"ಸೂಪರ್ ಸ್ಟಾರ್ ರಚನಾ ಪಾತ್ರ ನನಗೆ ತುಂಬಾ ಇಷ್ಟ" ಎಂದ ದಿವ್ಯಾ ಉರುಡುಗ

By ಅನಿತಾ ಬನಾರಿ

ನಮ್ಮಲ್ಲಿ ಸ್ಯಾಂಡಲ್ ವುಡ್ ನ ಹೀರೋಯಿನ್ ದಿವ್ಯಾ ಉರುಡುಗ ಯಾರಿಗೆ ತಾನೇ ಗೊತ್ತಿಲ್ಲ. ಇವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ. ಕಿರುತೆರೆಯಲ್ಲಿ ಕೆಲವು ಸೀರಿಯಲ್‌ಗಳ ಮೂಲಕ ಮನೆಮಾತಾಗಿರುವ ದಿವ್ಯಾ ಹುಲಿರಾಯ' ಚಿತ್ರದಿಂದ ಚಂದನವನದಲ್ಲಿ ಸಿನಿಪಯಣ ಆರಂಭಿಸಿದರು.

ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ ಶಿಕ್ಷಣಕ್ಕಾಗಿ ಮಂಗಳೂರಿನಲ್ಲಿದ್ದಾಗ ಇವರ ಸೋಶಿಯಲ್ ಮೀಡಿಯಾ ಖಾತೆಯನ್ನು ನೋಡಿದ ಒಬ್ಬ ಡೈರೆಕ್ಟರ್ ಒಬ್ಬರು ಕಿರುತೆರೆಯಲ್ಲಿ ನಟಿಸಿಲು ಆಫರ್ ನೀಡಿದ್ದರಂತೆ. ಬಿಎಸ್ಸಿಯಲ್ಲಿ ಡಿಗ್ರಿ ಮುಗಿಸಿ ಕ್ಯಾಂಪಸ್ ಸೆಲೆಕ್ಷನ್ ಆಗಿ ಇನ್ನೇನು ಕೆಲಸಕ್ಕೆ ಸೇರಿಕೊಳ್ಳಬೇಕು ಎನ್ನುವ ಸಮಯದಲ್ಲಿ ಕಿರುತೆರೆಯ ಸೀರಿಯಲ್‌ಗಳಲ್ಲಿ ಅಭಿನಯಿಸಲು ತಾನಾಗಿಯೇ ಅವಕಾಶ ಬಂದಾಗ ಬೇಡ ಎನ್ನಲಿಲ್ಲ.

Divya Uruduga said that she likes Super Star Rachana character in ninagaagi serial

ನಟನೆಯ ಬಗ್ಗೆ ಯೋಚನೆಯೇ ಇಲ್ಲದಿದ್ದರೂ ಯಾಕೆ ಒಂದು ಟ್ರೈ ಕೊಡಬಾರದು ಎಂದು ಯೋಚಿಸಿದ ದಿವ್ಯಾ ಉರುಡುಗ ಒಂದಷ್ಟು ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 'ಚಿಟ್ಟೆ ಹೆಜ್ಜೆ', 'ಅಂಬಾರಿ', 'ಖುಷಿ', 'ಓಂ ಶಕ್ತಿ ಓಂ ಶಾಂತಿ' ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಈಕೆ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಉದಯ ಟಿವಿಯಲ್ಲಿ ಪ್ರಸಾರವಾದ 'ಸೂಪರ್ ಕಬ್ಬಡ್ಡಿ' ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು.

ಒಂದಾದರೂ ಒಂದಾದ ಮೇಲೊಂದು ಸೀರಿಯಲ್‌ಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದ ದಿವ್ಯಾ ಉರುಡುಗರವರಿಗೆ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಭಾಗವಹಿಸಲು ಅವಕಾಶ ದೊರಕಿತ್ತು. ಈ ಅವಕಾಶಕ್ಕೆ ಬಹಳ ಸಂತೋಷದಿಂದ ಒಪ್ಪಿಕೊಂಡ ದಿವ್ಯಾ ಉರುಡುಗರವರು ಬಿಗ್ ಬಾಸ್ ಸೀಸನ್ 8ರ ಸೀಸನ್‌ನಲ್ಲಿ ಟಾಪ್ 5ರಲ್ಲಿ ಒಬ್ಬರಾಗಿದ್ದರು.

ಇದೀಗ 'ನಿನಗಾಗಿ' ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ರಚನಾ ಆಗಿ ದಿವ್ಯಾ ಉರುಡುಗ ಅಭಿನಯಸುತ್ತಿದ್ದಾರೆ. ಮಾತ್ರವಲ್ಲದೇ 'ನಿನಗಾಗಿ' ಧಾರಾವಾಹಿಯ ರಚನಾ ಆಲಿಯಾಸ್ ರಚ್ಚು ಪಾತ್ರವೆಂದರೆ ದಿವ್ಯಾ ಅವರಿಗೆ ತುಂಬಾ ಇಷ್ಟವಂತೆ. ಇದೇ ಕಾರಣದಿಂದಾಗಿ ಆಕೆಗೆ ಈ ಪಾತ್ರವನ್ನು ನಿಭಾಯಿಸಲು ಅಷ್ಟೇನು ಕಷ್ಟವಾಗಿಲ್ಲವಂತೆ.

Divya Uruduga said that she likes Super Star Rachana character in ninagaagi serial

'ನಿನಗಾಗಿ' ಧಾರಾವಾಹಿ ರಚ್ಚು ಪಾತ್ರವು ಶ್ರೀಮಂತ ಕುಟುಂಬದಲ್ಲಿ ಬೆಳೆದು ಬಂದ ಹುಡುಗಿಯಾಗಿದ್ದರೂ ಸಿಂಪಲ್ ಜೀವನದಲ್ಲಿ ಆಸಕ್ತಿ ಜಾಸ್ತಿ. ಕೈಗೊಂದು ಕಾಲಿಗೊಂದು ಆಳುಗಳಿರುವ ಇವಳ ಜೀವನದಲ್ಲಿ ಇವಳು ಸಣ್ಣ ಪುಟ್ಟ ಆಸೆಗಳನ್ನು ಇಟ್ಟುಕೊಂಡು ಜೀವನ ನಡೆಸುವುದರಲ್ಲಿ ಸುಖ ಸಿಗುತ್ತಿತ್ತು. ಇವಳ ಮನೆಯ ಅಡುಗೆ ಮನೆಯಲ್ಲಿ ಕೆಲಸದವರಿದ್ದರೂ ಇವಳೇ ಪ್ರೀತಿಯಿಂದ ಅಡುಗೆ ಮಾಡಬೇಕು. ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಬೀದಿ ಬದಿಯಲ್ಲಿರುವ ಚಾಟ್ಸ್ ಅಂಗಡಿಗೆ ಹೋಗಿ ಪಾನಿಪುರಿ ತಿನ್ನಬೇಕು ಎಂಬುವುದು ಇವಳ ಆಸೆ. ಆದರೆ, ಅವಳಿರುವ ಆಡಂಬರದ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗುತ್ತಿತ್ತು. ಒಟ್ಟಿನಲ್ಲಿ ರಚನಾ ಪಾತ್ರವನ್ನು ಈಕೆ ಮೆಚ್ಚಿಕೊಂಡು ನಟಿಸುತ್ತಿದ್ದಾರೆ.

"ಒಳ್ಳೆಯ ಅವಕಾಶಗಳಿಗೆ, ಹೊಸತನಕ್ಕೆ ನಾನು ಯಾವಾಗಲೂ ಸಿದ್ದ. ನಾನು ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಹೊರ ಬಂದ ಮೇಲೆ ಹಲವಾರು ಜನರ ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ಆ ವಿಶ್ವಾಸಕ್ಕೆ ನಾನು ಎಂದಿಗೂ ಋಣಿಯಾಗಿ ಇರುತ್ತೇನೆ" ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Divya Uruduga returned to television after eight years. Divya is charming on television through the serial Ninagaagi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X