ಬಿಗ್ ಬಾಸ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಫರ್ಧಿ ಯಾರು, ವಾರಕ್ಕೆ ಸಿಗುವ ಹಣ ಎಷ್ಟು.?
ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮ ಈಗ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಮತ್ತೊಮ್ಮೆ ಶುರುವಾಗಿದೆ. ಕನ್ನಡದ ಜೊತೆ ಜೊತೆಯಲ್ಲಿ ಹಿಂದಿಯಲ್ಲಿ ಕೂಡ ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹೆಚ್ಚೆಚ್ಚು ವೀಕ್ಷಕರ ಗಮನ ಸೆಳೆಯುತ್ತಿದೆ. ಇದರ ನಡುವೆ ಹಿಂದಿ ಬಿಗ್ ಬಾಸ್‌ನಲ್ಲಿ ಭಾಗಿಯಾದ ಸ್ಫರ್ಧಿಗಳ ಸಂಭಾವನೆ ವಿವರ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗಿದೆ.
ಹೌದು, ಆ ಕಡೆ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದೆ. ಈ ಕಡೆ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಹಿಂದಿ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಫರ್ಧಿಗಳ ಸಂಭಾವನೆ ವಿಚಾರ ಮುನ್ನೆಲೆಗೆ ಬಂದಿದೆ. ಬಿಗ್ ಬಾಸ್ ನಲ್ಲಿ ಭಾಗಿಯಾದ ಸ್ಫರ್ಧಿಗಳ ಸಂಭಾವನೆ ಅನೇಕರ ಹುಬ್ಬೇರಿಸಿದೆ.

ಆ ಪೈಕಿ ನೋಡುವುದಾದರೆ ಬಿಗ್ ಬಾಸ್ 18ರಲ್ಲಿ ವಿವಿಯನ್ ಡಿಸೇನಾ ಅವರಿಗೆ ಬಿಗ್ ಬಾಸ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಸಿಗುತ್ತಿದೆ. ವಿವಿಯನ್ ಡಿಸೇನಾ ಅವರಿಗೆ ಪ್ರತಿ ವಾರಕ್ಕೆ ಐದು ಲಕ್ಷ ಸಂಭಾವನೆಯನ್ನು ಹಿಂದಿಯ ಬಿಗ್ ಬಾಸ್ ನೀಡುತ್ತಿದೆ. ಅಂದ್ಹಾಗೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವಿವಿಯನ್ ಡಿಸೇನಾ ಅವರಿಗೆ ಬಿಗ್ ಬಾಸ್ ಆರಂಭವಾದ ಮೊದಲ ದಿನದಿಂದ ಕರೆಯಲಾಗುತ್ತಿತ್ತು. ಆದರೆ ವಿವಿಯನ್ ಡಿಸೇನಾ ಪ್ರತಿ ಸೀಸನ್ ಶುರುವಾಗುವ ಮುನ್ನ ಬಂದ ಅವಕಾಶವನ್ನು ನಿರಾಕರಿಸುತ್ತಾನೇ ಬಂದಿದ್ದರು. ಆದರೆ ಈ ಬಾರಿ ವಿವಿಯನ್ ಡಿಸೋಜಾ ಅವರಿಗೆ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಸಂಭಾವನೆ. ವಾರಕ್ಕೆ ಐದು ಲಕ್ಷ ಸಂಭಾವನೆ ಎಂದ ಕೂಡಲೇ ಹಿಂದೆ ಮುಂದೆ ನೋಡದೇ ಈ ಬಾರಿ ಬಿಗ್ ಬಾಸ್ ಮನೆಗೆ ಬರಲು ವಿವಿಯನ್ ಡಿಸೋಜಾ ಒಪ್ಪಿಕೊಂಡಿದ್ದಾರೆ.
ವಿವಿಯನ್ ಡಿಸೋಜಾ ಹೊರತು ಪಡಿಸಿದರೆ ಬಿಗ್ ಬಾಸ್ ಸೀಸನ್ 18ರಲ್ಲಿ ಶಿಲ್ಪಾ ಶಿರೋಡ್ಕರ್ ಅವರಿಗೆ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ. 90ರ ದಶಕದ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದ ಶಿಲ್ಪಾ ಶಿರೋಡ್ಕರ್ ಮಹೇಶ್ ಬಾಬು ಸಂಬಂಧಿ ಕೂಡ ಹೌದು. ಇಂಥಾ ಶಿಲ್ಪಾ ಶಿರೋಡ್ಕರ್ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ವಾರಕ್ಕೆ ಎರಡೂವರೆ ಲಕ್ಷ ಸಂಭಾವನೆಯನ್ನು ನೀಡಲಾಗುತ್ತಿದೆ. ಅದು ಪ್ರತಿ ವಾರ ಅನ್ನುವುದು ವಿಶೇಷ.
ಹಾಗಂಥ ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರು ಇವರಷ್ಟೇ ಎಂದು ಅಂದುಕೊಳ್ಳುವಂತೆ ಇಲ್ಲ. ಯಾಕೆಂದರೆ ಹಿಂದೆ ಅಂದರೆ ಬಿಗ್ ಬಾಸ್ ಸೀಸನ್ 17ರಲ್ಲಿ ಭಾಗಿಯಾಗಿದ್ದ ಅಕಿಂತಾ ಲೋಖಂಡೆ ಇವತ್ತು ಕೂಡ ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಸ್ಫರ್ಧಿ ಎನ್ನುವ ದಾಖಲೆಯನ್ನು ಹೊಂದಿದ್ದಾರೆ. ಮುಂಬೈ ಮಾಧ್ಯಮಗಳು ವರದಿ ಮಾಡಿರುವಂತೆ ಅಂಕಿತಾ ಲೋಖಂಡೆ ವಾರವೊಂದಕ್ಕೆ ಹನ್ನೆರಡು ಲಕ್ಷ ಸಂಭಾವನೆ ಪಡೆದಿದ್ದಾರೆ. ಹಿಂದಿ ಬಿಗ್ ಬಾಸ್ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆಯನ್ನು ಯಾರು ಪಡೆದಿಲ್ಲ ಅನ್ನುವುದು ವಿಶೇಷ. ಈ ಹಿನ್ನೆಲೆ ಅಂಕಿತಾ ಲೋಖಂಡೆ ಅವರನ್ನು ಹೊರತು ಪಡಿಸಿದರೆ ವಿವಿಯನ್ ಡಿಸೋಜಾ ಅತೀ ಹೆಚ್ಚು ಸಂಭಾವನೆ ಪಡೆದಿರುವ ಸ್ಫರ್ಧಿ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಆ ನಂತರದ ಸ್ಥಾನ ಶಿಲ್ಪಾ ಶಿರೋಡ್ಕರ್ ಅವರ ಪಾಲಾಗಿದೆ ಎನ್ನುವ ವರದಿಯನ್ನು ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿವೆ.


Click it and Unblock the Notifications











