ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಕನಸು ಕಂಡಿದ್ದ ರಾಕೇಶ್ ಪೂಜಾರಿ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನ ಮತ್ತೊಂದು ಸಾಕ್ಷಿ.

ಹೌದು, ಕನ್ನಡದ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಯಾರೂ ನಂಬಲು ಸಾಧ್ಯ ಇಲ್ಲದಂತ ಸುದ್ದಿಯೊಂದು ಇಂದು ಬರ ಸಿಡಿಲಿನಂತೆ ಬಂದೆರಗಿದೆ. ಇನ್ನೂ ಬದುಕಿ ಬಾಳಬೇಕಿದ್ದ ಜೀವ ಉಸಿರು ಚೆಲ್ಲಿದೆ. ರಾಕೇಶ್ ಅವರನ್ನು ಕಳೆದುಕೊಂಡ ಅವರ ಆಪ್ತವರ್ಗ ಕಣ್ಣೀರಾಗಿದೆ. ರಾಕೇಶ್ ನೆನಪುಗಳನ್ನು ಅವರಿಗಿದ್ದ ಕನಸುಗಳನ್ನು ಸ್ನೇಹಿತರ ಬಳಗ ಹಂಚಿಕೊಳ್ಳುತ್ತಿದೆ. ಆ ಪೈಕಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾಶ್ರೀ ಕೂಡ ಒಬ್ಬರು.

divyashree-known-from-comedy-khiladigalu-tearfully-recalls-rakesh-poojary

ಕಾಮಿಡಿ ಕಿಲಾಡಿಗಳು ವೇದಿಕೆ ಮೂಲಕ ಶುರುವಾದ ತಮ್ಮ ಸ್ನೇಹದ ಕುರಿತು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದಿವ್ಯಶ್ರೀ ಇಂದು ಬೆಳಗ್ಗೆ 5-30ಕ್ಕೆ ರಾಕೇಶ್ ನಿಧನದ ಸುದ್ದಿ ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ.

ಕಾಮಿಡಿ ಕಿಲಾಡಿಗಳು ಸದಾನಂದ ನನಗೆ ಫೋನ್ ಮಾಡಿ ವಿಚಾರ ಹೇಳಿದಾಗ ನಾನು ಸುಳ್ಳು ಸುದ್ದಿ ಇರಬಹುದೆಂದು ನಾನು ಅಂದುಕೊಂಡಿದ್ದೇ ಆದರೆ ಆ ನಂತರ ಸುದ್ದಿ ನಿಜಾ ಎನ್ನುವುದು ಗೊತ್ತಾಯ್ತು ಎಂದು ಹೇಳಿರುವ ದಿವ್ಯಾಶ್ರೀ ರಾಕೇಶ್‌ಗೆ 33 ವರ್ಷವಾಗಿದ್ದರು ಕೂಡ ಮನಸು ಮಗುವಿನಂತೆ ಇತ್ತು ಎಂದು ಭಾವುಕರಾಗಿದ್ಧಾರೆ.

ನಮಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಚಿತ್ರೀಕರಣದಲ್ಲಿ ಭಾಗವಹಿಸಬೇಕಾಗಿರುತ್ತೆ, ಕೆಲ ಒಮ್ಮೆ ಊಟ ಮತ್ತು ನಿದ್ರೆಯ ಸಮಸ್ಯೆ ಕೂಡ ಆಗುತ್ತೆ ಆದರೂ ಕೂಡ ನಾವೆಲ್ಲ ಇಷ್ಟ ಪಟ್ಟು ಕೆಲಸ ಮಾಡುತ್ತೇವೆ ಎಂದು ಹೇಳಿರುವ ದಿವ್ಯಾಶ್ರೀ ಈ ಕಾರಣದಿಂದ ರಾಕೇಶ್‌ಗೆ ಲೋ ಬಿಪಿಯಾಗಿದ್ದರೂ ಆಗಿರಬಹುದು ಎಂದು ಹೇಳಿದ್ಧಾರೆ.

ಇನ್ನು ರಾಕೇಶ್‌ಗೆ ಇನ್ನೂ ಮದುವೆಯಾಗಿರಲಿಲ್ಲ. ಹೀಗಾಗಿಯೇ ನಾವೆಲ್ಲ ಮದುವೆ ವಿಚಾರದಲ್ಲಿ ಅವರನ್ನು ತುಂಬಾ ರೇಗಿಸುತ್ತಿದ್ದೇವು ಎಂದಿರುವ ದಿವ್ಯಾಶ್ರೀ ರಾಕೇಶ್‌ಗೆ ಅಮ್ಮ ಮತ್ತು ತಂಗಿ ಇದ್ದಾರೆ ಎಂದು ಹೇಳಿದ್ದಾರೆ.

ಸದಾ ಕಾಲ ಎಲ್ಲರನ್ನು ನಗಿಸುತ್ತಿದ್ದ ರಾಕೇಶ್ ಗೆ ಜೀವನದಲ್ಲಿ ತುಂಬಾ ಗಂಭೀರತೆ ಇತ್ತು ಎಂದು ಹೇಳಿರುವ ದಿವ್ಯಶ್ರೀ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂಬ ಕನಸನ್ನು ರಾಕೇಶ್ ಕಂಡಿದ್ದರು ಎಂದು ಹೇಳಿದ್ಧಾರೆ. ತಂಗಿ ಮದುವೆ ಮಾಡಬೇಕು ಆ ನಂತರ ನಾನು ಮದುವೆ ಆಗುತ್ತೇನೆ ಎಂದು ರಾಕೇಶ್ ಹೇಳುತ್ತಿದ್ದರು ಎಂದು ಕಣ್ಣೀರಾಗಿದ್ದಾರೆ.

ಇನ್ನು ಕಣ್ಣೆದುರು ಬದುಕಿ ಬಾಳಬೇಕಿದ್ದ ಮಗ ಇನ್ನಿಲ್ಲ ಎನ್ನುವ ವಿಚಾರ ಗೊತ್ತಾದರೆ ಆ ತಾಯಿಗೆ ಎಂಥಾ ನೋವಾಗಬೇಡ ? ನನಗೆ ಅವರ ತಾಯಿಯದ್ದೇ ಚಿಂತೆಯಾಗುತ್ತಿದೆ ಎಂದು ಹೇಳಿರುವ ದಿವ್ಯಶ್ರೀ ಅವರು ಈ ದುಃಖವನ್ನು ಹೇಗೆ ತಡೆದುಕೊಳ್ಳುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.

ಅವರನ್ನು ಇಷ್ಡ ಪಡದೇ ಇರದೇ ಇರುವರು ಯಾರು ಇಲ್ಲ ಒಳ್ಲೆಯ ಕಲಾವಿದರನ್ನು ನಾವು ನೋಡಿದ್ದೇವೆ ಆದರೆ ಒಳ್ಳೆಯ ವ್ಯಕ್ತಿ ಸಿಗುವುದು ತುಂಬಾನೇ ಅಪರೂಪ ಎಂದಿರುವ ದಿವ್ಯಶ್ರೀ ರಕ್ಷಿತಾ ಮೇಡಂ ರಾಕೇಶ್ ತುಂಬಾ ಅಚ್ಚು ಮೆಚ್ಚಿನ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.

ಇತ್ತೀಚೆಗೆ ತುಳುವಿನ ದಸ್ಕತ್ ಚಿತ್ರ ಬಿಡುಗಡೆಯಾಗಿತ್ತು, ಆ ಸಮಯದಲ್ಲಿ ಚಿತ್ರದ ಪ್ರದರ್ಶನದಲ್ಲಿ ನಾನು ರಾಕೇಶ್‌ನ ಕೊನೆಯ ಬಾರಿ ಭೇಟಿ ಮಾಡಿದ್ದು ಎಂದು ಹೇಳಿದ್ದಾರೆ.

More from Filmibeat

English summary
Divyashree, known from Comedy Khiladigalu, reminisces about Rakesh Poojary, a man whose only wish was to see his sister's wedding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X