫೋಟೊ ಮತ್ತು ವಿಡಿಯೋ ವೈರಲ್ ಆದ ನಂತರ ಪ್ರಾರ್ಥನಾ ಇದು ಕೇವಲ ಫೋಟೊಶೂಟ್ ಮಾತ್ರ ಎಂದು ಹೇಳಿದ್ದಾರಾದರೂ ಇವರ ಈ ಮಾತನ್ನು ಕೂಡ ಯಾರು ನಂಬುತ್ತಿಲ್ಲ.
ಇನ್ನುಳಿದಂತೆ 'ಕೊಡೆಯಿಡ' ಧಾರಾವಾಹಿಯನ್ನು ಹೊರತು ಪಡಿಸಿದರೆ ಪ್ರಾರ್ಥನಾ ರಾಕ್ಕುಯಿಲ್.. ಮನಿಮುತ್ತು.. ಸೇರಿ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ನಟಿಯಾಗುವ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ಪ್ರಾರ್ಥನಾ ಮಿಂಚಿದ್ದರು. ಇದೇ ಸಮಯದಲ್ಲಿ ಮತ್ತೊಬ್ಬ ಮಾಡೆಲ್ ಆದ ಅನ್ಸಿಯಾ ಅವರ ಜೊತೆ ಸ್ನೇಹ ಬೆಳೆಯಿತು ಆ ಸ್ನೇಹ ಸದ್ಯ ಇಬ್ಬರನ್ನು ಇಲ್ಲಿಯವರೆಗೆ ಕರೆತಂದಿದೆ ಎನ್ನುವ ಮಾತು ಸದ್ಯ ದೇವರ ನಾಡು ಎಂದೇ ಪ್ರಖ್ಯಾತವಾದ ಕೇರಳದಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











