ಸಿನಿಮಾ ಆಸೆ ಹೊತ್ತು ಬಂದವರು ಮಿಂಚಿದ್ದು ಮಾತ್ರ ಕಿರುತೆರೆಯಲ್ಲಿ: ಯಾರು ಆ ನಟಿಯರು?
ನಟ ನಟಿಯರು ಎಂದ ಮೇಲೆ ಅವರಿಗೆ ಹಿರಿತೆರೆಯಲ್ಲಿ ಮಿಂಚಬೇಕು ಎಂಬುದೇ ಕನಸು. ಮಾತ್ರವಲ್ಲ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯಬೇಕು ಎಂಬುದೇ ಅವರ ಆಶಯ. ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ತಮ್ಮ ಕನಸನ್ನು ನನಸು ಮಾಡುವುದಕ್ಕಾಗಿ ನಟನಟಿಯರು ತುಂಬಾನೇ ಕಷ್ಟಪಡುತ್ತಾರೆ.
ಇನ್ನು ಇದರ ಜೊತೆಗೆ ಕಿರುತೆರೆಯ ಮೂಲಕ ನಟನೆಗೆ ಬಂದು ಹಿರಿತೆರೆಯಲ್ಲಿ ನಟನಾ ಕಂಪನ್ನು ಹಲವರು ಪಸರಿಸುತ್ತಾರೆ. ಆದರೆ ಇನ್ನು ಕೆಲವರು ಕಿರುತೆರೆಯಿಂದ ಹಿರಿತೆರೆಗೆ ಹೋಗಿದ್ದರೂ ಮತ್ತೆ ಕಿರುತೆರೆಗೆ ಮರಳಿದ್ದು ನಟನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ.

ದಿವ್ಯ ಸುರೇಶ್
'ಥರ್ಡ್ ಕ್ಲಾಸ್', 'ಟೆಂಪ್ಟ್ ರಾಜ' ಇತ್ಯಾದಿ ಸಿನಿಮಾಗಳಲ್ಲಿ ನಟಿಸಿ ನಂತರ ಬಿಗ್ ಬಾಸ್ ಮೂಲಕ ಬಹಳಷ್ಟು ಪಾಪ್ಯುಲಾರಿಟಿ ಪಡೆದ ನಟಿ ದಿವ್ಯಾ ಸುರೇಶ್ ಸದ್ಯಕ್ಕೆ 'ತ್ರಿಪುರ ಸುಂದರಿ' ಎಂಬ ಸೂಪರ್ ನ್ಯಾಚುರಲ್ ಫ್ಯಾಂಟಸಿ ಧಾರಾವಾಹಿ ಮೂಲಕ ಬಹಳಷ್ಟು ಕನ್ನಡ ಕಿರುತೆರೆ ವೀಕ್ಷಕರ ಪ್ರೀತಿಯ ಅಭಿಮಾನವನ್ನು ಗಳಿಸುತ್ತಿದ್ದಾರೆ.

ಗೌತಮಿ ಜಾದವ್
ಹಲವಾರು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ ನಟಿ ಗೌತಮಿ ಜಾದವ್ ಅವರು ಕೊನೆಗೆ ಯಶಸ್ಸು ಕಂಡಿದ್ದು ಸತ್ಯ ಧಾರಾವಾಹಿಯಲ್ಲಿ. ಅದು ಕೂಡಾ ಟಾಮ್ ಬೈ ಪಾತ್ರದ ಮೂಲಕ. ಹೌದು ಒಂದು ವಿಭಿನ್ನ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಗೌತಮಿ ಜಾಧವ್ ಅವರು ಬಹಳಷ್ಟು ಯಶಸ್ಸನ್ನು ಗಳಿಸುತ್ತಾರೆ. ತಮ್ಮ ನಟನೆ ಹಾಗೂ ದಿಟ್ಟ ಆಟಿಟ್ಯೂಡ್ ಮೂಲಕ ಕಿರುತೆರೆ ಪ್ರಿಯರ ಮನೆಗೆದ್ದಿದ್ದಷ್ಟೇ ಇಲ್ಲದ ಎಷ್ಟೋ ಹೆಣ್ಣುಮಕ್ಕಳಿಗೆ ಇನ್ಸ್ಪಿರೇಷನ್ ಆಗಿದ್ದಾರೆ.

ವೈಷ್ಣವಿ ಗೌಡ
ಮುದ್ದುಮುಖದ ಗುಳಿ ಕೆನ್ನೆ ಸುಂದರಿ ವೈಷ್ಣವಿ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ?! 'ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟವರು ನಂತರ ಬಹಳಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಇವರಿಗೆ 'ಅಗ್ನಿಸಾಕ್ಷಿ' ಧಾರಾವಾಹಿ ಬಹಳಷ್ಟು ಯಶಸ್ಸನ್ನು ತಂದು ಕೊಟ್ಟಿತ್ತು. ನಂತರ ಬಿಗ್ ಬಾಸ್‌ನಲ್ಲಿಯೂ ಬಹಳಷ್ಟು ಪಾಪ್ಯುಲಾರಿಟಿ ಪಡೆದವರು ಕಿರುತೆರೆ ಮಾತ್ರವಲ್ಲದೆ ಎರಡು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 'ಬೆಕ್ಕು' ಹಾಗೂ 'ಗಿರಿಗಿಟ್ಲಿ' ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ ವೈಷ್ಣವಿ ಗೌಡ ನಂತರ 'ಸೀತಾರಾಮ' ಎಂಬ ಧಾರಾವಾಹಿಯಲ್ಲಿ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.

ದೀಪಿಕಾ ದಾಸ್
'ದೂದ್ ಸಾಗರ್', 'ಕಾಂಜಿ ಪಿಂಜಿ', 'ಮನಸಾರೆ' ಇತ್ಯಾದಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ದೀಪಿಕಾ ದಾಸ್ ಅವರು ನಂತರ ಕಿರುತೆರೆಗೆ 'ನಾಗಿಣಿ'ಯಾಗಿ ಪರಿಚಿತರಾದರು. 'ನಾಗಿಣಿ' ಎಂಬ ಸೂಪರ್ ನ್ಯಾಚುರಲ್ ಧಾರಾವಾಹಿ ಮೂಲಕ ಬಹಳಷ್ಟು ಯಶಸ್ಸನ್ನು ಪಡೆದವರು. ಬಿಗ್ ಬಾಸ್ ಸೀಸನ್ ಏಳು ಹಾಗೂ ಒಂಬತ್ತರಿಂದ ಇನ್ನು ಹೆಚ್ಚು ಪಾಪ್ಯುಲಾರಿಟಿಯನ್ನು ಪಡೆದ ಈಕೆ ಇವರ ಅಭಿನಯವಷ್ಟೇ ಅಲ್ಲದೆ ಬಿಗ್ ಬಾಸ್ ಮೂಲಕ ಇವರ ನಡತೆಯನ್ನು ಜನರು ಬಹಳ ಮೆಚ್ಚಿಕೊಂಡಿದ್ದಾರೆ.

ಐಶ್ವರ್ಯ ಶಿಂಧೋಗಿ
ಸದ್ಯಕ್ಕೆ 'ಸೂಪರ್ ಕ್ವೀನ್' ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ನಟಿ ಐಶ್ವರ್ಯಾ ಶಿಂಧೋಗಿ ಮೊದಲು 'ಮಮ್ಮಿ ಸೇವ್ ಮಿ', 'ಸಪ್ನೋ ಕಿ ರಾಣಿ' ಇತ್ಯಾದಿ ಸಿನಿಮಾಗಳಲ್ಲಿ ಕಾಣಿಸಿಕೊಂಡು ನಂತರ 'ನಾಗಿಣಿ 2' ಧಾರಾವಾಹಿಯಲ್ಲಿ ಮಾಯಾಂಗನೆ ಪಾತ್ರ ಮಾಡುವ ಮೂಲಕ ಕಿರುತೆರೆಗೆ ಮರಳಿದ್ದು ಬಹಳಷ್ಟು ಯಶಸ್ಸನ್ನು ಗಳಿಸಿದರು. ನಂತರ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ವಿಲನ್ ಐಶ್ವರ್ಯಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಮತ್ತಷ್ಟು ಹೆಸರು ಮಾಡಿದ ಈಕೆ ತಮ್ಮ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನೆಗೆದ್ದಿದ್ದಾರೆ. ಸಿನಿಮಾ ಮೂಲಕ ಕ್ಷೇತ್ರಕ್ಕೆ ಕಾಲಿಟ್ಟ ಐಶ್ವರ್ಯಾ ನಂತರ ಕಿರುತೆರೆಯಲ್ಲಿ ಹೆಚ್ಚು ಹೆಸರು ಮಾಡಿದ ಕೆಲವೇ ನಟಿಯರಲ್ಲಿ ಇವರೂ ಒಬ್ಬರು.


Click it and Unblock the Notifications











