Krishna Janmastami 2024: ಕೃಷ್ಣಾ ಜನ್ಮಾಷ್ಠಮಿ ಸಂಭ್ರಮದಲ್ಲಿ ದಿವ್ಯಾ ಉರುಡುಗ, ವೈಷ್ಣವಿ, ಕಾರ್ತಿಕ್ ಮಹೇಶ್..!

By ಎಸ್ ಸುಮಂತ್

ನಾಡಿನಾದ್ಯಂತ ಕೃಷ್ಣ ಜನ್ಮಾಪಷ್ಠಮಿಯ ಸಂಭ್ರಮ ಮನೆ ಮಾಡಿದೆ. ಸಂಭ್ರಮ, ಸಡಗರದಿಂದ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸುತ್ತಿದ್ದಾರೆ. ಕೃಷ್ಣನ ದೇಗುಲಗಳಲ್ಲಿ ಕೃಷ್ಣ ಪರಮಾತ್ಮನಿಗೆ ಅಲಂಕಾರ ಮಾಡಿ, ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಭಕ್ತರು ಕೂಡ ದೇವಸ್ಥಾನಗಳಿಗೆ ತೆರಳಿ ಕೃಷ್ಣನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸುತ್ತಿದ್ದಾರೆ.

ಇನ್ನು ಕಿರುತೆರೆ ಕಲಾವಿದರ ಬದುಕಿನಲ್ಲೂ ಕೃಷ್ಣ ಜನ್ಮಾಷ್ಠಮಿ ಖುಷಿ ನೀಡಿದೆ. ಇತ್ತೀಚೆಗೆ ಧಾರಾವಾಹಿಗಳಲ್ಲಿಯೇ ವಿಶೇಷವಾದ ದಿನವನ್ನು, ವಿಶೇಷವಾಗಿ ಆಚರಿಸುತ್ತಾರೆ. ಅದರಂತೆ ಕೃಷ್ಣ ಜನ್ಮಾಷ್ಠಮಿಯನ್ನು ಕೂಡ. ಕಿರುತೆರೆಯ ನಟ-ನಟಿಯರು ಕೃಷ್ಣಾ ಜನ್ಮಾಷ್ಠಮಿಯ ನೆನಪಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Divya uruduga to viashnavi Kannada Tv celebrities extend wishes on krishna janmashtami

ಯಶೋಧೆಯಾದ ದಿವ್ಯಾ ಉರುಡುಗ

'ನಿನಗಾಗಿ' ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ಸೂಪರ್ ಸ್ಟಾರ್ ರಚನಾ ಆಗಿ ಮಿಂಚಿದ್ದಾರೆ. ಅದರಲ್ಲಿ ಕೃಷ್ಣನ ಪಾತ್ರವನ್ನು ಸಿಂಚನಾ ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ರಚನಾ ಹಾಗೂ ಕೃಷ್ಣ, ಯಶೋಧಾ ಹಾಗೂ ಕೃಷ್ಣನ ವೇಷ ಧರಿಸಿದ್ದರು. ನಿರ್ದೇಶಕರ ಜೊತೆಗೆ ಕೂತು ಒಂದಷ್ಟು ಪೋಸ್ ಕೊಟ್ಟಿರುವ ಫೋಟೋಗಳನ್ನು ಕೃಷ್ಣಾ ಜನ್ಮಾಷ್ಠಮಿಯ ದಿನ ದಿವ್ಯಾ ಉರುಡುಗ ಹಂಚಿಕೊಂಡಿದ್ದಾರೆ.

ಯಶೋಧೆಯ ನೆನಪಲ್ಲಿ ವೈಷ್ಣವಿ ಗೌಡ

ಇನ್ನು ಕೃಷ್ಣ ಜನ್ಮಾಷ್ಠಮಿಯ ದಿನದ ವಿಶೇಷ ದಿನದಂದು ಹಳೆಯ ನೆನಪುಗಳಿಗೆ ಜಾರಿದ್ದಾರೆ. ಕಳೆದ ಬಾರಿ ವಠಾರದಲ್ಲಿ ಕೃಷ್ಣಾ ಜನ್ಮಾಷ್ಠಮಿಯನ್ನು ಆಚರಣೆ‌ ಮಾಡಲಾಗಿತ್ತು. ಆಗ ವೈಷ್ಣವಿ, ಯಶೋಧೆಯಾಗಿದ್ದರು. ಆ ಫೋಟೋವನ್ನು ಇಂದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕಿಂಡಿದ್ದಾರೆ. ಅಭಿಮಾನಿಗಳಿಗೆ ಕೃಷ್ಣಾ ಜನ್ಮಾಷ್ಠಮಿಯ ಶುಭಕೋರಿದ್ದಾರೆ.

Divya uruduga to viashnavi Kannada Tv celebrities extend wishes on krishna janmashtami

ತಂಗಿ‌ ಮಗನಿಗೆ ಕೃಷ್ಣನ ವೇಶ

ಬಿಗ್ ಬಾಸ್ ಕನ್ನಡ ಸೀಸನ್ 10 ವಿಜೇತ, ನಟ ಕಾರ್ತಿಕ್ ಮಹೇಶ್ ಮನೆಯಲ್ಲೂ ಕೃಷ್ಣಾ ಜನ್ಮಾಷ್ಠಮಿಯ ಸಂಭ್ರಮ ಮನೆ ಮಾಡಿದೆ. ತಂಗಿಯ ಮಗನೆಂದರೆ ಮುದ್ದು. ಇಂದು ತಂಗಿಯ ಮಗನಿಗೆ ಕೃಷ್ಣನ ವೇಷ ಹಾಕಿಸಿದ್ದಾರೆ. ಹಾಗೇ ತಂಗಿಗೆ ಯಶೋಧೆಯ ವೇಷ ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಅದ್ಭುತ ಫೋಟೋಗಳನ್ನು ಕಾರ್ತಿಕ್ ತಂಗಿ ತೇಜಸ್ವಿನಿ ಮಹೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕಿಂಡಿದ್ದಾರೆ.

'ರಾಮಾಚಾರಿ'ಯ ವೈಶಾಖ ಈಗ ರಾಧೆ

ಇನ್ನು ರಾಮಾಚಾರಿ ಸೀರಿಯಲ್‌ನಲ್ಲಿ ಮನೆ ಒಡೆಯಲು ಬಂದಿರುವ ವೈಶಾಖ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ರಾಧೆಯಂತೆ ಪೋಸ್ ಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಹಸಿರು ಮತ್ತು ಪರ್ಪಲ್ ಕಾಂಬಿನೇಷನ್ ನಲ್ಲಿ ಡ್ರೆಸ್ ಸೀರೆ ತೊಟ್ಟು, ರಾಧೆಯಂತೆ ಅಲಂಕಾರಗೊಂಡು, ಮುದ್ದಾಗಿ ಪೋಸ್ ನೀಡಿದ್ದಾರೆ.

ಬಾಲ ಕೃಷ್ಣನ ಜೊತೆಗೆ ಸಿತಾರ

'ಅಗ್ನಿಸಾಕ್ಷಿ' ಹಾಗೂ 'ಪಾರು' ಧಾರಾವಾಹಿಯಲ್ಲಿ ಖ್ಯಾತಿ ಪಡೆದ ನಟಿ ಸಿತಾರ ಕೂಡ ಕೃಷ್ಣಾ ಜನ್ಮಾಷ್ಠಮಿ ಸಂಭ್ರಮದಲ್ಲಿದ್ದಾರೆ. ಸದ್ಯಕ್ಕೆ ಬ್ರಹ್ಮಗಂಟು ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇಂದು ಕೃಷ್ಣಾ ಜನ್ಮಾಷ್ಠಮಿಯ ಸಂಭ್ರಮದ ದಿನ ಅದ್ಭುತವಾದ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಮಗುವಿಗೆ ಕೃಷ್ಣನ ವೇಷ ಹಾಕಿಸಿ, ಅವರು ಯಶೋಧೆಯಂತೆ ವೇಷ ಧರಿಸಿದ್ದಾರೆ. ಸದ್ಯ ಯಶೋಧೆ - ಕೃಷ್ಣನ ತುಂಟಾಟದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಕಿರುತೆರೆ ನಟ-ನಟಿಯರು ಕೃಷ್ಣಾ ಜನ್ಮಾಷ್ಠಮಿಯ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ.

More from Filmibeat

English summary
krishna Janmashtami 2024: how Kannada tv celebs wished fans on Gopal's birthday;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X