ದಿಶಾ ಮದನ್ ಮಕ್ಕಳಿಗೆ ಅಮ್ಮ ಶೂಟಿಂಗ್‌ಗೆ ಹೋಗಿಲ್ಲ ಅಂದ್ರೆ ಟೆನ್ಷನ್ ಆಗುತ್ತಂತೆ!
ನಟಿ ದಿಶಾ ಮದನ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಹತ್ತು ವರ್ಷಗಳ ಬ್ರೇಕ್ ಬಳಿಕ ಮತ್ತೆ ಕಿರುತೆರೆಗೂ ಎಂಟ್ರಿಕೊಟ್ಟಿದ್ದಾರೆ.
ಮ್ಯೂಸಿಕಲಿ, ಡಬ್ ಸ್ಮ್ಯಾಶ್, ರೀಲ್ಸ್, ಡ್ಯಾನ್ಸ್ ಮತ್ತು ಟಿಕ್-ಟಾಕ್‌ನಲ್ಲಿ ಲಿಪ್-ಸಿಂಕ್ ವೀಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದ ದಿಶಾ ಮದನ್‌ಗೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿಯೇ ಇದೆ.

ವಿಶೇಷ ಹಾಗೂ ವಿಭಿನ್ನವಾದ ಫೋಟೋಶೂಟ್‌ಗಳನ್ನು ಮಾಡಿಸುವ ಜೊತೆಗೆ ದಿಶಾ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವನಾ ಆಗಿ ನಟಿಸುತ್ತಿದ್ದಾರೆ.
ದಿಶಾ ವೈಯಕ್ತಿಕ ಬದುಕು
'ಕುಲವಧು' ಧಾರಾವಾಹಿ ಮೂಲಕ ದಿಶಾ ಮದನ್ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ ರಿಯಾಲಿಟಿ ಶೋ ಹಾಗೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭರತನಾಟ್ಯ ಕಲಾವಿದೆ ಆಗಿರುವ ದಿಶಾ ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋನಲ್ಲಿ ಡ್ಯಾನ್ಸ್ ಮಾಡಿ ವಿನ್ನರ್ ಕೂಡ ಆಗಿದ್ದರು. ಬಳಿಕ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದ ದಿಶಾ ಮದನ್, ಶಶಾಂಕ್ ವಾಸುಕಿ ಗೋಪಾಲ್ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ದಿಶಾ ಫ್ಯಾಮಿಲಿ
ಶಶಾಂಕ್ ಹಾಗೂ ದಿಶಾ 2016ರಲ್ಲಿ ಭೇಟಿಯಾಗಿ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2019ರಲ್ಲಿ ಪುತ್ರ ವಿಹಾನ್‌ನನ್ನು ಮನೆಗೆ ಬರ ಮಾಡಿಕೊಂಡರು. 2020ರಲ್ಲಿ ಹೊಸ ಮನೆ ಖರೀದಿಸಿ ಗೃಹಪ್ರವೇಶ ನೆರವೇರಿಸಿದರು. 2022ರಲ್ಲಿ ಎರಡನೇ ಮಗುವಿಗೆ ತಾಯಿಯಾಗಿದ್ದು, ಅವಿರಾ ಎಂದು ನಾಮಕರಣ ಮಾಡಿದರು.

ದಿಶಾ ನಟಿಸಿದ ಚಿತ್ರಗಳು
ಇನ್ನು ನಟಿ ದಿಶಾ ಮದನ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಮೊದಲ ಬಾರಿ ಗರ್ಭಿಣಿ ಆಗಿದ್ದಾಗ 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಪತ್ರಕರ್ತೆ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿರ್ಮಾಣದ 'ಹೇಟ್ ಯು ರೋಮಿಯೋ' ವೆಬ್ ಸೀರಿಯಲ್‌ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದರು. ಇದರೊಂದಿಗೆ 'ಹಂಬಲ್ ಪೊಲಿಟೀಶಿಯನ್ ನಾಗರಾಜ್' ಸಿನಿಮಾದಲ್ಲಿ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.
ಎರಡು ವಾರಕ್ಕೊಮ್ಮೆ ಶಾಪಿಂಗ್
ಸುವರ್ಣ ವಾಹಿನಿಯ 'ಇಸ್ಮಾರ್ಟ್ ಜೋಡಿ' ಎಂಬ ರಿಯಾಲಿಟಿ ಶೋನಲ್ಲಿ ಪತಿ ಜೊತೆಗೆ ದಿಶಾ ಭಾಗವಹಿಸಿದ್ದರು. ದಿಶಾ ಅವರು ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿರುವುದಕ್ಕೆ ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ. ಇನ್ನು ದಿಶಾ ಅವರಿಗೂ ಮತ್ತೆ ಬಣ್ಣ ಹಚ್ಚಿರುವುದಕ್ಕೆ ಖುಷಿ ಇದೆ. ಹತ್ತು ವರ್ಷಗಳ ಹಿಂದೆ ಸೀರಿಯಲ್‌ಗಾಗಿ ಸೀರೆ ಶಾಪಿಂಗ್ ಮಾಡಿದ್ದ ದಿಶಾ ಅವರು, ಇದೀಗ ಮತ್ತೆ ಎರಡು ವಾರಕ್ಕೊಮ್ಮೆ ಅಮ್ಮನ ಜೊತೆಗೆ ಶಾಪಿಂಗ್ ಮಾಡುತ್ತಿದ್ದಾರಂತೆ. ಧಾರಾವಾಹಿಗೆ ಬೇಕಾದಂತೆ ಸೀರೆಗಳನ್ನು ಖರೀದಿಸುತ್ತಿದ್ದು, ಪಾತ್ರಕ್ಕೆ ಸೂಟ್ ಆಗುವ ರೀತಿಯಲ್ಲಿ ಬ್ಲೌಸ್ ಸ್ಟಿಚ್ ಮಾಡಿಸುತ್ತಿದ್ದಾರಂತೆ.
ಇವತ್ತು ಶೂಟಿಂಗ್ ಇಲ್ವಾ..!!
ದಿಶಾ ಮದನ್ ಶೂಟಿಂಗ್‌ಗೆ ಹೋಗುವುದಕ್ಕೆ ಮನೆಯವರ ಸಹಕಾರ ಬಹಳ ಇದೆ ಎನ್ನುತ್ತಾರೆ. ಇಬ್ಬರೂ ಮಕ್ಕಳನ್ನು ದಿಶಾ ಅವರ ತಂದೆ-ತಾಯಿ ನೋಡಿಕೊಳ್ಳುತ್ತಿದ್ದಾರಂತೆ. ಇನ್ನು ಪತಿ ಶಶಾಂಕ್ ವರ್ಕ್ ಫ್ರಮ್ ಹೋಮ್ ಮಾಡುತ್ತಾ ನಿತ್ಯ ದಿಶಾ ಶೂಟಿಂಗ್‌ಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದಾರಂತೆ. ಇನ್ನು ವಿಶೇಷ ಎಂದರೆ, ದಿಶಾ ಮಕ್ಕಳಾದ ವಿಹಾನ್ ಮತ್ತು ಅವಿರಾ ಅಮ್ಮ ಶೂಟಿಂಗ್‌ಗೆ ಹೋಗಿಲ್ಲ ಎಂದರೆ ಟೆನ್ಷನ್ ಆಗುತ್ತಾರಂತೆ. ಇವತ್ತು ಶೂಟಿಂಗ್ ಇಲ್ವಾ? ಎಂದು ಪ್ರಶ್ನೆ ಮಾಡುತ್ತಾರಂತೆ. ಇದನ್ನು ಸ್ವತಃ ದಿಶಾ ಅವರೇ ಹೇಳಿಕೊಂಡಿದ್ದು, ಆಶ್ಚರ್ಯ ಪಟ್ಟಿದ್ದಾರೆ.


Click it and Unblock the Notifications











