ಬಾಡಿ ಶೇಮಿಂಗ್ ಅನುಭವ ಬಿಚ್ಚಿಟ್ಟು ಕಣ್ಣೀರು ಹಾಕಿದ ದಿವ್ಯ ಸುರೇಶ್

ಕಾಲೇಜ್ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ದಿವ್ಯಾ ಸುರೇಶ್ ಮಾಡಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು. 2017ರಲ್ಲಿ ನಡೆದ 'ಸೌತ್ ಇಂಡಿಯಾ ಮಿಸ್' ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇಲ್ಲಿಂದಲೇ ದಿವ್ಯ ಅವರ ವೃತ್ತಿ ಜೀವನ ಆರಂಭವಾಗಿತ್ತು.

ಅದಾದ ಬಳಿಕ ಕನ್ನಡ-ತೆಲುಗು ಚಲನಚಿತ್ರಗಳಲ್ಲಿ ನಟಿಸಿದರು. ಜೊತೆಗೆ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ದಿವ್ಯ ಸುರೇಶ ಒಂದು ಸಮಯದಲ್ಲಿ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರು. ಕಾಲೇಜಿನಲ್ಲಿ ಓದುತ್ತಿದ್ದಾಗ ಎಲ್ಲರೂ ರೇಗಿಸುತ್ತಿದ್ದರು ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಮುಂದೆ ಓದಿ....

ತಲೆಗೆ ಎಣ್ಣೆ ಹಾಕ್ಕೊಂಡು ಬರ್ತಾಳೆ

ತಲೆಗೆ ಎಣ್ಣೆ ಹಾಕ್ಕೊಂಡು ಬರ್ತಾಳೆ

''ಪಿಯುಸಿ ಮುಗಿಸಿ ಡಿಗ್ರಿ ಮಾಡುವಾಗ ನಾನು ಬಹಳ ಮುಗ್ದ ರೀತಿಯಲ್ಲಿದ್ದೇ. ತಲೆಗೆ ಎಣ್ಣೆ ಹಾಕ್ಕೊಂಡು ಚೂಡಿದಾರ್ ಹಾಕ್ಕೊಂಡು ಕಾಲೇಜ್‌ಗೆ ಹೋಗ್ತಿದ್ದೆ. ಕೆಲವರು ಇದನ್ನೇ ಮಹಾ ಅಪರಾಧ ಎಂಬಂತೆ ಕಾಲೆಳೆಯುತ್ತಿದ್ದರು. ಬಾಡಿ ಶೇಮಿಂಗ್ ಮಾಡ್ತಿದ್ದರು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈಗ ಸೂಪರ್ ಮಾಡೆಲ್

ಈಗ ಸೂಪರ್ ಮಾಡೆಲ್

''ನಾಲ್ಕು ವರ್ಷದ ಹಿಂದೆ ಬಾಡಿ ಶೇಮಿಂಗ್ ಮಾಡ್ತಿದ್ದ ಹುಡುಗಿ ಈಗ ಸೂಪರ್ ಮಾಡೆಲ್ ಎಂದು ಹೇಳಿದಾಗ ತುಂಬಾ ಖುಷಿ ಆಯ್ತು. ಅಂದು ತುಂಬಾ ಎತ್ತರ ಇದ್ದಾಳೆ, ಚೂಡಿದಾರ್ ಹಾಕ್ಕೊಂಡು ಬರ್ತಾಳೆ ಅಂದಿದ್ದವರು ಈಗ ನನ್ನನ್ನು ನೋಡಿ ತುಂಬಾ ಚೆನ್ನಾಗಿದ್ದಾಳೆ ಅಂತಾರೆ. ದಯವಿಟ್ಟು ಯಾರಿಗೂ ಬಾಡಿ ಶೇಮಿಂಗ್ ಮಾಡಬೇಡಿ'' ಎಂದು ಭಾವುಕರಾದರು.

ನಾನೊಬ್ಬಳು ಸ್ಫೂರ್ತಿ

ನಾನೊಬ್ಬಳು ಸ್ಫೂರ್ತಿ

''ಈ ವಿಚಾರದಲ್ಲಿ ನಾನು ಇತರೆ ಜನರಿಗೆ ಸ್ಫೂರ್ತಿ. ನಿನ್ನ ಎಷ್ಟೇ ಕೆಟ್ಟದಾಗಿ ನೋಡಿದ್ರು, ಎದ್ದು ನಿಂತ್ಕೊಂಡು ನೋಡು ನಾನು ಗೆದ್ದಿದ್ದೀನಿ ಎಂದು ತೋರಿಸುವುದು ಬಹಳ ಹೆಮ್ಮೆ ಇದೆ. ನೀನು ಎಲ್ಲಿಂದ ಬಂದಿದ್ದೀಯಾ, ನಿನ್ನ ಹಿನ್ನೆಲೆ ಏನು ಎನ್ನುವುದು ಮುಖ್ಯವೇ ಅಲ್ಲ. ನಿನ್ನಲ್ಲಿ ಛಲ ಇರಬೇಕು, ಕನಸು ಕಾಣಬೇಕು, ಅದಕ್ಕೆ ಬೆಲೆ ಕೊಡಬೇಕು'' ಎಂದು ದಿವ್ಯ ಸುರೇಶ್ ಹೇಳಿದ್ದಾರೆ.

ರನ್ನಿಂಗ್ ರೇಸ್‌ನಲ್ಲಿ ಪ್ರಶಸ್ತಿ

ರನ್ನಿಂಗ್ ರೇಸ್‌ನಲ್ಲಿ ಪ್ರಶಸ್ತಿ

ನನ್ನನ್ನು ಬಾಡಿ ಶೇಮಿಂಗ್ ಮಾಡ್ತಿದ್ದವರಿಗೆ ಉತ್ತರ ಕೊಟ್ಟಿದ್ದು ಈ ಪ್ರಶಸ್ತಿ ಮೂಲಕ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಕಾಲೇಜಿನಲ್ಲಿ ರನ್ನಿಂಗ್ ರೇಸ್‌ನಲ್ಲಿ ಪಡೆದ ಪ್ರಶಸ್ತಿ ಬಗ್ಗೆ ದಿವ್ಯ ಹೇಳಿದರು. ''ಚೂಡಿದಾರ್ ಹಾಕ್ಕೊಂಡು ಅಡುಗೆನೂ ಮಾಡ್ತೀನಿ, ಚಡ್ಡಿ ಹಾಕ್ಕೊಂಡು ನಿಮ್ಮಪ್ಪನ ಗಾಡಿನೂ ಓಡಿಸ್ತೀನಿ'' ಎಂದು ಟಾಂಗ್ ಕೊಟ್ಟಿದ್ದನ್ನು ಸ್ಮರಿಸಿಕೊಂಡರು.

More from Filmibeat

English summary
Bigg Boss Kannada 8: Bigg Boss contestant Divya Suresh shares body shaming experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X