Don't Miss!
- Sports
Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್ಗಳಿಗೆ ಆಲೌಟ್
- News
Breaking; ಸಹೋದರನ ವಿರುದ್ಧ ಅಭ್ಯರ್ಥಿ ಘೋಷಿಸಿದ ರೆಡ್ಡಿ!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎಲಿಮಿನೇಟ್ ಆದರೂ ಕೂಡ ವಿಶೇಷ ದಾಖಲೆ ಬರೆದ ದಿವ್ಯಾ ಉರುಡುಗ
ಬಿಗ್‌ಬಾಸ್ ಕನ್ನಡ ಸೀಸನ್ 9ರ ಗ್ರ್ಯಾಂಡ್ ಫಿನಾಲೆ ಶುರುವಾಗಿದೆ. ಪ್ರತಿವರ್ಷ ಶನಿವಾರ, ಭಾನುವಾರ ಶೋ ಪ್ರಸಾರ ಆಗುತ್ತಿತ್ತು. ಆದರೆ ಈ ಬಾರಿ ಶುಕ್ರವಾರ, ಶನಿವಾರ ಗ್ರ್ಯಾಂಡ್ ಫಿನಾಲೆ ಕಳೆಕಟ್ಟಿದೆ. ಈಗಾಗಲೇ ದೊಡ್ಮನೆಯಿಂದ ದಿವ್ಯಾ ಉರುಡುಗ ಹೊರ ಬಂದಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ವಿಶೇಷ ಅಂದರೆ ಹೊಸಬರ ಜೊತೆಗೆ ಕಳೆದ ಹಲವು ಸೀಸನ್‌ಗಳ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಕಳೆದ ಬಾರಿ ಹೋಗಿದ್ದ ದಿವ್ಯಾ ಉರುಡುಗ ಅವರಿಗೂ ಆ ಅವಕಾಶ ಸಿಕ್ಕಿತ್ತು. ಅದನ್ನು ಆಕೆ ಚೆನ್ನಾಗಿಯೇ ಬಳಸಿಕೊಂಡು ವೀಕ್ಷಕರ ಗಮನ ಸೆಳೆದರು. ಉತ್ತಮವಾಗಿ ಆಟ ಆಡಿ ಫೈನಲ್‌ವರೆಗೂ ಬಂದಿದ್ದರು. ಆದರೆ ಕಡಿಮೆ ವೋಟ್ ಸಿಕ್ಕಿದ ಕಾರಣ ದಿವ್ಯಾ ಫಿನಾಲೆಯಿಂದ ಹೊರಬಂದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ ಈ ಬಾರಿ ಫೈನಲಿಸ್ಟ್‌ಗಾಗಿದ್ದರು. ಆದರೆ ಗ್ರ್ಯಾಂಡ್ ಫಿನಾಲೆಯ ಆರಂಭದಲ್ಲೇ ದಿವ್ಯಾ ಉರುಡುಗ ಎಲಿಮಿನೇಟ್ ಆಗಿದ್ದಾರೆ.

2 ಬಾರಿ ಫೈನಲ್‌ಗೆ ದಿವ್ಯಾ
ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ಎಲ್ಲರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಅವಕಾಶ ಸಿಕ್ಕ ಮಾತ್ರಕ್ಕೆ ಎಲ್ಲರೂ ಹೋಗುವುದು ಇಲ್ಲ. ಅಂಥದ್ದರಲ್ಲಿ ದಿವ್ಯಾ ಎರಡೆರಡು ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಸಾಲದ್ದಕ್ಕೆ 2 ಬಾರಿ ಫೈನಲ್ ಪ್ರವೇಶಿಸಿದ ಸ್ಪರ್ಧಿ ದಿವ್ಯಾ ಉರುಡುಗ ಮಾತ್ರ ಎನ್ನಬಹುದು. ಆ ಮೂಲಕ ಅಪರೂಪದ ದಾಖಲೆ ಆಕೆಯ ಪಾಲಾಗಿದೆ. ಬಿಗ್‌ಬಾಸ್ ಕನ್ನಡ ಇತಿಹಾಸದಲ್ಲಿ ಒಬ್ಬರು 2 ಬಾರಿ 100 ದಿನ ಪೂರೈಸಿದ್ದು ಇದೇ ಮೊದಲು. ಇನ್ನು ದಿವ್ಯಾ ವಿನ್ನರ್ ಆಗಿದ್ದರೆ ಹೊಸ ದಾಖಲೆ ನಿರ್ಮಾಣ ಆಗುತ್ತಿತ್ತು.

ಈ ಸಲ ಕೊಂಚ ಡಲ್ ಆಗಿದ್ರಾ?
ಕಳೆದ ಸೀಸನ್‌ನಲ್ಲಿ ಕೆ. ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಜೋಡಿ ಮೋಡಿ ಮಾಡಿತ್ತು. ಇವರಿಬ್ಬರ ಆತ್ಮೀಯ ಒಡನಾಟ ತುಸು ಹೆಚ್ಚೇ ಸುದ್ದಿಯಾಗಿತ್ತು. ಇಬ್ಬರು ಮದುವೆ ಕೂಡ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಾರಿ ಅರವಿಂದ್‌ಗೆ ದೊಡ್ಮನೆ ಎಂಟ್ರಿ ಸಿಗಲಿಲ್ಲ. ಹಾಗಾಗಿ ಏಕಾಂಗಿಯಾಗಿ ದಿವ್ಯಾ ಮನೆ ಒಳಗೆ ಹೋಗಿದ್ದರು. ಅರವಿಂದ್ ಇಲ್ಲದೇ ದಿವ್ಯಾ ಜೋಶ್ ಕಮ್ಮಿ ಆಗಿತ್ತು. ಆದರೂ ಕೂಡ ಟಾಸ್ಕ್‌ಗಳ ವಿಚಾರದಲ್ಲಿ ಹಿಂದೆ ಬೀಳಲಿಲ್ಲ. ಅದೇ ಆಕೆಯನ್ನು ಫೈನಲ್‌ವರೆಗೂ ಕರೆತಂದಿತ್ತು.

ದಿವ್ಯಾಗೆ ಕಡಿಮೆ ವೋಟ್
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸ್ಪರ್ಧಿಯೇ ಗೆಲ್ಲಬೇಕು ಎನ್ನುವ ಆಸೆ ಇರುತ್ತದೆ. ಈ ಬಾರಿ ಕೂಡ ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ವೀಕ್ಷಕರ ನೆಚ್ಚಿನ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಈ ಮೂವರಲ್ಲಿ ಯಾರು ಟ್ರೋಫಿಗೆ ಮುತ್ತಿಡುತ್ತಾರೆ ಎನ್ನುವ ಕುತೂಹಲ ಇದೆ. ವೀಕ್ಷಕರ ವೋಟ್‌ಗಳೇ ಅಂತಿಮ. ದಿವ್ಯಾ ಉರುಡುಗಗೆ ಕಡಿಮೆ ವೋಟ್ ಸಿಕ್ಕಿದ ಕಾರಣಕ್ಕೆ ಆಕೆ ಎಲಿಮಿನೇಟ್ ಆಗುವಂತಾಗಿದೆ.

140 ದಿನ ದೊಡ್ಮನೆಯಲ್ಲಿ ರೂಪೇಶ್
ದಿವ್ಯಾ ಉರುಡುಗ 2 ಬಾರಿ ಫೈನಲ್ ಪ್ರವೇಶಿಸಿ ದಾಖಲೆ ಬರೆದರೆ, ರೂಪೇಶ್ ಶೆಟ್ಟಿ 140 ದಿನಗಳ ಕಾಲ ದೊಡ್ಮನೆಯಲ್ಲಿ ಕಳೆದು ಗಮನ ಸೆಳೆದಿದ್ದಾರೆ. ಹೌದು, ಬಿಗ್‌ಬಾಸ್ ಓಟಿಟಿ ಸೀಸನ್‌ನಲ್ಲಿ ರೂಪೇಶ್ ಶೆಟ್ಟಿ ದೊಡ್ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ನೇರವಾಗಿ ಬಿಗ್‌ಬಾಸ್ ಸೀನಸ್ 9ಕ್ಕೆ ಎಂಟ್ರಿ ಕೊಟ್ಟರು. 100 ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಒಟ್ಟು 140 ದಿನ ದೊಡ್ಮೆನೆಯಲ್ಲಿ ಕಳೆದಂತಾಗಿದೆ.