For Quick Alerts
  ALLOW NOTIFICATIONS  
  For Daily Alerts

  'ರಾಧಾ ರಮಣ' ಸೀರಿಯಲ್ ಚೆನ್ನಾಗಿಲ್ಲ: ಒಳ್ಳೆಯವರಿಗೆ ಕಾಲ ಇಲ್ಲ.!

  |

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಇನ್ನೇನು ದೊಡ್ಡ ತಿರುವು ಸಿಗಬೇಕು, ಅಷ್ಟರಲ್ಲಿ ಬಹುಮುಖ್ಯ ವಿಕೆಟ್ ಪತನಗೊಂಡಿದೆ.! ಯಾವುದು ಆಗಬೇಕು ಅಂತ ವೀಕ್ಷಕರು ಇಷ್ಟು ದಿನ ಕಾಯುತ್ತಿದ್ದರೋ, ಅದು ಆಗಿಲ್ಲ. ಬದಲಾಗಿ ಇನ್ನೇನೋ ನಡೆದು ಹೋಗಿದೆ.!

  'ರಾಧಾ ರಮಣ' ಸೀರಿಯಲ್ ನಲ್ಲಿ ಕೆಟ್ಟ ಮನಸ್ಥಿತಿಯ ಸಿತಾರ ದೇವಿಗೆ ಪದೇ ಪದೇ ಜಯ ಸಿಗುತ್ತಿತ್ತು. ಅದು ಈಗಲೂ ಮುಂದುವರೆದಿದೆ. ಒಳ್ಳೆಯ ಮನಸ್ಥಿತಿಯ ದಿನಕರ್ ಇಲ್ಲಿಯವರೆಗೂ ಸೋತು ಸೋತು ಸುಣ್ಣವಾಗಿದ್ದರು. ಈಗ ಸಿತಾರಾ ದೇವಿ ಕುತಂತ್ರಕ್ಕೆ ಬಲಿಯಾಗಿ ದಿನಕರ್ ಸತ್ತೇ ಹೋಗಿದ್ದಾರೆ.

  ''ದಿನಕರ್ ಪಾತ್ರಕ್ಕೆ ಅಂತ್ಯ ಕೊಡಬೇಡಿ, ಸಿತಾರ ದೇವಿ ಮುಖವಾಡ ಕಳಚಿ'' ಅಂತ ವೀಕ್ಷಕರು ಎಷ್ಟೇ ಮನವಿ ಮಾಡಿದರೂ, ನಿರ್ದೇಶಕರು ಮಾತ್ರ ದಿನಕರ್ ರೋಲ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅಲ್ಲಿಗೆ ನಿಜವಾದ 'ಅವನಿ' ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಸಿತಾರಾ ದೇವಿ ಫುಲ್ ಸೇಫ್ ಆಗಿದ್ದಾರೆ. ತಿಂಗಳುಗಳ ಹಿಂದೆ ಕಥೆ ಎಲ್ಲಿ ಇತ್ತೋ, ಈಗ ಅಲ್ಲಿಗೆ ಬಂದು ನಿಂತಿದೆ.

  ದುಷ್ಟರಿಗೆ ಜಯ ಸಿಗುವ ಈ ಸೀರಿಯಲ್ ನೋಡಿ ನೋಡಿ ಬೇಸೆತ್ತಿರುವ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬೇಕಾದರೆ ನೀವೇ ಕೆಲ ಕಾಮೆಂಟ್ ಗಳನ್ನು ನೋಡಿರಿ....

  ಸೀರಿಯಲ್ ಚೆನ್ನಾಗಿಲ್ಲ

  ಸೀರಿಯಲ್ ಚೆನ್ನಾಗಿಲ್ಲ

  ಸೀರಿಯಲ್ ಚೆನ್ನಾಗಿಲ್ಲ, ಒಳ್ಳೆಯವರಿಗೆ ಕಾಲ ಇಲ್ಲ... ಈ ಧಾರಾವಾಹಿಯನ್ನು ಮೊದಲು ಮುಗಿಸಿ... ಕೆಟ್ಟತನಕ್ಕೆ ಒಂದು ಲಿಮಿಟ್ ಇರುತ್ತದೆ... ಅಂತೆಲ್ಲಾ 'ರಾಧಾ ರಮಣ' ಧಾರಾವಾಹಿ ನೋಡುವ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

  ದಿನಕರ್ ಪಾತ್ರವನ್ನು ಕೊಲ್ಲಬೇಡಿ: 'ರಾಧಾ ರಮಣ' ನಿರ್ದೇಶಕರಿಗೆ ವೀಕ್ಷಕರ ಮನವಿ.!ದಿನಕರ್ ಪಾತ್ರವನ್ನು ಕೊಲ್ಲಬೇಡಿ: 'ರಾಧಾ ರಮಣ' ನಿರ್ದೇಶಕರಿಗೆ ವೀಕ್ಷಕರ ಮನವಿ.!

  ಡಬ್ಬಾ ಸೀರಿಯಲ್

  ಡಬ್ಬಾ ಸೀರಿಯಲ್

  ಒಂದು ಒಳ್ಳೆ ತಿರುವು ಸಿಗುವ ಸಮಯದಲ್ಲಿ ಬಹುಮುಖ್ಯ ಕ್ಯಾರೆಕ್ಟರ್ ನೇ ಸಾಯಿಸಿ ಇಡೀ ತಿರುವನ್ನು ಡಮ್ಮಿ ಮಾಡಿದ ನಿರ್ದೇಶಕರಿಗೆ ವೀಕ್ಷಕರು ಛೀಮಾರಿ ಹಾಕುತಿದ್ದಾರೆ. ಈ ಡಬ್ಬಾ ಸೀರಿಯಲ್ ನ ಇನ್ ಮುಂದೆ ನೋಡಲ್ಲ ಅಂತಲೂ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

  ಇನ್ನಾದರೂ ಅವನಿ ತಾಯಿಯ ಮಡಿಲು ಸೇರಲಿ ದೇವರೇ.!ಇನ್ನಾದರೂ ಅವನಿ ತಾಯಿಯ ಮಡಿಲು ಸೇರಲಿ ದೇವರೇ.!

  ಹಿಂಸೆ ಕೊಡಬೇಡಿ

  ಹಿಂಸೆ ಕೊಡಬೇಡಿ

  ಇನ್ಮೇಲಾದ್ರೂ ಅವನಿಗೆ ಹಿಂಸೆ ಕೊಡಬೇಡಿ.. ಮನೆಯವರಿಗೆಲ್ಲಾ ಅವನಿ ಬಗ್ಗೆ ಗೊತ್ತಾಗುವ ಹಾಗೆ ಮಾಡಿ.. ಎಂದು ಕೆಲವು ವೀಕ್ಷಕರು ನಿರ್ದೇಶಕರ ಬಳಿ ಮನವಿ ಮಾಡಿದ್ದಾರೆ.

  ಸಿತಾರ ದೇವಿ ಕುತಂತ್ರ: ದಿನಕರ್ ಗೆ ಕಾದಿದೆ ಗಂಡಾಂತರ.!ಸಿತಾರ ದೇವಿ ಕುತಂತ್ರ: ದಿನಕರ್ ಗೆ ಕಾದಿದೆ ಗಂಡಾಂತರ.!

  ಹೊಸ ಟ್ವಿಸ್ಟ್ ಬರಬಹುದೇ?

  ಹೊಸ ಟ್ವಿಸ್ಟ್ ಬರಬಹುದೇ?

  ಸಿತಾರಾ ದೇವಿಗೆ ಬುದ್ಧಿ ಕಲಿಸಲು ಹೊಸ ಪಾರ್ಟ್ ಬರಬಹುದು.. ದಿನಕರ್ ಫೋನ್ ರಾಧಾ ಕೈಗೆ ಸಿಗಬಹುದು.. ಎಂದು ವೀಕ್ಷಕರು ಈಗಾಗಲೇ ಮುಂದಿನ ಕಥೆ ಬಗ್ಗೆ ಲೆಕ್ಕಾಚಾರ ಶುರು ಮಾಡಿದ್ದಾರೆ.

  ಇಂದು ಏನಾಗುತ್ತೋ.?

  ಇಂದು ಏನಾಗುತ್ತೋ.?

  ಇಷ್ಟು ದಿನಕ್ಕೆ ಇದೀಗ ಮನೆಗೆ ಬಂದಿರುವ ನಿಜವಾದ ಅವನಿ ಅಮ್ಮನ ಪಕ್ಕ ಕೂತಿದ್ದಾಳೆ. ಜೊತೆಗೆ ಅಮ್ಮ ಅಂತ ಬಾಯ್ತುಂಬ ಕರೆದಿದ್ದಾಳೆ. ಕರುಳಿನ ಕೂಗು ಅಮ್ಮನಿಗೆ ಕೇಳಿಸುತ್ತಾ ನೋಡೋಣ..

  English summary
  Radha Ramana serial viewers are unhappy with the latest twist in the serial. Viewers wanted Dinakar character to be alive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X