ಒಂದುವರೆ ವರ್ಷ ಪ್ರೇಮ್ ವಾಟ್ಸ್ ಆಪ್ ನಲ್ಲಿ ಇರಲಿಲ್ಲ.! ಯಾಕೆ.?

By Harshitha

ಜನಪ್ರಿಯ ಚಾಟಿಂಗ್ ಆಪ್ 'ವಾಟ್ಸ್ ಆಪ್'ನಲ್ಲಿ ಯಾರಿಲ್ಲ ಹೇಳಿ.? ನೆಟ್ ವರ್ಕ್ ಹಾಗೂ ಡೇಟಾ ಕನೆಕ್ಷನ್ ಇದ್ದರೆ ಸಾಕು, ಎಲ್ಲೇ ಇದ್ದರೂ.. ಫೋಟೋ, ವಿಡಿಯೋ, ಆಡಿಯೋ ಫೈಲ್ ಗಳನ್ನು ಸುಲಭವಾಗಿ 'ವಾಟ್ಸ್ ಆಪ್' ಮೂಲಕ ಕಳುಹಿಸಬಹುದು.

ಇಂತಿಪ್ಪ 'ವಾಟ್ಸ್ ಆಪ್'ನ ಕನ್ನಡದ ನಿರ್ದೇಶಕ ಪ್ರೇಮ್ ಒಂದುವರೆ ವರ್ಷ ಬಳಸಲಿಲ್ಲವಂತೆ. ಹಾಗಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಅದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿರ್ದೇಶಕ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಭಾಗವಹಿಸಿದ್ದರು.

Director Prem was not on Whatsapp for one and a half year

ಈ ವೇಳೆ, ಪ್ರೇಮ್ ಕಾಲೆಳೆಯುತ್ತಿದ್ದ ಕಿಚ್ಚ ಸುದೀಪ್, ''ಒಂದುವರೆ ವರ್ಷ ಪ್ರೇಮ್ ವಾಟ್ಸ್ ಆಪ್ ನಲ್ಲಿ ಇರಲಿಲ್ಲ. ಯಾಕಂದ್ರೆ, ಒಂದು ಸರಿ ನಿದ್ದೆ ಮಾಡುತ್ತಿರುವಾಗ, ನೋಟಿಫಿಕೇಷನ್ ಬಂದಿದೆ. ರಕ್ಷಿತಾ ನೋಡಿದ್ದಾರೆ. ಅದಕ್ಕೆ ವಾಟ್ಸ್ ಆಪ್ ನಲ್ಲಿ ಇರಲಿಲ್ಲ'' ಎಂದರು.

ಆಗ, ''ವಾಟ್ಸ್ ಆಪ್ ನಲ್ಲಿ ಸಣ್ಣ-ಪುಟ್ಟ ಫೋಟೋ ಕಳುಹಿಸುತ್ತಾರೆ. ಡೈರೆಕ್ಟರ್ ಆಗಿ ನಾವು ಇನ್ನೇನ್ ಮಾಡೋಕ್ಕಾಗುತ್ತೆ.?'' ಎಂದರು ಪ್ರೇಮ್. ಅದಕ್ಕೆ, ''ಡೈರೆಕ್ಟ್ ಮಾಡುವವರು ವಾಟ್ಸ್ ಆಪ್ ನಲ್ಲಿ ಸ್ಕ್ರೀನ್ ಟೆಸ್ಟ್ ಯಾಕೆ ತೆಗೆದುಕೊಳ್ಳಬೇಕು.?'' ಎಂದು ಸುದೀಪ್ ಕಿಚಾಯಿಸಿದರು.

''ಆಮೇಲಾನಾಯ್ತು.?'' ಅಂತ ಶಿವಣ್ಣ ಕೇಳಿದ್ದಕ್ಕೆ, ''ಆಮೇಲೇನಿಲ್ಲ. ಬಿಡಿ ಅಣ್ಣ...'' ಎಂದು ಟಾಪಿಕ್ ಚೇಂಜ್ ಮಾಡಿಸಿಬಿಟ್ಟರು ಪ್ರೇಮ್.

More from Filmibeat

English summary
Kannada Actor Kiccha Sudeep revealed that Director Prem was not on Whatsapp for one and a half year in 'No.1 Yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X