ಮದುವೆಯಾದ 10 ವರ್ಷದ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದ 41 ವರ್ಷದ ಖ್ಯಾತ ನಟಿ

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.

ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ ಯಾಕೆ ಇಷ್ಟು ತಡ ಮಾಡ್ತಿದ್ದೀರಾ ಎಂದು ಕೇಳಿ ಹಿಂಸೆ ಕೊಡುತ್ತಾರೆ. ಸುಖಾ ಸುಮ್ಮನೆ ಕೆಲವರ ಪಿತ್ತ ನೆತ್ತಿಗೇರಿಸುತ್ತಾರೆ. ಇನ್ನೂ ವಯಸ್ಸಾಗಿದ್ದರಂತೂ ಮುಗಿದೇ ಹೋಯ್ತು. ಗೆದ್ದಲು ಹುಳಗಳಂತೆ ಕೊರೆಯಲು ಶುರು ಮಾಡುತ್ತಾರೆ. ಕೆಲವರು ಈ ಪ್ರಶ್ನೆ ಸಹಿಸಿಕೊಳ್ಳಲು ಸಾಧ್ಯವಾಗದೇ ರೇಗಿದ್ದು ಇದೆ. ಮಾರ್ಮಿಕವಾಗಿ ಉತ್ತರ ನೀಡಿದ್ದು ಇದೆ.

Divyanka Tripathi amp amp Vivek Dahiya Welcome Twin Boys God Said Take Double

ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಈಗ ತಮ್ಮ 41ನೇ ವಯಸ್ಸಿನಲ್ಲಿ ದಿವ್ಯಾಂಕ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಉತ್ತರ ನೀಡಿದ್ದಾರೆ. ಮದುವೆಯಾದ ಹತ್ತು ವರ್ಷಗಳ ನಂತರ ತಂದೆ-ತಾಯಿಯಾಗಿ ಇಬ್ಬರು ಬಡ್ತಿ ಪಡೆದಿದ್ದಾರೆ.

ಹೌದು ದಿವ್ಯಾಂಕಾ ತ್ರಿಪಾಠಿ - ವಿವೇಕ್ ದಹಿಯಾ.. ಹಿಂದಿ ಕಿರುತೆರೆಯ ಪ್ರಖ್ಯಾತ ಜೋಡಿ. ''ಬನೂ ಮೇ ತೇರಿ ದುಲ್ಹನ್'' ಧಾರಾವಾಹಿ ಮೂಲಕ ದಿವ್ಯಾಂಕ ಕಿರುತೆರೆಯನ್ನು ಪ್ರವೇಶ ಮಾಡಿದರೆ ವಿವೇಕ್ ''ಯೇ ಹೈ ಆಶಿಕಿ'' ಧಾರಾವಾಹಿಯ ಮೂಲಕ ಹಿಂದಿ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಯವಾದರು.

''ಯೇ ಹೈ ಮೊಹಬ್ಬತೇ'' ಇವರು ಇಬ್ಬರು ಜೊತೆಯಾಗಿ ಅಭಿನಯಿಸಿದ ಸೀರಿಯಲ್. ಇವರ ಸಂಬಂಧಕ್ಕೆ ಭದ್ರ ಬುನಾದಿ ಹಾಕಿದ ಧಾರಾವಾಹಿ ಇದೇ. ''ಯೇ ಹೈ ಮೊಹಬ್ಬತೇ'' ಯಲ್ಲಿ ಜೊತೆಯಲ್ಲಿ ಅಭಿನಯಿಸುತ್ತಲೇ ಪ್ರೇಮದ ಬಲೆಯಲ್ಲಿ ಸಿಲುಕಿಕೊಂಡ ಇಬ್ಬರು ಆ ನಂತರ ಜುಲೈ 8 2016ರಂದು ಮದುವೆಯಾದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿತ್ತು.

ಹೀಗೆ ಮದುವೆಯ ಬಂಧನಕ್ಕೊಳಗಾದ ಇಬ್ಬರು ಈಗ ಹತ್ತು ವರ್ಷದ ನಂತರ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿರುವ ಇವರಿಬ್ಬರು ''ನಾವು ಸಂತೋಷ ಕೇಳಿದ್ದೆವು, ದೇವರು ಎರಡರಷ್ಟು ಕೊಟ್ಟಿದ್ದಾನೆ, ಅವಳಿ ಗಂಡು ಮಕ್ಕಳಿಂದ ನಾವು ಆಶೀರ್ವದಿಸಲ್ಪಟ್ಟಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

Divyanka Tripathi amp amp Vivek Dahiya Welcome Twin Boys God Said Take Double

ಮುಂದುವರೆದು ''ನಿರೀಕ್ಷೆ ಕೊನೆಗೊಂಡಿದೆ. ನಮ್ಮ ಮಕ್ಕಳು ಬಂದಿದ್ದಾರೆ ಮತ್ತು ಜೀವನ ನಮ್ಮ ಊಹಿಸಿದ್ದಕ್ಕಿಂತಲೂ ಈಗ ಸುಂದರವಾಗಿದೆ. ನನ್ನ ಕರಣ್ ಅರ್ಜುನ್ ಬಂದಿದ್ದಾರೆ'' ಎಂದು ವಿವೇಕ್ ದಹಿಯಾ ಸಂಭ್ರಮಿಸಿದ್ದಾರೆ. ಈ ಅದ್ಭುತ ಹೊಸ ಅಧ್ಯಾಯ ಆರಂಭ ಮಾಡುತ್ತಿರುವ ನಮಗೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ದಿವ್ಯಾಂಕ ತ್ರಿಪಾಠಿ ಮತ್ತು ವಿವೇಕ್ ದಹಿಯಾಗೆ ಹಲವರು ಶುಭಾಶಯ ಕೋರುತ್ತಿದ್ದಾರೆ. ಡಬಲ್ ಆಶೀರ್ವಾದ, ಸುಂದರ ದಂಪತಿಗಳಿಗೆ ಅಭಿನಂದನೆಗಳು, ಪುಟ್ಟ ರಾಜಕುಮಾರರಿಗೆ ಜಗತ್ತಿಗೆ ಸ್ವಾಗತ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸುರಭಿ ಜ್ಯೋತಿ, ಕರೀಷ್ಮಾ ತನ್ನಾ, ಅಂಕಿತಾ ಲೋಖಂಡೆ, ಪೂಜಾ ಗೌರ್, ಜೇಮಿ ಲಿವರ್, ಆರತಿ ಸಿಂಗ್, ಅಮಿತ್ ಟಂಡನ್ ಸೇರಿದಂತೆ ಬೆಳ್ಳಿತೆರೆ ಮತ್ತು ಕಿರುತೆರೆಯ ಹಲವು ಕಲಾವಿದರು ದಿವ್ಯಾಂಕ ಮತ್ತು ವಿವೇಕ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನುಳಿದಂತೆ ದಿವ್ಯಾಂಕ ತ್ರಿಪಾಠಿ ಕಿರುತೆರೆಯಿಂದ ವಿಮುಖರಾಗಿ ತಮ್ಮ ಗಮನವನ್ನು ಬೆಳ್ಳಿತೆರೆ ಮತ್ತು ವೆಬ್ ಸರಣಿಗಳತ್ತ ವಹಿಸಿದ್ದಾರೆ. ''ಅದೃಶ್ಯಂ''.. ''ಇನ್‌ವಿಸಿಬಲ್ ವುಮನ್''.. ''ಮ್ಯಾಜಿಕ್ ಆಫ್ ಶಿರಿ''.. ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಭಿನಯದಿಂದ ಜನ ಮನ ಗೆದ್ದಿದ್ದಾರೆ. ಮತ್ತೊಂದು ಕಡೆ ಪತ್ನಿಯಂತೆ ವಿವೇಕ್ ದಹಿಯಾ ಕೂಡ ಸಿನಿಮಾದತ್ತ ಗಮನ ವಹಿಸಿದ್ದಾರೆ. ''ಚಾಲಬಾಜ್''.. ''ಸ್ಟೇಟ್ ಆಫ್ ಸೀಜ್- ಟೆಂಪಲ್ ಅಟ್ಯಾಕ್'' ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

English summary
Celebrated TV couple Divyanka Tripathi & Vivek Dahiya bless fans with the news of their twin baby boys. Read details here!
Read more about: pregnant pregnancy ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X