Hitler Kalyana: 'ಹಿಟ್ಲರ್ ಕಲ್ಯಾಣ' ದಿ ಎಂಡ್; ವೀಕ್ಷಕರಿಗೆ ಬೇಸರ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಧಾರಾವಾಹಿ 'ಹಿಟ್ಲರ್ ಕಲ್ಯಾಣ' ಮುಕ್ತಾಯಗೊಂಡಿದೆ. ಬರೋಬ್ಬರಿ 694 ಎಪಿಸೋಡ್‌ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಧಾರಾವಾಹಿ 'ಹಿಟ್ಲರ್ ಕಲ್ಯಾಣ' ವಿಭಿನ್ನ ಕಥೆಯೊಂದಿಗೆ ಕನ್ನಡದ ಕಿರುತೆರೆ ಪ್ರೇಕ್ಷಕರನ್ನು ಮನರಂಜಿಸಿತ್ತು.

ನಟ ದಿಲೀಪ್ ರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬಂದ ಈ ಧಾರಾವಾಹಿ ಹಲವಾರು ತಿರುವುಗಳನ್ನು ಪಡೆದು ಇದೀಗ ಸುಖಾಂತ್ಯವನ್ನು ಕಂಡಿದೆ. ದೊಡ್ಡ ಮನೆಯ ಯಜಮಾನ ಎ ಜೆ ಮುಷ್ಟಿಯಲ್ಲಿರುವ ಮನೆ ಮಂದಿ ಹಾಗೂ ಇತರ ನಿರ್ಧಾರಗಳು, ಸದಾ ಸಿಡುಕಿನಿಂದ ಓಡಾಡುವ ಇವನಿಗೆ ಇನ್ನೊಂದು ಹೆಸರೇ ಹಿಟ್ಲರ್. ಮದುವೆಯಾಗದ ಈ ಹಿಟ್ಲರ್‌ನನ್ನು ಕಾರಣಾಂತರಗಳಿಂದ ವರಿಸುವ ಸಂದರ್ಭ ಲೀಲಾಗೆ ಎದುರಾದಾಗ ಆಕೆ ಹೇಗೆಲ್ಲ ಅದನ್ನು ನಿಭಾಯಿಸುತ್ತಾಳೆ ಹಾಗೂ ಹಿಟ್ಲರ್ ಮನೆತನದ ಯಜಮಾನಿಯಾಗಿ ಹೇಗೆ ಎಲ್ಲವನ್ನು ನಿವಾರಿಸಿಕೊಂಡು ಹೋಗುತ್ತಾಳೆ ಎಂಬುದೇ ಕಥೆಯ ಸಾರಾಂಶ.

Dileep Raj and Malaika Vasupal serial Hitler Kalyana serial ended

ಇದೀಗ ನಿರ್ದೇಶಕರೇ ಧಾರಾವಾಹಿಯ ಅಂತ್ಯದ ಬಗ್ಗೆ ಮಾಹಿತಿ ನೀಡಿದ್ದು ಈ ಪೋಸ್ಟ್ ಗೆ ಹಲವಾರು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. 'ಇಷ್ಟು ಬೇಗ ಧಾರಾವಾಹಿ ಮುಗಿಯಬಾರದಿತ್ತು.' 'ಮುಕ್ತಾಯದ ಪೋಸ್ಟ್ ಹಾಕಿ ನಮ್ಮನ್ನು ಬೇಸರಿಸುತ್ತಿದ್ದೀರಿ..' ಇತ್ಯಾದಿ ಕಮೆಂಟ್ ಗಳ ಮೂಲಕ ಅಭಿಮಾನಿಗಳು, ಈ ಧಾರಾವಾಹಿ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ 'ಹಿಟ್ಲರ್ ಕಲ್ಯಾಣ' ಮೂರು ವರ್ಷಗಳ ಕಾಲ ಧಾರಾವಾಹಿ ವೀಕ್ಷಕರನ್ನು ರಂಜಿಸಿದ್ದಲ್ಲದೆ ಅಭಿಮಾನಿಗಳ ಪ್ರೀತಿ ಹಾಗೂ ಮೆಚ್ಚುಗೆಯನ್ನು ಗಳಿಸಿದೆ. ಆದ್ರೀಗ ದಿಢೀರನೇ ಧಾರಾವಾಹಿಯನ್ನು ಮುಗಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕೆ ಕಾರಣವೇನು ಎಂದು ಹೇಳಿಲ್ಲ.

Dileep Raj and Malaika Vasupal serial Hitler Kalyana serial ended

'ಹಿಟ್ಲರ್ ಕಲ್ಯಾಣ' ಧಾರಾವಾಹಿ ತಾರಾಗಣದಲ್ಲಿ ನಟರಾದ ದಿಲೀಪ್ ರಾಜ್ ಮುಖ್ಯ ಪಾತ್ರವನ್ನು ನಿಭಾಯಿಸಿದರು. ಇನ್ನು ನಟಿ ಮಲೈಕಾ ವಾಸುಪಾಲ್ ಅವರು ಆಯ್ಕೆ ಪಾತ್ರವನ್ನು ನಿಭಾಯಿಸಿದ್ದರು. ಜೊತೆಗೆ ನಟರಾದ ನೇಹಾ ಪಾಟೀಲ್, ನಂದಿನಿ ಮೂರ್ತಿ, ದೀಪ ಕಟ್ಟೆ ಮುಂತಾದವರು ತಮ್ಮ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

More from Filmibeat

English summary
Dileep Raj and Malaika Vasupal serial Hitler Kalyana serial ended
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X