»   » 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬಂದ ಜೋಗಿ ಪ್ರೇಮ್

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬಂದ ಜೋಗಿ ಪ್ರೇಮ್

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ 'ಕಾಮಿಡಿ ಕಿಲಾಡಿಗಳು ಸೀಸನ್ 2' ಕೂಡ ಒಂದಾಗಿದೆ. ವೀಕೆಂಡ್ ನಲ್ಲಿ ವೀಕ್ಷಕರಿಗೆ ಸಖತ್ ಕಿಕ್ ನೀಡುವ ಈ ಕಾರ್ಯಕ್ರಮಕ್ಕೆ ಈಗ ಒಬ್ಬ ವಿಶೇಷ ಅತಿಥಿ ಆಗಮಿಸಿದ್ದಾರೆ.

ಪ್ರತಿ ವಾರ ಕಾರ್ಯಕ್ರಮದ ವೇದಿಕೆಗೆ ಒಬ್ಬ ಸಿನಿಮಾ ತಾರೆಯರು ಬರುತ್ತಾರೆ. ಈ ವಾರ ನಿರ್ದೇಶಕ ಜೋಗಿ ಪ್ರೇಮ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಜೆಟ್ 'ದಿ ವಿಲನ್' ಸಿನಿಮಾದ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಪ್ರೇಮ್ ಕಾಮಿಡಿ ಕಿಲಾಡಿಗಳ ಜೊತೆಗೆ ಕಾಲ ಕಳೆದಿದ್ದಾರೆ. ಪ್ರೇಮ್ ಬಂದಿರುವ ಸಂಚಿಕೆಯ ಚಿತ್ರೀಕರಣ ಈಗಾಗಲೇ ನಡೆದಿದೆ.

'ದಿ ವಿಲನ್' ಸಿನಿಮಾದಲ್ಲಿ ಇರಲಿದೆ ಈ ಮೂವರ ತರಲೆ

ಕಾರ್ಯಕ್ರಮದ ನಡುವೆ ಪ್ರೇಮ್ ಜೊತೆಗೆ ಜಗ್ಗೇಶ್, ಯೋಗರಾಜ್ ಭಟ್, ಮತ್ತು ರಕ್ಷಿತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ತಮ್ಮ ಪ್ರೀತಿಯ ಪತ್ನಿಯ ಕಾರ್ಯಕ್ರಮಕ್ಕೆ ಪ್ರೇಮ್ ಕೂಡ ಆಗಮಿಸಿದ್ದು ವಿಶೇಷವಾಗಿದೆ. ಇನ್ನು ಮೊದಲ ಸೀಸನ್ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ವಿಜೇತವಾಗಿದ್ದ ಶಿವು ಕೆ ಆರ್ ಪೇಟೆ ಹಾಗೂ ಕಾರ್ಯಕ್ರಮ ಸ್ಪರ್ಧಿ ಆಗಿದ್ದ ಲೋಕೇಶ್ ಇಬ್ಬರಿಗೆ ಪ್ರೇಮ್ ತಮ್ಮ 'ದಿ ವಿಲನ್' ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದಾರೆ.

Director Jogi Prem came as a guest Comedy Kiladigalu 2 program

ಈ ಹಿಂದೆ ಅನೇಕ ಸಂಚಿಕೆಗಳಲ್ಲಿ ಜಗ್ಗೇಶ್ ತಮಾಷೆ ಮಾಡುತ್ತಾ ರಕ್ಷಿತಾ ಅವರಿಗೆ ಪ್ರೇಮ್ ಹೆಸರನ್ನು ಕೇಳಿ ಕಾಲು ಎಳೆಯುತ್ತಿದ್ದರು. ಆದರೆ ಈಗ ನೇರವಾಗಿ ಪ್ರೇಮ್ ಜಗ್ಗೇಶ್ ಕೈ ನಲ್ಲಿ ಸಿಕ್ಕಿದ್ದಾರೆ. ಸೋ, ಈ ಸಂಚಿಕೆಯಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಇರುವುದು ಪಕ್ಕಾ ಆಗಿದೆ. ಅಂದಹಾಗೆ, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟಗೆ ಪ್ರಸಾರ ಆಗಲಿದೆ.

English summary
Kannada Director Jogi Prem came as a guest for Zee Kannada channel's popular show 'Comedy Kiladigalu 2'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X