ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದ ಈ ನಟಿ ಯಾರು? ಯಶ್, ಪಿಗ್ಗಿನೇ ರೋಲ್ ಮಾಡಲ್!

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅವನು ಮತ್ತು ಶ್ರಾವಣಿ' ಧಾರಾವಾಹಿಯೂ ಕೂಡಾ ಒಂದು. ಇತ್ತೀಚೆಗಷ್ಟೇ ಒಂದು ವರ್ಷ ಪೂರೈಸಿರುವ 'ಅವನು ಮತ್ತು ಶ್ರಾವಣಿ' ಧಾರಾವಾಹಿಯು ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯ ಅಣ್ಣ ವರದನ ಹೆಂಡತಿ ಬಿಂದು ಪಾತ್ರದಲ್ಲಿ ನಟಿಸುತ್ತಿರುವ ಬೆಡಗಿಯ ಹೆಸರು ದಿವಿಶಾ. ಇದೇ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿರುವ ದಿವಿಶಾ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ‌. ಅಂದ ಹಾಗೇ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಗ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ದಿವಿಶಾ. ಆ ಸಮಯದಲ್ಲಿ ನಟನೆಯತ್ತ ಒಲವು ಮೂಡಿದ್ದ ಕಾರಣ ಬೆಂಗಳೂರಿನತ್ತ ಮುಖ ಮಾಡಿದರು.

Divisha caught the attention of television viewers in the very first episode

ಇದೀಗ ಮೈಕ್ರೋಬಯಾಲಾಜಿಯಲ್ಲಿ ಬಿಎಸ್ಸಿ ಕಲಿಯುತ್ತಿರುವ ದಿವಿಶಾ ಅವರು ತಮ್ಮ ಸೀನಿಯರ್‌ನ ಸಲಹೆಯ ಮೇರೆಗೆ ಥಿಯೇಟರ್ ಸೇರಿಕೊಂಡರು. ಬಸವನಗುಡಿಯಲ್ಲಿರುವ ದೃಶ್ಯ ಎನ್ನುವ ರಂಗ ತಂಡವನ್ನು ಸೇರಿಕೊಂಡ ಆಕೆ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಆ ತಂಡದಲ್ಲಿ ಸಕ್ರಿಯರಾಗಿದ್ದರು‌. ನಟನೆಯ ರೀತಿ ನೀತಿಗಳನ್ನು ಹಂತಹಂತವಾಗಿ ತಿಳಿದ ಆಕೆ ಪರಿಪಕ್ವತೆಯನ್ನು ಪಡೆದರು.

ಮುಂದೆ 'ಅವನು ಮತ್ತು ಶ್ರಾವಣಿ' ಧಾರಾವಾಹಿಯ ಆಡಿಶನ್‌ಗೆ ಹೋದ ದಿವಿಶಾ ಬಿಂದುವಿನ ಪಾತ್ರಕ್ಕೆ ಆಯ್ಕೆಯೂ ಆದರು. ಜವಾಬ್ದಾರಿಯುತ ಹೆಣ್ಣುಮಗಳು ಬಿಂದು ಪಾತ್ರದಲ್ಲಿ ಅಭಿನಯಿಸುತ್ತಿರುವ ದಿವಿಶಾ ಸಿನಿಮಾದ ಮೂಲಕವೇ ನಟನಾ ನಂಟು ಬೆಳೆಸಿಕೊಳ್ಳಬೇಕು ಎಂದು ಬಯಸಿದ್ದರು. ಆದರೆ, ಕಿರುತೆರೆಯಿಂದ ಅವಕಾಶ ಸಿಕ್ಕಿದ ಕಾರಣ ಬೇಡ ಎನ್ನದೇ ದಿವಿಶಾ ನಟಿಸುತ್ತಿದ್ದಾರೆ.

"ಬಿಂದು ಪಾತ್ರದಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾಟಕಕ್ಕೂ, ಧಾರಾವಾಹಿಗೂ ತುಂಬಾ ಡಿಫರೆನ್ಸ್ ಇತ್ತು. ಬಿಂದು ಪಾತ್ರ ನನಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ. ಜೊತೆಗೆ ಸೀರಿಯಲ್ ಮತ್ತೆ ನಾಟಕಕ್ಕೆ ಇರುವ ಡಿಫರೆನ್ಸ್ ಕೂಡಾ ಗೊತ್ತಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಂದು ಪಾತ್ರ ನನ್ನಲ್ಲಿರುವ ಕಾನ್ಫಿಡೆನ್ಸ್ ಹೆಚ್ಚು ಮಾಡಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡುತ್ತಾ ದಿವಿಶಾ ಹೇಳಿದ್ದಾರೆ.

Divisha caught the attention of television viewers in the very first episode

"ನಾಟಕಗಳಲ್ಲಿ ನಾವು ಒಂದೇ ಸ್ಟ್ರೆಚ್ನಲ್ಲಿ ಎಮೋಷನ್ಸ್ ಅನ್ನು ಕ್ಯಾರಿ ಮಾಡ್ತೇವೆ. ಅಂದ್ರೆ ನಾಟಕ ಶುರುವಾಗುವ ಮೂರು ನಾಲ್ಕು ಗಂಟೆಗಳ ಮುಂಚೆ ನಾವು ಯಾರ ಜೊತೆಗೂ ಮಾತನಾಡುವುದಿಲ್ಲ. ಯಾಕಂದ್ರೆ ಆ ಪಾತ್ರದ ಒಳಗೆ ನಾವು ಜೀವಿಸ್ತಾ ಇರ್ತೇವೆ. ಒಂದು ಸ್ಟ್ರೆಚ್‌ನಲ್ಲಿ ನಾಟಕ ಹೋಗ್ತಾ ಇರುತ್ತೆ. ಇನ್ನು ನಾಟಕದಲ್ಲಿ ಮುಖ್ಯವಾಗಿ ಏನು ಅಂದ್ರೆ ಇನ್ನೂರು ಜನ ಆಡಿಯನ್ಸ್ ಇದ್ರೆ ಆ ಇನ್ನೂರು ಜನಕ್ಕೆ ಕೇಳುವ ಹಾಗೇ ನಾವು ಮೈಕ್ ಇಲ್ಲದೆನೇ ವಾಯ್ಸ್ ತಲುಪುವ ಹಾಗೇ ಮಾಡ್ಬೇಕು. ನಾನು ಸೀರಿಯಲ್ ಬಂದ ಶುರುವಿನಲ್ಲಿ ಅದೇ ನನಗೆ ಪ್ರಾಬ್ಲಂ ಆಯ್ತು. ನಾನು ಫುಲ್ ಜೋರಾಗಿ ಮಾತಾಡ್ತಿದ್ದೆ. ಆಮೇಲೆ ಅದು ಸರಿ ಆಯ್ತು" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡುತ್ತಾ ಹೇಳಿಕೊಂಡಿದ್ದರು ದಿವಿಶಾ.

ತನ್ನ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ದಿವಿಶಾ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರೇ ರೋಲ್ ಮಾಡೆಲ್. ಇನ್ನು ದಿವಿಶಾ ಅವರು ನಟನೆಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಮನೆಯವರು ಸಹಜವಾಗಿ ಬೆಂಬಲ ನೀಡುತ್ತಿರಲಿಲ್ಲ. ಆಮೇಲೆ ನಟನೆಯ ಮೇಲೆ ಆಕೆಗಿರುವ ಡೆಡಿಕೇಶನ್ ಹಾಗೂ ಪರಿಶ್ರಮವನ್ನ ನೋಡಿ ಮನೆಯವರು ಪ್ರೋತ್ಸಾಹಿಸುತ್ತಿದ್ದಾರೆ.

More from Filmibeat

English summary
Avanu matthe Shravani serial Bindu character Divisha's acting journey:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X