For Quick Alerts
  ALLOW NOTIFICATIONS  
  For Daily Alerts

  ಪತಿ ಮನೆಯಲ್ಲಿ ನಟಿ ದಿವ್ಯಾ ರಂಪಾಟ: ವಿಡಿಯೋ ವೈರಲ್‌ ಮಾಡಿದ ಅಮ್ಜದ್‌ ಖಾನ್‌

  |

  'ಆಕಾಶ ದೀಪ' ಧಾರಾವಾಹಿ ಮೂಲಕ ಕರ್ನಾಟಕದಲ್ಲಿ ಪ್ರಖ್ಯಾತಿ ಗಳಿಸಿದ್ದ ನಟಿ ದಿವ್ಯಾ ಶ್ರೀಧರ್‌ ವೈಯಕ್ತಿಕ ಬದುಕು ಅತಂತ್ರವಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ಮಾಡುವ ಮೂಲಕ ದಿವ್ಯಾ ಶ್ರೀಧರ್‌ ನಟನೆಗೆ ಕಾಲಿಟ್ಟಿದ್ದರು. ಆದರೆ ದಿವ್ಯಾ ಶ್ರೀಧರ್‌ ಅಭಿನಯದ ಚಿತ್ರಗಳು ಅಷ್ಟೇನೂ ಸದ್ದು ಮಾಡಿರಲಿಲ್ಲ. ಬಳಿಕ ದಿವ್ಯಾ ಶ್ರೀಧರ್‌ ಕಿರುತೆರೆಯತ್ತ ಮುಖಮಾಡಿದರು.

  ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶ ದೀಪ' ಧಾರಾವಾಹಿಯಲ್ಲಿ ದಿವ್ಯಾ ಶ್ರೀಧರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿ ದಿವ್ಯಾ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. ಕರ್ನಾಟದಲ್ಲಿ ಮನೆ ಮಾತಾಗಿದ್ದ ದಿವ್ಯಾ ಬಳಿ ತಮಿಳು ಕಿರುತೆರೆಗೆ ಹೆಜ್ಜೆ ಇಟ್ಟಿದ್ದರು. ತಮಿಳು ಕಿರುತೆರೆಯಲ್ಲೂ ಉತ್ತಮ ಹೆಸರು ಮಾಡಿದ್ದ ದಿವ್ಯಾ ನಿರಂತರವಾಗಿ ಧಾರಾವಾಹಿಯ ಪ್ರಮುಖ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದರು.

  'ಆಕಾಶ ದೀಪ' ನಟಿಗೆ ಪತಿಯಿಂದ ಕಿರುಕುಳ: ಸಹಾಯಕ್ಕೆ ನಿಂತ ಮಹಿಳಾ ಆಯೋಗ'ಆಕಾಶ ದೀಪ' ನಟಿಗೆ ಪತಿಯಿಂದ ಕಿರುಕುಳ: ಸಹಾಯಕ್ಕೆ ನಿಂತ ಮಹಿಳಾ ಆಯೋಗ

  ಇದೀಗ ನಟಿ ದಿವ್ಯಾ ಶ್ರೀಧರ್‌ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು, ದಿವ್ಯಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ನಟಿ ದಿವ್ಯಾ ಶ್ರೀಧರ್‌ ಎರಡು ದಿನಗಳ ಹಿಂದೆ ಏಕಾಏಕಿ ಇನ್ಸ್ಟಾಗ್ರಾಮ್‌ ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದರು. ನನ್ನ ಪತಿ ನಟ ಅಮ್ಜದ್‌ ಖಾನ್‌ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ನಾನೀಗ ಆಸ್ಪತ್ರೆಯಲ್ಲಿದ್ದೇನೆ, ನಾನು ಗರ್ಭಿಣಿ ಎನ್ನುವುದುದನ್ನು ನೋಡದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ. ನಾನೀಗ ಆಸ್ಪತ್ರೆಯಲ್ಲಿದ್ದೇನೆ ನನಗೆ ಗರ್ಭಪಾತವಾಗಬಹುದು ಎಂದು ದಿವ್ಯಾ ಶ್ರೀಧರ್‌ ಕಣ್ಣೀರು ಹಾಕಿದ್ದರು. ಈ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು.

  ನಿನ್ನೆ (ಅಕ್ಟೋಬರ್‌ 9) ದಿವ್ಯಾ ಶ್ರೀಧರ್‌ ಹಾಗೂ ನಟ ಅಮ್ಜದ್‌ ಖಾನ್‌ ಪ್ರಕರಣದಲ್ಲಿ ಕರ್ನಾಟಕ ಮಹಿಳಾ ಆಯೋಗದ ಅಧಿಕಾರಿಗಳು ಪ್ರವೇಶ ಮಾಡಿದ್ದಾರೆ. ದಿವ್ಯಾ ಶ್ರೀಧರ್ ಕರ್ನಾಟಕ ಮೂಲದ ನಟಿಯಾಗಿರುವುದರಿಂದ ಮಹಿಳಾ ಆಯೋಗ ನಟಿಯ ಪರ ತಮಿಳು ನಾಡು ಸರ್ಕಾರಕ್ಕೆ ಮನವಿ ಮಾಡಿದೆ. ಪತಿಯಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಒತ್ತಾಯಿಸಿದ್ದರು.

  ಇನ್ನು ನಿನ್ನೆ(ಅಕ್ಟೋಬರ್‌ 9) ಡಿಸ್ಚಾರ್ಜ್ ಆಗಿರುವ ದಿವ್ಯಾ ಶ್ರೀಧರ್‌ ಆಸ್ಪತ್ರೆಯಿಂದ ನೇರವಾಗಿ ತನ್ನ ಪರಿ ಅಮ್ಜಾದ್‌ ಖಾನ್‌ ಮನೆಗೆ ತೆರಳಿದ್ದಾರೆ. ಈ ವೇಳೆ ದಿವ್ಯಾ ನನಗೆ ಯಾಕೆ ಮೋಸ ಮಾಡಿದೆ ಎಂದು ಅಮ್ಜದ್‌ ಖಾನ್‌ ಅವರನ್ನು ಪ್ರಶ್ನಿಸಿ ರಂಪಾಟ ಮಾಡಿದ್ದಾರೆ. ದಿವ್ಯಾ ಶ್ರೀಧರ್‌ ರಂಪಾಟ ಮಾಡುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಅಮ್ಜಾದ್‌ ಖಾನ್‌ ವೈರಲ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ದಿವ್ಯಾ ಶ್ರೀಧರ್‌ ಹಾಗೂ ನಟ ಅಮ್ಜಾದ್‌ ಖಾನ್‌ ಒಬ್ಬೊರಿಗೊಬ್ಬರು ನೀನು ಮೋಸ ಮಾಡಿದೆ, ನೀನು ಮೋಸ ಮಾಡಿದೆ ಎಂದು ಪರಸ್ಪರ ಆರೋಪ ಮಾಡಿಕೊಂಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗಿದೆ.

  ಸುಮಾರು 5 ವರ್ಷಗಳಿಂದ ಲೀವಿಂಗ್‌ ಟುಗೆದರ್‌ ರಿಲೆಷನ್‌ಶಿಪ್‌ನಲ್ಲಿದ್ದ ಈ ಜೋಡಿ ದಿವ್ಯಾ ಶ್ರೀಧರ್‌ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದ ಬಳಿಕ ಈ ವರ್ಷದ ಆರಂಭದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇದೀಗ ದಿವ್ಯಾ ತಾನು ಗರ್ಭಿಣಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದು, ಮದುವೆಯಾಗಿ ಒಂದು ವರ್ಷದೊಳಗೆ ನಟ ಹಾಗೂ ನಟಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ.

  English summary
  Actress Divya Sridhar fight with her husband Amjad Khan Video viral.
  Monday, October 10, 2022, 10:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X