Divya Suresh: "ಸ್ಟ್ರಾಂಗ್ ಸ್ರೀ ಪಾತ್ರದಲ್ಲಿ ನಟಿಸುವುದಕ್ಕೆ ಎಂದಿಗೂ ರೆಡಿ" ಎಂದ ನಟಿ ದಿವ್ಯಾ ಸುರೇಶ್

By ಅನಿತಾ ಬನಾರಿ

ನಟಿಯಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಮಾಡೆಲ್ ದಿವ್ಯಾ ಸುರೇಶ್, ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಗಂಧರ್ವ ಕನ್ಯೆ ಆಮ್ರಪಾಲಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ದಿವ್ಯಾ ಸುರೇಶ್.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನ ಹೆಂಡ್ತಿ ಎಂಬಿಬಿಎಸ್' ಧಾರಾವಾಹಿಯ ಗೀತಾಳಾಗಿ ಕಿರುತೆರೆಗೆ ಕಾಲಿಟ್ಟಿದ್ದರು ನಟಿ ದಿವ್ಯಾ ಸುರೇಶ್. ಕಿರುತೆರೆ ನಂತರ ಹಿರಿತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸಿದ ಈಕೆ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದು ರಿಯಾಲಿಟಿ ಶೋ ಮೂಲಕ. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿದ ಈಕೆ ಅಲ್ಲಿ ತಮ್ಮ ನಡೆ, ನುಡಿಯ ಮೂಲಕ ವೀಕ್ಷಕರಿಗೆ ಮಗದಷ್ಟು ಹತ್ತಿರವಾದರು.‌

Divya Suresh said that I like to act in different types of roles

ಇದೀಗ ತೆಲುಗು ಧಾರಾವಾಹಿಯೊಂದರಲ್ಲಿ ಖಳನಾಯಕಿಯಾಗಿ ನಟಿಸುತ್ತಿರುವ ಈಕೆಗೆ ಸಿನಿಮಾಗಳಿಂದಲೂ ನಟಿಸುವ ಅವಕಾಶಗಳು ಬರುತ್ತಿವೆಯಂತೆ. ಈ ಬಗ್ಗೆ ಖಾಸಗಿ ವಾಹನಿಯ ಸಂದರ್ಶನದಲ್ಲಿ ನಟಿ ದಿವ್ಯ ಸುರೇಶ್ ಮಾತನಾಡಿದ್ದಾರೆ.

"ಪಾತ್ರ ಚಿಕ್ಕದು ದೊಡ್ಡದು ಎಂಬ ವ್ಯತ್ಯಾಸವೇನಿಲ್ಲ. ಯಾವುದೇ ಪಾತ್ರ ಕೊಟ್ಟರೂ ಅದನ್ನು ನಿಭಾಯಿಸುವ ಕಲೆ ನಟರಿಗಿರಬೇಕು. ಹಾಗಾಗಿ ನನಗೂ ಇಂಥದ್ದೇ ಪಾತ್ರ ಬೇಕು ಎಂಬ ಯಾವುದೇ ಷರತ್ತುಗಳಿಲ್ಲ. ಒಳ್ಳೆಯ ಪಾತ್ರ ಸಿಕ್ಕಿದರೆ ನಾನು ಖಂಡಿತ ಮಾಡುತ್ತೇನೆ. ಸಮಯದ ಲಿಮಿಟೇಶನ್ಸ್ ಕೂಡ ಇಲ್ಲ. ಕೆಲವೇ ಕ್ಷಣಗಳ ಪಾತ್ರವಾದರೂ ಸರಿ, ಅದು ಜನರಿಗೆ ತಲುಪುತ್ತದೆ ಎಂದರೆ ನಾನು ಮಾಡಲು ಸಿದ್ಧ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ದಿವ್ಯಾ ಸುರೇಶ್ ಹಂಚಿಕೊಂಡಿದ್ದಾರೆ.

Divya Suresh said that I like to act in different types of roles

"ನಟಿಯರು ಯಾವಾಗಲೂ ನಾಯಕಿಯಾಗಿಯೇ ಕಥೆಗಳಲ್ಲಿ ಧಾರಾವಾಹಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲ, ಖಳನಾಯಕಿಯಾಗಿ ಅಥವಾ ಇನ್ಯಾವುದೇ ರೀತಿಯ ಸ್ಟ್ರಾಂಗ್ ರೋಲ್‌ಗಳಲ್ಲಿಯೂ ನಾವು ಕಾಣಿಸಿಕೊಳ್ಳಬಹುದು. ಇತ್ತೀಚೆಗೆ ವಿಭಿನ್ನವಾದ ಸ್ತ್ರೀ ಪಾತ್ರಗಳನ್ನು ಬರೆಯುತ್ತಿರುವುದು ಬಹಳ ಶ್ಲಾಘನೀಯ ವಿಚಾರ. ಇಂತಹ ಪಾತ್ರಗಳು ಬದಲಾಗುತ್ತಿರುವುದು ಇಂದಿನ ಕಾಲಮಾನಕ್ಕೆ ಹಿಡಿದ ಕೈಗನ್ನಡಿ. ಇಂತಹ ವಿಭಿನ್ನ ವಿಶೇಷ ಸ್ಟ್ರಾಂಗ್ ಸ್ತ್ರೀ ಪಾತ್ರಗಳನ್ನು ಮಾಡಲು ನಾನು ಸದಾ ತಯಾರಾಗಿರುತ್ತೇನೆ" ಎಂದಿದ್ದಾರೆ ನಟಿ ದಿವ್ಯ ಸುರೇಶ್.

More from Filmibeat

English summary
Divya Suresh said that artists should have the ability to handle any role
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X