For Quick Alerts
  ALLOW NOTIFICATIONS  
  For Daily Alerts

  'ನಂ 1 ಯಾರಿ' ಶೋನಲ್ಲಿ ಸುದೀಪ್ ಜೊತೆ ಆಗಮಿಸಿರುವ ಸ್ನೇಹಿತ ಯಾರು.?

  By Bharath Kumar
  |
  'ನಂ 1 ಯಾರಿ' ಶೋನಲ್ಲಿ ಸುದೀಪ್ ಜೊತೆ ಆಗಮಿಸಿರುವ ಸ್ನೇಹಿತ ಯಾರು.? | Filmibeat Kannada

  ಸ್ಟಾರ್ ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ' ದೊಡ್ಡ ಮಟ್ಟದ ಜನಪ್ರಿಯತೆ ಹೊಂದುತ್ತಿದೆ. ಉಪೇಂದ್ರ, ಶರಣ್, ಲೂಸ್ ಮಾದ ಯೋಗಿ, ಧನಂಜಯ್, ವಸಿಷ್ಟ, ದಿಗಂತ್ ಅಂತಹ ನಟರು ಶಿವಣ್ಣ ಜೊತೆಯಲ್ಲಿ ಟೈಂ ಪಾಸ್ ಮಾಡಿ ಹೋಗಿದ್ದಾರೆ.

  ಇದೀಗ, ಕನ್ನಡ ಕಿಚ್ಚ ಸುದೀಪ್ ಅವರು ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಈಗಾಗಲೇ 'ನಂ 1 ಯಾರಿ ವಿತ್ ಶಿವಣ್ಣ' ಸೆಟ್ ನಲ್ಲಿ ಸುದೀಪ್ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿತ್ತು. ಆದ್ರೆ, ಸುದೀಪ್ ಜೊತೆಯಲ್ಲಿ ಮತ್ತೊಬ್ಬ ಅತಿಥಿ ಯಾರು ಬರಬಹುದು ಎಂಬ ಕುತೂಹಲ ಅಭಿಮಾನಿಗಳನ್ನ ಕಾಡಿತ್ತು. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿದೆ.

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಜೋಡಿ ಅತಿಥಿಗಳು ಇರ್ತಾರೆ. ಇಬ್ಬರು ಸ್ನೇಹಿತರಾಗಿರಬೇಕು. ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಪ್ರಶ್ನೆಗಳು ಕೇಳಲಾಗುತ್ತೆ. ಹೀಗಾಗಿ, ಸುದೀಪ್ ಜೊತೆ ಯಾರು ಬರಬಹುದಾದ ಆತ್ಮೀಯ ವ್ಯಕ್ತಿ ಯಾರಿರಬಹುದು ಎಂಬ ಪ್ರಶ್ನೆ ಕಾಡಿತ್ತು. ಆ ಪ್ರಶ್ನೆಗೆ ಉತ್ತರ ನಿರ್ದೇಶಕ ಜೋಗಿ ಪ್ರೇಮ್.

  ಜೋಗಿ ಪ್ರೇಮ್ ಮತ್ತು ಸುದೀಪ್ ಬಹಳ ಒಳ್ಳೆಯ ಆತ್ಮೀಯರು. ಇದುವರೆಗೂ ಒಟ್ಟಿಗೆ ಸಿನಿಮಾ ಮಾಡಿಲ್ಲವಾದರೂ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸದ್ಯ ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದಲ್ಲಿ ಶಿವರಾಜ್ ಕುಮಾರ್, ಸುದೀಪ್ ಒಟ್ಟಿಗೆ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ರಕ್ಷಿತಾ ಪ್ರೇಮ್ ಮತ್ತು ಸುದೀಪ್ ಅವರು ಕೂಡ ಉತ್ತಮ ಸ್ನೇಹಿತರು. ಹೀಗಾಗಿ, 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಸುದೀಪ್ ಜೊತೆ ಪ್ರೇಮ್ ಸಾಥ್ ಕೊಡ್ತಿದ್ದಾರೆ.

  ಭಾನುವಾರ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್ ಮತ್ತು ಶ್ರದ್ಧಾ ಶ್ರೀನಾಥ್ ಅವರ ಸಂಚಿಕೆ ಪ್ರಸಾರವಾಗಿತ್ತು. ಮುಂದಿನ ವಾರ ಸುದೀಪ್ ಮತ್ತು ಪ್ರೇಮ್ ಜೋಡಿಯ ಸಂಚಿಕೆ ಪ್ರಸಾರ ಆಗಲಿದೆ.

  English summary
  Kannada director prem will be part in 'No 1 yaari programme' along with kiccha sudeep. programme hosted by hatrick hero shivarajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X