ಬಿಗ್‌ಬಾಸ್ ಮನೆಯಲ್ಲಿ ಗಾಯಕಿ ಮೇಲೆ ಹಲ್ಲೆ: ಮನೆ ಸುರಕ್ಷಿತವಿಲ್ಲ?

ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳು ಸಾಮಾನ್ಯ. ಟಾಸ್ಕ್‌ಗಳೇ ಬಿಗ್‌ಬಾಸ್ ಮನೆಯನ್ನು, ಮನೆಯ ಸದಸ್ಯರನ್ನು ಸಕ್ರಿಯವಾಗಿಡುತ್ತದೆ. ಜನರಿಗೆ ಮನರಂಜನೆ ಒದಗಿಸುವುದು ಸಹ ಇದೇ ಟಾಸ್ಕ್‌ಗಳು.

ಟಾಸ್ಕ್‌ಗಳನ್ನು ನಿರ್ವಹಿಸುವಾಗ ಮನೆ ಸದಸ್ಯರು ಪರಸ್ಪರ ಜಗಳವಾಡುವುದು ಸಹ ಸಾಮಾನ್ಯ. ಕೆಲವೊಮ್ಮೆಯಂತೂ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೂ ಜಗಳಗಳು ಹೋಗುವುದಿದೆ. ಕೈ-ಕೈ ಮಿಲಾಯಿಸಿದ ಉದಾಹರಣೆಯೂ ಇದೆ.

ಆದರೆ ಬಿಗ್‌ಬಾಸ್ ನಿಯಮದ ಪ್ರಕಾರ, ಪರಸ್ಪರ ಕೈ-ಕೈ ಮಿಲಾಯಿಸುವಂತಿಲ್ಲ, ಸ್ಪರ್ಧಿಯೊಬ್ಬರು ಮತ್ತೊಬ್ಬ ಸ್ಪರ್ಧಿಯ ಮೇಲೆ ಹಲ್ಲೆ ಮಾಡುವಂತಿಲ್ಲ. ಆದರೆ ಇದೀಗ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ಆಗಿದೆ ಎಂಬ ಆರೋಪ ಜೋರಾಗಿ ಕೇಳಿಬರುತ್ತಿದೆ.

ಹಿಂದಿ ಬಿಗ್‌ಬಾಸ್‌ ನಲ್ಲಿ ಮಹಿಳೆ ಮೇಲೆ ಹಲ್ಲೆ?

ಹಿಂದಿ ಬಿಗ್‌ಬಾಸ್‌ ನಲ್ಲಿ ಮಹಿಳೆ ಮೇಲೆ ಹಲ್ಲೆ?

ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿರುವ ಹಿಂದಿ ಬಿಗ್‌ಬಾಸ್ ಶೋ ಮೇಲೆ ಇಂಥಹದ್ದೊಂದು ಗುರುತರ ಆರೋಪ ಕೇಳಿಬಂದಿದೆ. ಶೋ ನಲ್ಲಿ ಯುವತಿಯೊಬ್ಬರ ಮೇಲೆ ಮತ್ತೊಬ್ಬ ಸ್ಪರ್ಧಿ ಹಲ್ಲೆ ಮಾಡಿದ್ದಾರೆ. ಆದರೆ ಇದನ್ನು ಆಯೋಜಕರು ಉದ್ದೇಶಪೂರ್ವಕವಾಗಿ ಜನರಿಂದ ಮುಚ್ಚಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಎಲಿಮಿನೇಟ್ ಆದ ಗಾಯಕಿ ಸಾರಾ ಗುರುಪಾಲ್

ಎಲಿಮಿನೇಟ್ ಆದ ಗಾಯಕಿ ಸಾರಾ ಗುರುಪಾಲ್

ಪಂಜಾಬಿ ಗಾಯಕಿ ಸಾರಾ ಗುರುಪಾಲ್ ಅನ್ನು ಬಿಗ್‌ಬಾಸ್ ಮನೆಯಿಂದ ಇತ್ತೀಚೆಗಷ್ಟೆ ಎಲಿಮಿನೇಟ್ ಮಾಡಲಾಯಿತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಸಾರಾ ಗುರುಪಾಲ್ ಎಲಿಮಿನೇಟ್ ಮಾಡಿದ ಕಾರಣ ಆಕೆಯ ಆರೋಗ್ಯ ಎನ್ನಲಾಗುತ್ತಿದೆ.

ಸಾರಾ ಮೇಲೆ ಹಲ್ಲೆ ಮಾಡಿದ ನಟಿ ನಿಕ್ಕಿ ತಂಬೋಲಿ?

ಸಾರಾ ಮೇಲೆ ಹಲ್ಲೆ ಮಾಡಿದ ನಟಿ ನಿಕ್ಕಿ ತಂಬೋಲಿ?

ಟಾಸ್ಕ್ ಒಂದು ನಿರ್ವಹಿಸುತ್ತಿರುವ ವೇಳೆ ಸ್ಪರ್ಧಿ ನಿಕ್ಕಿ ತಂಬೋಲಿ, ಸಾರಾ ಗುರುಪಾಲ್ ಮೇಲೆ ಹಲ್ಲೆ ಮಾಡಿದ್ದಾರೆ ಆಕೆಯ ಕಣ್ಣಿಗೆ ಗಾಯವಾಗಿತ್ತು, ಆಕೆಯನ್ನು ವೈದ್ಯರು ಪರೀಕ್ಷಿಸಿದರಾದರೂ, ಗಾಯ ವಾಸಿಯಾಗದ ಕಾರಣ ಆಕೆಯನ್ನು ಎಲಿಮಿನೇಟ್ ಮಾಡಿ ಹೊರಗೆ ಕಳಿಸಲಾಗಿದೆ. ಆಕೆ ಈಗ ವೈದ್ಯರ ನಿಗಾವಣೆಯಲ್ಲಿದ್ದಾರೆ ಎಂದು ಬಾಲಿವುಡ್‌ನ ಆನ್‌ಲೈನ್ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ಹರಿದಾಡುತ್ತಿವೆ

ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ಹರಿದಾಡುತ್ತಿವೆ

ಇದಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಷ್ಟು ಮಾತ್ರವಲ್ಲದೆ ಪಂಜಾಬ್ ಸಿನಿಮಾ ಉದ್ಯಮದ ಮಂದಿ ಸಹ ಸಾರಾ ಅನ್ನು ಎಲಿಮಿನೇಟ್ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾರಾ ಅನ್ನು ಮತ್ತೆ ಬಿಗ್‌ಬಾಸ್ ಮನೆಯೊಳಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

More from Filmibeat

English summary
Did Punjabi singer Sara Gurpal assaulted by Nikki Tamboli in Hindi Bigg Boss. Sara Gurpal suddenly eliminated from the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X