'ಸಂಧ್ಯಾರಾಗ'ದಲ್ಲಿ ಅರಳಿದ ಭಾರತಿ ಬಗ್ಗೆ ಎಸ್.ಕೆ.ಭಗವಾನ್ ನೆನಪಿಸಿಕೊಂಡಿದ್ದೇನು?

By Bharath Kumar

ನಟಿ ಭಾರತಿ ವಿಷ್ಣುವರ್ಧನ್ ಅಂದ್ರೆ, ಅಂದಿನ ಕಾಲದ ನಿರ್ದೇಶಕರಿಗೆ ನೆಚ್ಚಿನ ತಾರೆಯಾಗಿದ್ದರು. ಗೃಹಣಿ ಪಾತ್ರಗಳಿಗೂ ಸೈ, ಮತ್ತೊಂದೆಡೆ ಗ್ಲಾಮರ್ ಪಾತ್ರಗಳಿಗೂ ಸೈ ಎನ್ನುತ್ತಿದ್ದರು.

ಕಾದಂಬರಿ ಆಧರಿತ ಚಿತ್ರವಾಗಲಿ ಅಥವಾ ಕಾಲ್ಪನಿಕ ಚಿತ್ರವೇ ಆಗಲಿ ಆ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸುತ್ತಿದ್ದರಂತೆ ನಟಿ ಭಾರತಿ.[ಒಂದೇ ಒಂದು ಮಾರ್ಕ್ ನಲ್ಲಿ ಒಮ್ಮೆ ಫೇಲ್ ಆಗಿದ್ದ ನಟಿ ಭಾರತಿ.!]

ಇಂತಹ ನಟಿ ಬಗ್ಗೆ ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ಮಾತನಾಡಿದ್ದಾರೆ. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ಭಾರತಿ ಅವರ ಬಗ್ಗೆ ಭಗವಾನ್ ಏನ್ ಹೇಳಿದ್ರು ಅಂತ ಮುಂದೆ ಓದಿ.......

ಒಂದು ಟೇಕ್ ನಲ್ಲಿ ಶಾಟ್ ಮುಗಿಸಿದ್ದರು!

ಒಂದು ಟೇಕ್ ನಲ್ಲಿ ಶಾಟ್ ಮುಗಿಸಿದ್ದರು!

ಅಂದು ರಾಜ್ ಕುಮಾರ್, ಉದಯ್ ಕುಮಾರ್ ಅಭಿನಯದ 'ಸಂಧ್ಯಾರಾಗ' ಚಿತ್ರದಲ್ಲಿ ಭಾರತಿ ಅವರು ಅಭಿನಯಿಸಿದ್ದರು. ಭಾರತಿ ಅವರು ಇಂಡಸ್ಟ್ರಿಗೆ ಹೊಸಬರು. ಸುಮಾರು 2-3 ನಿಮಿಷದ ದೃಶ್ಯವನ್ನ ಆಗಲೇ ಒಂದೇ ಟೇಕ್ ನಲ್ಲಿ ಮುಗಿಸಿದ್ದರು ಎಂದು ಭಾರತಿ ಅವರ ಅಭಿನಯದ ಬಗ್ಗೆ ಇದ್ದ ಶ್ರದ್ಧೆಯನ್ನ ನಿರ್ದೇಶಕ ಎಸ್.ಕೆ ಭಗವಾನ್ ವೀಕೆಂಡ್ ಟೆಂಟ್ ನಲ್ಲಿ ಬಿಚ್ಚಿಟ್ಟರು.[ನಟಿ ಭಾರತಿ ವಿಷ್ಣುವರ್ಧನ್ ರವರಿಗೆ ನನಸಾಗದ ಒಲಿಂಪಿಕ್ಸ್ ಕನಸು]

'ಸಂಧ್ಯಾರಾಗ' ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ!

'ಸಂಧ್ಯಾರಾಗ' ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ!

'ಸಂಧ್ಯಾರಾಗ' ಚಿತ್ರದ ಅಭಿನಯಕ್ಕೆ ಭಾರತಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತಂತೆ. ಈ ಚಿತ್ರದ ಶೂಟಿಂಗ್ ವೇಳೆಯೆ ನಿರ್ದೇಶಕ ಭಗವಾನ್ ಅವರು, ಭಾರತಿಗೆ ಪ್ರಶಸ್ತಿ ಬರುತ್ತೆ ಅಂತ ಭವಿಷ್ಯ ನುಡಿದಿದ್ದರಂತೆ. ಆಮೇಲೆ ನುಡಿದಂತೆ ಅವಾರ್ಡ್ ಕೂಡ ಸಿಕ್ಕಿತ್ತಂತೆ.['ಡಾ.ರಾಜ್-ಭಾರತಿ' ಜೋಡಿ ಬಗ್ಗೆ ಗುಣಗಾನ ಮಾಡಿದ ಸೆಂಚುರಿಸ್ಟಾರ್]

ಭಗವಾನ್ ಮೇಲೆ ಕೋಪವಿತ್ತಂತೆ

ಭಗವಾನ್ ಮೇಲೆ ಕೋಪವಿತ್ತಂತೆ

ಕಾದಂಬರಿ ಆಧಾರಿತ ಚಿತ್ರಗಳನ್ನ ಮಾಡುವುದರಲ್ಲಿ ದೊರೈ-ಭಗವಾನ್ ಫೇಮಸ್. ಆದ್ರೆ, ಕಾದಂಬರಿ ಆಧಾರಿತ ಚಿತ್ರಗಳನ್ನ ಬೇರೆ ನಾಯಕಿಯರ ಜೊತೆ ಸಿನಿಮಾ ಮಾಡ್ತಿದ್ದರಂತೆ, ಗ್ಲಾಮರ್ ಪಾತ್ರಗಳಿದ್ದರೇ ಮಾತ್ರ ಭಾರತಿ ಅವರ ಜೊತೆ ಸಿನಿಮಾ ಮಾಡ್ತಿದ್ದರಂತೆ. ಅದಕ್ಕೆ ಭಗವಾನ್ ಅವರ ಮೇಲೆ ಕೋಪವಿತ್ತಂತೆ.

ಕೋಪದಿಂದ ಒಂದು ಸಿನಿಮಾ ಕ್ಯಾನ್ಸಲ್!

ಕೋಪದಿಂದ ಒಂದು ಸಿನಿಮಾ ಕ್ಯಾನ್ಸಲ್!

ಭಗವಾನ್ ಅವರ ಮೇಲಿನ ಈ ಕೋಪದಿಂದ ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಲ್ಲ ಅಂತ ಒಂದು ಸಿನಿಮಾ ಕೂಡ ಕ್ಯಾನ್ಸಲ್ ಮಾಡಿಬಿಟ್ಟರಂತೆ ಭಾರತಿ ಅವರು.

ಭಾರತಿ ಅವರ ಬಗ್ಗೆ ಭಗವಾನ್ ಏನ್ ಹೇಳಿದರು!

ಭಾರತಿ ಅವರ ಬಗ್ಗೆ ಭಗವಾನ್ ಏನ್ ಹೇಳಿದರು!

''ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಿ ಅಂತ ಕೇಳಲು ನಮಗೆ ಧೈರ್ಯವೇ ಬರಲಿಲ್ಲ. ಯಾಕಂದ್ರೆ, 'ಸಂಧ್ಯಾರಾಗ' ಚಿತ್ರದಲ್ಲಿ ಗೃಹಿಣಿಯ ಪಾತ್ರ ಮಾಡಿ ಆಮೇಲೆ ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕೊಂಡು ಬನ್ನಿ ಅಂದ್ರೆ ಏನು ಚೆನ್ನಾಗಿರುತ್ತೆ. - ದೊರೈ-ಭಗವಾನ್, ನಿರ್ದೇಶಕ

More from Filmibeat

English summary
Senior Director Dore Baghavan Talk About Kannada Actress Bharathi Vishnuvardhan in Zee Kannada's Popular show 'Weekend with Ramesh-3'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X