'ಬಿಗ್ ಬಾಸ್'ಗೆ ಬರಲು ಈ ನಟಿಗೆ ಇಷ್ಟೊಂದು ದುಡ್ಡು ಕೊಡಬೇಕಾ.?

By Harshitha

'ಬಿಗ್ ಬಾಸ್' ಸೀಸನ್ ಮತ್ತೆ ಶುರುವಾಗಿದೆ. ಹಿಂದಿ ಕಿರುತೆರೆಯಲ್ಲಿ 'ಬಿಗ್ ಬಾಸ್' 12ನೇ ಆವೃತ್ತಿಯ ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದೆ. 'ಬಿಗ್ ಬಾಸ್-12' ಕಾರ್ಯಕ್ರಮ ಸೆಪ್ಟೆಂಬರ್ 16 ರಿಂದ ಪ್ರಸಾರ ಆಗಲಿದೆ.

'ಬಿಗ್ ಬಾಸ್-12' ಸ್ಟಾರ್ಟ್ ಆಗಲು ಕೇವಲ ಹತ್ತು ದಿನಗಳು ಮಾತ್ರ ಬಾಕಿ ಇದೆ. ಆದರೂ, ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಮಾತ್ರ ಇನ್ನೂ ಮುಗಿದಿಲ್ಲ.

ಅದ್ರಲ್ಲೂ, ಈ ಬಾರಿ 'ವಿಚಿತ್ರ ಜೋಡಿ' ಕಾನ್ಸೆಪ್ಟ್ ಬೇರೆ. ಹೀಗಾಗಿ, ಚಿತ್ರ-ವಿಚಿತ್ರ ಜೋಡಿಗಳನ್ನ 'ಬಿಗ್ ಬಾಸ್' ತಂಡ ಇನ್ನೂ ತಲಾಶ್ ಮಾಡುತ್ತಿದೆ. ಹೀಗಿರುವಾಗಲೇ, ಓರ್ವ ನಟಿಗೆ 'ಬಿಗ್ ಬಾಸ್' ಕಡೆಯಿಂದ ಆಫರ್ ಹೋಗಿದೆ.

'ಬಿಗ್ ಬಾಸ್' ಸಹವಾಸ ಬೇಡ ಅಂತ ಆ ನಟಿ ಹೇಳಿದರೂ, ಬಹು ದೊಡ್ಡ ಸಂಭಾವನೆ ನೀಡಲು ಕಲರ್ಸ್ ವಾಹಿನಿ ಮುಂದಾಗಿದ್ಯಂತೆ. ಯಾರು ಆ ನಟಿ.? ಆ ನಟಿಗೆ ಆಫರ್ ಮಾಡಿರುವ ಸಂಭಾವನೆ ಎಷ್ಟು ಅಂದ್ರಾ.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ಈಕೆಯೇ ಆ ನಟಿ.!

ಈಕೆಯೇ ಆ ನಟಿ.!

ಹಿಂದಿ ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ಕಾಕರ್ ಗೆ 'ಬಿಗ್ ಬಾಸ್' ಕಡೆಯಿಂದ ಕರೆ ಹೋಗಿದೆ. ಹೇಳಿ ಕೇಳಿ, ದೀಪಿಕಾ ರಿಯಾಲಿಟಿ ಶೋಗಳ ಅಭಿಮಾನಿ. ಆದರೂ, 'ಬಿಗ್ ಬಾಸ್'ನಿಂದ ದೂರ ಇರಲು ದೀಪಿಕಾ ನಿರ್ಧಾರ ಮಾಡಿದ್ದರಂತೆ. ಆದ್ರೀಗ, 'ಬಿಗ್ ಬಾಸ್' ಕೊಡಲು ಒಪ್ಪಿಕೊಂಡಿರುವ ಸಂಭಾವನೆಗೆ ಆಕೆ 'ನೋ' ಅಂತ ಹೇಳಲು ಸಾಧ್ಯವೇ ಇಲ್ಲ ಎನ್ನುತ್ತಿವೆ ಮೂಲಗಳು.

'ಬಿಗ್ ಬಾಸ್' ಕೊಡಲಿರುವ ಹಣ ಎಷ್ಟು.?

'ಬಿಗ್ ಬಾಸ್' ಕೊಡಲಿರುವ ಹಣ ಎಷ್ಟು.?

ನಟಿ ದೀಪಿಕಾಗೆ ಒಂದು ವಾರಕ್ಕೆ 14-15 ಲಕ್ಷ ಕೊಡಲು 'ಬಿಗ್ ಬಾಸ್' ಹಸಿರು ನಿಶಾನೆ ತೋರಿಸಿದ್ದಾರಂತೆ. ಒಂದು ವೇಳೆ ದೀಪಿಕಾ ಗ್ರ್ಯಾಂಡ್ ಫಿನಾಲೆ ವರೆಗೂ ಬಂದು ಬಿಟ್ಟರೆ, ಆಕೆ ಕೋಟ್ಯಧಿಪತಿ ಆಗುವುದು ಗ್ಯಾರೆಂಟಿ.

'ಡ್ಯಾನಿ ಡಿ'ಗೆ ಇನ್ನೂ ಹೆಚ್ಚು.!

'ಡ್ಯಾನಿ ಡಿ'ಗೆ ಇನ್ನೂ ಹೆಚ್ಚು.!

'ನೀಲಿ ಚಿತ್ರಗಳ ರಾಜ' ಡ್ಯಾನಿ ಡಿ ಹಾಗೂ ವಿವಾದಾತ್ಮಕ ನಟಿ ಮಹಿಕಾ ಶರ್ಮಾ ಜೋಡಿಗೆ 'ಬಿಗ್ ಬಾಸ್' ಒಂದು ವಾರಕ್ಕೆ 95 ಲಕ್ಷ ಕೂಡಲು ಒಪ್ಪಿಕೊಂಡಿದೆ ಎಂದು ವರದಿ ಆಗಿದೆ.

ಕಳೆದ ಬಾರಿ ಅತಿ ಹೆಚ್ಚು ಸಂಭಾವನೆ ಪಡೆದಾಕೆ..

ಕಳೆದ ಬಾರಿ ಅತಿ ಹೆಚ್ಚು ಸಂಭಾವನೆ ಪಡೆದಾಕೆ..

'ಬಿಗ್ ಬಾಸ್-11'ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರು ನಟಿ ಹೀನಾ ಖಾನ್. ವಾರಕ್ಕೆ 7-8 ಲಕ್ಷ ಪಡೆದ ಹೀನಾ ಖಾನ್, ಗ್ರ್ಯಾಂಡ್ ಫಿನಾಲೆವರೆಗೂ ಬಂದು 'ರನ್ನರ್ ಅಪ್' ಟ್ರೋಫಿ ಪಡೆದರು.

ಒಂಟಿಯಾಗಿ ಬರ್ತಾರಾ ದೀಪಿಕಾ.?

ಒಂಟಿಯಾಗಿ ಬರ್ತಾರಾ ದೀಪಿಕಾ.?

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ, ಪತಿ ಶೋಯೆಬ್ ಜೊತೆ 'ಬಿಗ್ ಬಾಸ್' ಮನೆಯೊಳಗೆ ಬಂಧಿ ಆಗುತ್ತಾರೆ ಎನ್ನಲಾಗಿತ್ತು. ಆದ್ರೀಗ, ದೀಪಿಕಾ ಮಾತ್ರ 'ಬಿಗ್ ಬಾಸ್'ಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂಬ ಸುದ್ದಿ ಇದೆ.

More from Filmibeat

English summary
TV Actress Dipika Kakar has been offered a huge amount to participate in Bigg Boss 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X