ಸಾವಿಲ್ಲೂ ಸಲಾಮ್ ಹೊಡೆಯುವ ಕೆಲಸ ಮಾಡಿದ ಸುದ್ದಿ ವಾಹಿನಿಯ ಹುಡುಗ
'ಇರುವಷ್ಟು ದಿನ ಯಾರಿಗೂ ಕೇಡು ಬಯಸದೆ, ಖುಷಿ ಖುಷಿಯಾಗಿ ಇರಬೇಕು. ಇರುವಷ್ಟು ದಿನ ಬೇರೆಯವರಿಗೆ ನಮ್ಮ ಕೈನಲ್ಲಿ ಆಗುವ ಸಹಾಯವನ್ನು ಮಾಡಬೇಕು'. ಆದರೆ, ಕೆಲವರು ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಒಳ್ಳೆ ಕೆಲಸ ಮಾಡುತ್ತಾರೆ.
ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯಗಳಲ್ಲಿ ಒಂದಾಗಿರುವ ದಿಗ್ವಿಜಯ ನ್ಯೂಸ್ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ತುಬಾಚಿ ಎಂಬ ಯುವಕ ನಿನ್ನೆ ನಿಧನರಾದರು. ಕೇವಲ 24 ವರ್ಷದ ಈ ಯುವಕನಿಗೆ ಹೃದಯಘಾತ ಆಗಿದ್ದು, ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಅಮಿತ್ ಮೃತರಾದರು.

ಅಮಿತ್ ಆಸೆಯಂತೆ ಆತನ ಅಂಗಾಂಗಗಳನ್ನು ಅವರ ಪೋಷಕರು ದಾನ ಮಾಡಿದ್ದು, ಸಾವಿನಲ್ಲಿಯೂ ಸಲಾಮ್ ಹೊಡೆಯುವ ಕೆಲಸವನ್ನು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಎಂಬ ಗ್ರಾಮದ ಅಮಿತ್ ತಮ್ಮ ತಂದೆ ತಾಯಿಗೆ ಒಬ್ಬನೆ ಮಗನಾಗಿದ್ದರು.
ಕಳೆದ ಒಂದುವವರೆ ವರ್ಷಗಳಿಂದ ಅಮಿತ್ ದಿಗ್ವಿಜಯ ನ್ಯೂಸ್ ಚಾನಲ್ ನ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
More from Filmibeat
English summary
Dighvijay kannada news employee Amith dies of heart attack.


Click it and Unblock the Notifications











