ಬಿಡುಗಡೆ ಆಯ್ತು 'ದಿ ವಿಲನ್' ಚಿತ್ರದಲ್ಲಿನ ಸುದೀಪ್-ಶಿವಣ್ಣ ಲುಕ್.!
Recommended Video

ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಶುರುವಾಗಿ ತಿಂಗಳುಗಳೇ ಕಳೆದಿವೆ. 'ದಿ ವಿಲನ್' ಸಿನಿಮಾ ಯಾವಾಗ ಬಿಡುಗಡೆ ಆಗುತ್ತೋ, ಇನ್ನೂ ಬಹಿರಂಗ ಆಗಿಲ್ಲ.
'ದಿ ವಿಲನ್' ಚಿತ್ರದ ಟೀಸರ್/ಟ್ರೈಲರ್ ಬಿಡುಗಡೆ ಮಾಡುವ ಬಗ್ಗೆ ಕೂಡ ಪ್ರೇಮ್ ಎಲ್ಲೂ ಬಾಯ್ಬಿಟ್ಟಿಲ್ಲ. ಇಲ್ಲಿಯವರೆಗೂ 'ದಿ ವಿಲನ್' ಮೇಕಿಂಗ್ ಸ್ಟಿಲ್ಸ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
'ದಿ ವಿಲನ್' ಚಿತ್ರದಲ್ಲಿ ವಿಲನ್ ಯಾರು.? ಹೀರೋ ಯಾರು.? ಎಂಬ ಗುಟ್ಟನ್ನ ಪ್ರೇಮ್ ಬಿಟ್ಟುಕೊಟ್ಟಿಲ್ಲ. ಸಿನಿಮಾ ಬಿಡುಗಡೆ ಆದ್ಮೇಲೆ, ಜನ ನೋಡಿ ಡಿಸೈಡ್ ಮಾಡಲಿ ಅನ್ನೋದು ಪ್ರೇಮ್ ಉತ್ತರ.

ಸದ್ಯ 'ದಿ ವಿಲನ್' ಸೆಟ್ ನಿಂದ ಕೊಂಚ ಬಿಡುಗಡೆ ಮಾಡಿಕೊಂಡಿರುವ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ 'ದಿ ವಿಲನ್' ಚಿತ್ರದಲ್ಲಿನ ಸುದೀಪ್ ಹಾಗೂ ಶಿವಣ್ಣ ರವರ ಲುಕ್ ನ ಪ್ರೇಮ್ ರಿವೀಲ್ ಮಾಡಿದರು.

ಅಂದ್ಹಾಗೆ, 'ದಿ ವಿಲನ್' ಚಿತ್ರದಲ್ಲಿ ಸುದೀಪ್, ಶಿವರಾಜ್ ಕುಮಾರ್ ಜೊತೆಗೆ ಆಮಿ ಜಾಕ್ಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಹಾಗೂ ಶಿವಣ್ಣ ರವರನ್ನ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ತರುತ್ತಿರುವ ಚಿತ್ರ ಇದು. 'ಕಲಿ' ಚಿತ್ರ ಡ್ರಾಪ್ ಆದ್ಮೇಲೆ, ಸುದೀಪ್ ಹಾಗೂ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಇದೇ ಚಿತ್ರಕ್ಕೆ.


Click it and Unblock the Notifications











