Just In
- 21 min ago
ಹಮ್ಮರ್ ಕಾರ್ ಮಾರಿದ್ದೇಕೆ ದರ್ಶನ್? ಮತ್ತೊಂದು ದುಬಾರಿ ಕಾರಿನ ಮೇಲೆ ಕಣ್ಣಿಟ್ಟ ಡಿ ಬಾಸ್
- 36 min ago
ಖರ್ಚು ಹೆಚ್ಚು, ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ: ದರ್ಶನ್
- 47 min ago
#MyGuru ಅಭಿಯಾನ: ನನ್ನ ಅಣ್ಣ ನನ್ನ ಗುರು ಎಂದು ಚಿರು ಸ್ಮರಿಸಿದ ಧ್ರುವ ಸರ್ಜಾ
- 1 hr ago
ಐಟಿ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಸ್ತುಗಳಿಗಾಗಿ ಹುಡುಕಾಡಿದರು: ತಾಪ್ಸಿ
Don't Miss!
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- News
ತೆರೆಮರೆಯ ಸಾಧಕರಿಗೆ ಮಾ.7ರಂದು ಪ್ರಣಾಮ್ ಕಾರ್ಯಕ್ರಮ
- Sports
ಐಪಿಎಲ್ 2021: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿ
- Automobiles
ಆರ್ 15 ಬೈಕಿನ ಎಂಜಿನ್ನೊಂದಿಗೆ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ ಯಮಹಾ ಮ್ಯಾಕ್ಸಿ ಸ್ಕೂಟರ್
- Education
WCD Ballari Recruitment 2021: ಅಂಗನವಾಡಿಯಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಏರ್ಬ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆ: ಹೊಸ ಕಾರುಗಳ ಬೆಲೆ ಹೆಚ್ಚಳವಾಗಲಿದೆ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕಮಲಿ' ಹಣಕಾಸಿನ ವಿವಾದದ ಬಗ್ಗೆ ಅರವಿಂದ್ ಕೌಶಿಕ್ ಸ್ಪಷ್ಟನೆ
''ಅವರು ಧಾರಾವಾಹಿಗೆ ಫೈನಾನ್ಸ್ ಹಾಕಿದ್ದರು. ಅವರಿಗೆ ಏನು ನೀಡಬೇಕೋ ಅದನ್ನು ನೀಡಿದ್ದೇವೆ. ಆದರೂ ಸುಮ್ಮನೆ ಈ ರೀತಿ ಮಾಡುತ್ತಿದ್ದಾರೆ. ತಮ್ಮ ಪ್ರಚಾರಕ್ಕಾಗಿ ನಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.'' ಎಂದು ನಿರ್ದೇಶಕ, ನಿರ್ಮಾಪಕ ಅರವಿಂದ ಕೌಶಿಕ್ ಘಟನೆಯ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ವಿವರಿಸಿದರು.
ಜೀ ಕನ್ನಡ ವಾಹಿನಿಯ 'ಕಮಲಿ' ಧಾರಾವಾಹಿಯ ನಿರ್ದೇಶಕ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ, ನವೀನ್ ಸಾಗರ್, ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ಅದೇ ಧಾರಾವಾಹಿಯ ನಿರ್ಮಾಪಕ ರೋಹಿತ್ ಪೊಲೀಸ್ ರಿಗೆ ದೂರು ನೀಡಿದ್ದಾರೆ. ನನಗೆ ಸೇರಬೇಕಾದ ಲಾಭಾಂಶ ಸಿಕ್ಕಿಲ್ಲ ಹಾಗೂ ಧಾರಾವಾಹಿಯಿಂದ ನನ್ನ ಹೆಸರನ್ನು ತೆಗದು ಹಾಕಿದ್ದಾರೆ ಎನ್ನುವುದು ಅವರ ಆರೋಪವಾಗಿದೆ.
'ಕಮಲಿ' ಸೀರಿಯಲ್ ಕಿರಿಕ್: ನಿರ್ದೇಶಕರ ವಿರುದ್ಧ ದೂರು ನೀಡಿದ ನಿರ್ಮಾಪಕ.!
ಈ ಘಟನೆಯ ಬಗ್ಗೆ ಅರವಿಂದ್ ಕೌಶಿಕ್ ಮಾತನಾಡಿದ್ದಾರೆ. ತಮ್ಮ ಮೇಲೆ ಬಂದ ಆರೋಪದ ಬಗ್ಗೆ ಅವರು ಈ ರೀತಿ ಸ್ಪಷ್ಟನೆ ನೀಡಿದ್ದಾರೆ.

ಫೈನಾನ್ಸ್ ಮಾಡುತ್ತೇನೆ ಅಂತ ಹಿಂದೆ ಬಿದ್ದರು
''ನಾನು, ನವೀನ್ ಸಾಗರ್ ಹಾಗೂ ಶಿಲ್ಪಾ ಸೇರಿ ಸತ್ವ ಮೀಡಿಯಾ ಎಂದು ಒಂದು ಸಂಸ್ಥೆ ಮಾಡಿದ್ವಿ. ನಮ್ಮ ಸಂಸ್ಥೆಗೆ ಒಂದು ಧಾರಾವಾಹಿ ಮಾಡಿ ಎಂದು ಜೀ ಕನ್ನಡ ವಾಹಿನಿ ಒಂದು ಸ್ಲಾಟ್ ನೀಡಿತ್ತು. ಅದಕ್ಕೆ ನಮಗೆ ಒಂದಷ್ಟು ಬಂಡವಾಳ ಬೇಕಾಗಿತ್ತು. ಆಗ ರೋಹಿತ್ ಫೈನಾನ್ಸ್ ಅವ್ರು ನನ್ನನ್ನು ಹತ್ತಾರು ಬಾರಿ ಸಂಪರ್ಕ ಮಾಡಿದರು. ನನಗೆ ಅವರು ಪರಿಚಯ ಇದ್ದ ಕಾರಣ ಒಪ್ಪಿಕೊಂಡೆ.'' - ಅರವಿಂದ್ ಕೌಶಿಕ್

ಒಂದು ಸಂಚಿಕೆಗೆ ಒಂದಷ್ಟು ಹಣ
''ಫೈನಾನ್ಸ್ ಹಾಕಿದ್ದ ಅವರು ನನಗೂ ಒಂದು ಹೆಸರು ಬೇಕು ಎಂದು ಅವರು ಕೇಳಿದರು. ನಿರ್ಮಾಪಕರು ಎಂದು ನನ್ನ ಹೆಸರು ಹಾಕಬೇಕು ಎಂದರು. ನಮ್ಮ ಚಾನಲ್ ನಡುವೆ ಒಪ್ಪಂದ ಆಗಿದ್ದ ಕಾರಣ ಯಾವುದೇ ಸಮಸ್ಯೆ ಇಲ್ಲ ಎಂದು ಸಹ ನಿರ್ಮಾಪಕ ಎಂದು ನೀಡಲು ಒಪ್ಪಿದೆವು. ಒಂದು ಸಂಚಿಕೆಗೆ ಒಂದಷ್ಟು ಹಣ ನೀಡಲು ಮಾತುಕತೆ ಆಯ್ತು. ಇವರ ರೀತಿಯೇ ಇನ್ನು ಕೆಲವರು ಫೈನಾನ್ಸ್ ಹಾಕಿದ್ದರು.'' - ಅರವಿಂದ್ ಕೌಶಿಕ್
'ಕಮಲಿ' ಧಾರಾವಾಹಿಯ ರಿಷಿಗೆ ಅಡುಗೆ ಮಾಡೋದಂದ್ರೆ ಇಷ್ಟ

ನಾನೇ ನಿರ್ಮಾಪಕ ಎಂದು ಕೇಳಿಕೊಂಡು ಒಡಾಡಿದರು
''ಧಾರಾವಾಹಿ ಶುರು ಆದ ಮೇಲೆ ಸೆಟ್ ಗೆ ಬರಲು ಪ್ರಾರಂಭ ಮಾಡಿದರು. ನಾನೇ ನಿರ್ಮಾಪಕ ಇವರೆಲ್ಲ ನಡೆಸಿಕೊಂಡು ಹೋಗುತ್ತಿದ್ದಾರೆ ಅಷ್ಟೇ ಎಂದು ಹೇಳಿಕೊಂಡು ಒಡಾಡುತ್ತಿದರು. ಆಮೇಲೆ ಪತ್ರಿಕೆ ಹಾಗೂ ಬೇರೆ ಬೇರೆ ಕಡೆ ನಾನೇ ಕಮಲಿ ನಿರ್ಮಾಪಕ ಎಂದು ಬರೆಸಿಕೊಂಡರು. ನಾನು ಧಾರಾವಾಹಿ ನಿರ್ಮಾಣಕ್ಕಾಗಿ ಬೇರೆಯವರ ಬಳಿ ಕೂಡ ಫೈನಾನ್ಸ್ ತಂದಿರುತ್ತೇನೆ. ಆಗ ಅವರೆಲ್ಲ ನೀನು ನಿರ್ಮಾಪಕ ಅಂತ ಹೇಳಿದ್ದೆ. ಇವರು ನಿರ್ಮಾಪಕರು ಅಂತ್ತಿದ್ದಾರೆ ಎಂದರು.'' - ಅರವಿಂದ್ ಕೌಶಿಕ್

ಧಾರಾವಾಹಿಯ ವಿಡಿಯೋ ಲೀಕ್
''ಸೆಟ್ ಗೆ ಬಂದು ಅಲ್ಲಿನ ಫೋಟೋಗಳನ್ನು ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದರು. ಇನ್ನೂ ಪ್ರಸಾರವೇ ಆಗದ ಸಂಚಿಕೆಗಳನ್ನು ವಿಡಿಯೋ ಮಾಡಿ ಅವರೇ ಲೀಕ್ ಮಾಡುತ್ತಿದ್ದರು. ಸೆಟ್ ನಲ್ಲಿ ಕಲಾವಿದರ ಜೊತೆಗೆ ಏನೇನೋ ಮಾತನಾಡುತ್ತಿದ್ದರು. ಸಂಚಿಕೆಗೆ ಅವರಿಗೆ ನೀಡಬೇಕಾದ ಹಣ ನೀಡುತ್ತಿದ್ದರೂ, ಟಿ ಆರ್ ಪಿ ಇನ್ಸೆಂಟಿವ್ ಬರಬೇಕು ಎಂದು ಹೇಳಲು ಶುರು ಮಾಡಿದರು.'' - ಅರವಿಂದ್ ಕೌಶಿಕ್

ಹೆಸರು ತೆಗೆದು ಹಾಕಿದ್ದು ಇದಕ್ಕೆ
''ಫೈನಾನ್ಸ್ ಹಾಕಿದ್ದೇನೆ ಎಂಬ ಕಾರಣಕ್ಕೆ ಧಾರಾವಾಹಿಯ ಹಣಕಾಸಿನ ವ್ಯಾವಹಾರದ ಬಗ್ಗೆ ಕೇಳುತ್ತಿದ್ದರು. ಕೊನೆಗೆ ಇದ್ದಕ್ಕಿದ್ದ ಹಾಗೆ ಲೀಗನ್ ನೋಟಿಸ್ ಕಳುಹಿಸಿದರು. ಇವರು ಸಹ ನಿರ್ಮಾಪಕ ಎಂಬುದನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಅನಿಸಿ ಹೆಸರು ತೆಗೆದ್ವಿ. ಸಮಸ್ಯೆ ಬಗೆ ಹರಿಯುವವರೆಗೆ ಅವರ ಹೆಸರು ಮಾತ್ರವಲ್ಲ ಎಲ್ಲ ನಿರ್ಮಾಪಕರ ಹೆಸರನ್ನು ಹಾಕುವುದು ಬೇಡ ಎಂದು ಸುಮ್ಮನಾದ್ವಿ.'' - ಅರವಿಂದ್ ಕೌಶಿಕ್

ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ
''ಧಾರಾವಾಹಿ ತುಂಬ ಚೆನ್ನಾಗಿ ಹೋಗುತ್ತಿದೆ. ಆದರೆ, ಹಿಂದೆ 9 ಪಾಯಿಂಟ್ ಇದ್ದ ಟಿ ಆರ್ ಪಿ 10 ಮೇಲೆ ಬರಬೇಕು ಎಂದು ವಾಹಿನಿಯವರು ಹೇಳಿದರು. ಅದಕ್ಕೆ ನಮ್ಮ ಶ್ರಮ ಹಾಕಿದ್ವಿ. ಯಾವಾಗ ವಾಹಿನಿಯ ನಿರೀಕ್ಷೆಗೆ ತಲುಪಲಿಲ್ಲವೋ ಆಗ ನಾನು ಧಾರಾವಾಹಿ ಮಾಡುವುದಿಲ್ಲ ಎಂದು ಎಂದೆ. ಈ ವಿಷಯ ಅವರಿಗೆ ಹೋಗಿ ನನಗೆ ದುಡ್ಡು ನೀಡುವುದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ನಾನು ದುಡ್ಡು ನೀಡುವುದಿಲ್ಲ ಎಂದು ಎಂದಿಗೂ ಹೇಳಿಲ್ಲ. ಇದನ್ನು ಇಷ್ಟು ದೊಡ್ಡದು ಮಾಡುವ ಅಗತ್ಯವಿರಲಿಲ್ಲ. ಅವರ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಅಷ್ಟೇ.'' - ಅರವಿಂದ್ ಕೌಶಿಕ್