ಡಿವೋರ್ಸ್‌ ಕೆಟ್ಟದು ಅಂತ ಎಲ್ಲರೂ ಅಂದುಕೊಳ್ತಾರೆ, ಆದ್ರೆ ಅದು ಒಳ್ಳೆದೇ; ನಟಿ ಧನ್ಯಾ ದೀಪಿಕಾ

'ಕುಲವಧು' ಧಾರಾವಾಹಿ ಖ್ಯಾತಿಯ ನಟಿ ಧನ್ಯಾ ದೀಪಿಕಾ ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ ಹೆಸರು. ಕನ್ನಡ ಮಾತ್ರವಲ್ಲದೇ ತೆಲುಗು ಧಾರಾವಾಹಿಯಲ್ಲಿ ಕೂಡ ಅವರು ನಟಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಧನ್ಯಾ ಈಗ ಮೇಕಪ್ ಆರ್ಟಿಸ್ಟ್ ಆಗಿ ಕೂಡ ಗುರ್ತಿಸಿಕೊಂಡಿದ್ದಾರೆ. 7 ವರ್ಷಗಳ ಹಿಂದೆ ನಟ ಆಕರ್ಷ್ ಜೊತೆ ಆಕೆ ಹಸೆಮಣೆ ಏರಿದ್ದರು. ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ.

ಮೂಲತಃ ನೃತ್ಯಗಾರ್ತಿಯಾಗಿದ್ದ ದೀಪಿಕಾ ಸ್ನೇಹಿತರ ಒತ್ತಾಯದ ಮೇರೆಗೆ ಧಾರಾವಾಹಿಗೆ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದರು. 'ಕುಲವಧು' ಧಾರಾವಾಹಿಯ ಧನ್ಯಾ ಪಾತ್ರ ಆಕೆಯ ಒಳ್ಳೆ ಹೆಸರು ತಂದುಕೊಟ್ಟಿತ್ತು. ಬಳಿಕ ಆ ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡುಬಿಟ್ಟರು. ಜೀವನದಲ್ಲಿ ಎಲ್ಲವನ್ನು ಬಂದಂತೆ ಸ್ವೀಕರಿಸಬೇಕು ಎಂದು ದೀಪಿಕಾ ಹೇಳಿದ್ದಾರೆ. ಡಿವೋರ್ಸ್ ಕೂಡ ಕೆಟ್ಟದ್ದಲ್ಲ. ಅದಕ್ಕೆ ಏನೋ ಕಾರಣ ಇರುತ್ತದೆ ಎಂದು ಆಕೆ ಹೇಳಿರುವುದು ವೈರಲ್ ಆಗ್ತಿದೆ. ಸುಮನ್ ಟಿವಿ ಕನ್ನಡ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ದೀಪಿಕಾ ಮಾತನಾಡಿದ್ದಾರೆ.

Divorce Isn t a Bad Thing Actress Dhanya Deepika Opens Up About Life Marriage and Acceptance

ನಮ್ಮ ಜೀವನದಲ್ಲಿ ಯಾರು ಬರಬೇಕು, ಯಾರು ಇರಬೇಕು, ಯಾರು ಹೋಗಬೇಕು ಎನ್ನುವುದು ಮೊದಲೇ ನಿಶ್ಚಯವಾಗಿರುತ್ತದೆ ಎಂದು ಧನ್ಯಾ ದೀಪಿಕಾ ಹೇಳಿದ್ದಾರೆ. "ಎಲ್ಲದ್ದಕ್ಕೂ ತಲೆ ಕೆಡಿಸಿಕೊಳ್ಳುವ ಅವಕಶ್ಯಕತೆ ಇಲ್ಲ. ಸರಿಯಾದ ಸಮಯಕ್ಕೆ ತಪ್ಪಾದ ಜಾಗದಿಂದ ಹೊರಗೆ ಬರುವುದು ಕೂಡ ಆಶೀರ್ವಾದ ಆಗಿರುತ್ತೆ.. ಡಿವೋರ್ಸ್ ಕೂಡ ಅಷ್ಟೆ.. ಮದುವೆ ಜೀವನ ಅನ್ನುವುದು ನಿಮಗೆ ಅಲ್ಲಿಗೆ ಕೊನೆ ಅನ್ನಿಸುತ್ತೆ. ಅದು ಬಿಟ್ಟು ಹಂಗಾಯ್ತು, ಹಿಂಗಾಯ್ತು ಎಂದು ತಲೆಕೆಡಿಸಿಕೊಳ್ಳಬಾರದು. ನಿಮ್ಮದು ಎನ್ನುವುದು ನಿಮ್ಮ ಬಾಳಿಗೆ ಬಂದೇ ಬರುತ್ತೆ. ಹೋದ್ರೆ ಹೋಗ್ಲಿ ಬಿಡಿ.. ಒಬ್ಬ ವ್ಯಕ್ತಿ ಬಿಟ್ಟು ಹೋದ ಮಾತ್ರಕ್ಕೆ ಸೂಸೈಡ್ ಮಾಡಿಕೊಳ್ಳುವುದಲ್ಲ. ನೀವು ಹುಟ್ಟಿದ್ದೇಕೆ? ಏನು ಸಾಧನೆ ಮಾಡಬೇಕು ಅದು ಮಾಡಿ. ಮದುವೆ, ಸಂಸಾರ ಇಷ್ಟೇ ಜೀವನ ಅಲ್ಲ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರತಿಯೊಬ್ಬರು ತಮ್ಮ ಮೈಂಡ್‌ಸೆಟ್ ಬದಲಿಸಿಕೊಂಡರೆ ಸಮಾಜ ಬದಲಾಗುತ್ತದೆ. ಎಷ್ಟು ಜನ ಒಲ್ಲದ ರಿಲೇಷನ್‌ಶಿಪ್‌ನಲ್ಲಿ ಇರ್ತಾರೆ. ನಿರ್ಧಾರ ತೆಗೆದುಕೊಳ್ಳುವುದು ಅವರ ನಿರ್ಧಾರ. ಅದಕ್ಕೂ ಸಮಾಜಕ್ಕೂ ಸಂಬಂಧ ಇಲ್ಲ ಎಂದು ದೀಪಿಕಾ ತಿಳಿಸಿದ್ದಾರೆ. "ಜನ ಜಡ್ಜ್ ಮಾಡೋಕೆ ಮುಂದೆ ಇರ್ತಾರೆ. ಆದ್ರೆ ಕಷ್ಟ ಎಂದಾಗ ಸಹಾಯ ಮಾಡಲ್ಲ. ಅಂತಹವರಿಗೆ ರಿಯಾಕ್ಟ್ ಮಾಡಬೇಕಿಲ್ಲ. ಹಾಳಾದ್ರೆ, ಅಯ್ಯೋ ಎಷ್ಟು ದುಡಿದ್ರು ಅಷ್ಟೆ.. ಇವ್ರು ಹಾಳಾಗ್ತಾರೆ ಅಂತಾರೆ. ಡಿವೋರ್ಸ್ ಆದ್ರು ಹಿಂಗೆ ಹೇಳ್ತಾರೆ. ಒಂದು ವೇಳೆ ಇದ್ದಕ್ಕಿದಂತೆ ಕೋಟ್ಯಾಧಿಪತಿ ಆಗಿಬಿಟ್ರೆ, ಅವತ್ತು ಡಿವೋರ್ಸ್ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಇವತ್ತು ಸಾಧಿಸಿದ್ದಾಳೆ, ಅವಳ ಧೈರ್ಯ ಮೆಚ್ಚಬೇಕು ಅಂತಾರೆ. ಜನ ಹೆಂಗಿದ್ರು ಮಾತಾಡ್ತಾರೆ ಎಂದು ಧನ್ಯಾ ದೀಪಿಕಾ ನಕ್ಕಿದ್ದಾರೆ.

ಸಂಸಾರ ಅಂದ್ರೆ ಹೊಂದಾಣಿಕೆ. ಅರೇಂಜ್ ಮ್ಯಾರೇಜ್‌ನಲ್ಲಿ ವ್ಯಕ್ತಿಗಳು ಯಾರು ಎನ್ನವುದು ಗೊತ್ತಿರಲ್ಲ. ಮದುವೆ ಮಾಡ್ಕೊಂಡು ಬಂದು ನಮ್ಮ ಅಪ್ಪ- ಅಮ್ಮನನ್ನು ನೋಡ್ಕೊ ಅನ್ನೋದು ಸರಿಯಲ್ಲ. ಮೊದಲು ಅಪ್ಪ-ಅಮ್ಮನನ್ನು ನೋಡಿಕೊಳ್ಳುವುದು ಆತನ ಜವಾಬ್ದಾರಿ. ಆ ಬಳಿಕ ನಮ್ಮದು. ಇದರಲ್ಲೇ ಜೀವನ ಕಳೆದರೆ ಮುಂದೆ ಹೇಗೆ. ಮದುವೆ ಅಂದ್ರೆ ದಂಪತಿ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಧನ್ಯಾ ದೀಪಿಕಾ ಸಲಹೆ ನೀಡುತ್ತಾರೆ. ಗಂಡ-ಹೆಂಡತಿ ಇಬ್ಬರೂ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಬೇರೆಯವರು ನಡುವೆ ಬರಬಾರದು. ಇದು ಹೇಳುವುದು ಸುಲಭ, ಅನುಸರಿಸುವುದು ಕಷ್ಟ. ಅದಕ್ಕೆ ಮೆಡಿಟೇಷನ್ ಮಾಡಿ ಅದರಿಂದ ಪ್ರಯೋಜನವಾಗುತ್ತದೆ ಎಂದಿದ್ದಾರೆ.

ಹಳೇ ಕಾಲದಲ್ಲಿ ಮಕ್ಕಳು ಜಾಸ್ತಿ ಇರ್ತಿದ್ರು. ಒಬ್ಬಳು ಡಿವೋರ್ಸ್ ತಗೊಂಡು ಬಂದು ಮನೆಯಲ್ಲಿ ಕೂತ್ರೆ ಉಳಿದವರ ಮದುವೆ ಮಾಡುವುದು ಕಷ್ಟ ಅಂತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಹುಡುಗಿ ಕೂಡ ಹುಡುಗನ ರೀತಿ ದುಡಿಯುತ್ತಾಳೆ. ಇಬ್ಬರು ಮನೆಯ ಕೆಲಸಗಳನ್ನು ಹಂಚಿಕೊಳ್ಳಬೇಕು. ಬಹಳ ಸಣ್ಣ ವಿಷಯಕ್ಕೆ ಡಿವೋರ್ಸ್ ಆಗುತ್ತದೆ ಎಂದು ದೀಪಿಕಾ ವಿವರಿಸಿದ್ದಾರೆ. ಬೇರೆಯವರ ಸಂಸಾರದ ಬಗ್ಗೆ ಮಾತನಾಡುವುದಕ್ಕಿಂತ ನಮ್ಮದು ನಾವು ನೋಡಿಕೊಳ್ಳಬೇಕು. ಡಿವೋರ್ಸ್ ನಿಮ್ಮ ಕ್ಯಾರೆಕ್ಟರ್ ಏನು, ಡಿವೋರ್ಸ್ ನಿಮ್ಮ ಸಾಮರ್ಥ್ಯ ಏನು ಎಂದು ನಿರ್ಧರಿಸಲ್ಲ.. ಅದು ಜೀವನದ ಒಂದು ಭಾಗ ಅಷ್ಟೆ ಎಂದು ಹೇಳಿದ್ದಾರೆ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಧನ್ಯಾ ದೀಪಿಕಾ ನಿರಾಕರಿಸಿದ್ದಾರೆ. ನಾನು ಯಾವುದೇ ವಿಚಾರ ಹಂಚಿಕೊಳ್ಳಲು ಇಷ್ಟಪಡಲ್ಲ ಎಂದು ತಿಳಿಸಿದ್ದಾರೆ. ಇನ್ನು ನಾನು ಅವಕಾಶಗಳಿಲ್ಲದೇ ಮೇಕರ್ ಆರ್ಟಿಸ್ಟ್ ಆಗಿದ್ದೀನಿ ಎನ್ನುವುದು ಸುಳ್ಳು. ನಟನೆ ಜೊತೆಗೆ ಖಾಲಿ ಸಮಯದಲ್ಲಿ ಬೇರೆ ಏನಾದರೂ ಮಾಡೋಣ ಅನ್ನಿಸ್ತು. ಮೇಕಪ್ ಮಾಡುವ ಬಗ್ಗೆ ಆಸಕ್ತಿ ಇತ್ತು. ಅದಕ್ಕೆ ಮಾಡ್ತಿದ್ದೀನಿ. ಅದನ್ನು ಆದಾಯದ ಮೂ ಮಾಡಿಕೊಂಡಿದ್ದೀನಿ. ಬೇರೆಯವರಿಗೂ ಹೇಳಿಕೊಡ್ತೀನಿ ಎಂದು ತಿಳಿಸಿದ್ದಾರೆ.

Read more about: actress kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X