For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ನಟಿ ದಿವ್ಯಾ ನಿಧನರಾದ ಬೆನ್ನಲ್ಲೇ ಪತಿ ನೀಡಿದ ಚಿತ್ರಹಿಂಸೆಯ ರಹಸ್ಯ ಬಯಲು

  |

  ಕೊರೊನಾದಿಂದ ಇತ್ತೀಚಿಗೆ ನಿಧನ ಹೊಂದಿದ ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟಿ ದಿವ್ಯಾ ಭಟ್ನಾಗರ್ ಕೌಟುಂಬಿಕ ಕಲಹದ ವಿಚಾರ ಈಗ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ವರದಿ ಬಂದ ಬಳಿಕ ದಿವ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಉಸಿರಾಟ ಸಮಸ್ಯೆಯಿಂದ ದಿವ್ಯಾ ಭಟ್ನಾಗರ್ ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

  ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿವ್ಯಾ ನವೆಂಬರ್ 7ರಂದು ನಿಧನ ಹೊಂದಿದ್ದಾರೆ. 34 ವರ್ಷದ ನಟಿ ದಿವ್ಯಾ ನಿಧನಕ್ಕೆ ಸ್ನೇಹಿತರು ಮತ್ತು ಕಿರುತೆರೆ ಲೋಕ ಕಂಬನಿ ಮಿಡಿದಿದೆ. ದಿವ್ಯಾ ನಿಧನದ ಬಳಿಕ ಅವರ ಕುಟುಂಬದ ಕಲಹದ ವಿಚಾರ ಇದೀಗ ಸುದ್ದು ಮಾಡುತ್ತಿದೆ.

  ಕೊರೊನಾ ಕ್ಕೆ ಬಲಿಯಾದ ಧಾರಾವಾಹಿ ನಟಿ ದಿವ್ಯಾಕೊರೊನಾ ಕ್ಕೆ ಬಲಿಯಾದ ಧಾರಾವಾಹಿ ನಟಿ ದಿವ್ಯಾ

  ದಿವ್ಯಾ ಸಹೋದರ ದೇವಾಶಿಶ್ ಈ ಬಗ್ಗೆ ಸಂದರ್ಶನವೊಂದರಲ್ಲಿ, ದಿವ್ಯಾಗೆ ಪತಿ ಗಗನ್ ತುಂಬಾ ಹಿಂಸೆ ನೀಡಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಪತಿ ಹಿಂಸೆ ನೀಡುತ್ತಿದ್ದ ಬಗ್ಗೆ ದಿವ್ಯಾ ಬರೆದ ಪತ್ರ ಸಿಕ್ಕಿದೆ ಎಂದು ಸಹೋದರ ದೇವಾಶಿಶ್ ಹೇಳಿದ್ದಾರೆ.

  ಗಗನ್ ಮದುವೆಯಾದ ಬಳಿಕ ದಿವ್ಯಾರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಹಿಂಸಿಸಲು ಪ್ರಾರಂಭಿಸಿದರು. ದಿವ್ಯಾ ಬರೆದ ಪತ್ರದಲ್ಲಿ ಈ ಬಗ್ಗೆ ಹೇಳಿದ್ದಾರೆ. ನಾವು ನಿನ್ನೆ ಅವಳ ಬೀರಿನಲ್ಲಿ ಪತ್ರ ನೋಡಿದೆವು. ಬಳಿಕ ಆಸ್ಪತ್ರೆಯಲ್ಲಿ ಅವಳನ್ನು ನೋಡಲು ಹೋದಾಗ ಆಕೆಗೆ ಸ್ಟ್ರಾಂಗ್ ಆಗಿ ಇರುವಂತೆ ಹೇಳಿದ್ದೆ' ಎಂದು ದಿವ್ಯಾ ಸಹೋದರ ಹೇಳಿದ್ದಾರೆ.

  ಈ ಹಿಂದೆಯೇ ದಿವ್ಯಾ ಪತಿಯಿಂದ ಹಿಂಸೆ ಅನುಭವಿಸುತ್ತಿದ್ದಾರೆ ಎನ್ನುವುದು ಬಹಿರಂಗವಾಗಿತ್ತು. ಗಗನ್, ದಿವ್ಯಾಗೆ ಚಿತ್ರಹಿಂಸೆ ಕೊಡುತ್ತಿದ್ದ ಬಗ್ಗೆ ನಟಿ ದೇವೊಲೀನಾ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದರು. ವಿಡಿಯೋದಲ್ಲಿ ದಿವ್ಯಾ ಪತಿ ಗಗನ್ ಅವರನ್ನು ದೇವೊಲೀನಾ ತರಾಟೆಗೆ ತೆಗೆದುಕೊಂಡಿದ್ದರು.

  ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada

  ದಿವ್ಯಾ ಭಟ್ನಾಗರ್ 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದದ್ರು. ಧಾರಾವಾಹಿ ಜೊತೆಗೆ ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಯೇ ರಿಶ್ತಾ ಕ್ಯಾ ಕೆಹಲಾತಾ ಹೈ, ಉಡಾನ್, ಜೀತ್ ಗಯಿ ತೋ ಪಿಯಾ ಮೋರೆ, ವಿಶ್ ಇನ್ನೂ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

  English summary
  Late Actress Divya Bhatnagar's brother says he found a note, She had stated that her husband tortures her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X