»   » ದಿವಾಕರ್ ಮುಂದೆ ಪತ್ನಿ ಇಟ್ಟಿರುವ ಬಹುದೊಡ್ಡ ಡಿಮ್ಯಾಂಡ್ ಏನು?

ದಿವಾಕರ್ ಮುಂದೆ ಪತ್ನಿ ಇಟ್ಟಿರುವ ಬಹುದೊಡ್ಡ ಡಿಮ್ಯಾಂಡ್ ಏನು?

Posted By:
Subscribe to Filmibeat Kannada
ದಿವಾಕರ್ ಹೆಂಡತಿಗೆ ತಮ್ಮ ವೆಡ್ಡಿಂಗ್ ಆನಿವರ್ಸರಿ ಗೆ ಈ ಗಿಫ್ಟ್ ಬೇಕಂತೆ | Filmibeat Kannada

'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮ ಬಹುತೇಕ ಕೊನೆಯ ಹಂತಕ್ಕೆ ಬಂದು ತಲುಪಿದೆ. ಬಿಗ್ ಬಾಸ್ ಸ್ಪರ್ಧಿಗಳನ್ನ ನೋಡೋದಕ್ಕೆ ತಮ್ಮ ಮನೆಯವರು ಒಬ್ಬೊಬ್ಬರೇ ಬಿಗ್ ಮನೆಯೊಳಗೆ ಬರ್ತಿದ್ದಾರೆ.

ಇತ್ತೀಚೆಗಷ್ಟೇ ದಿವಾಕರ್ ಅವರ ಪತ್ನಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು. ತುಂಬ ಖುಷಿಯಿಂದ ಎಲ್ಲರನ್ನ ಮಾತನಾಡಿಸಿದ ದಿವಾಕರ್ ಪತ್ನಿ ಮಮತಾ, ತಮ್ಮ ಗಂಡನ ಬಳಿ ಒಂದು ದೊಡ್ಡ ಬೇಡಿಕೆಯಿಟ್ಟು ಹೋಗಿದ್ದಾರೆ.

ಮುಂದಿನ ತಿಂಗಳು ದಿವಾಕರ್ ಅವರ ವಿವಾಹ ವಾರ್ಷಿಕೋತ್ಸವ ದಿನ ಬರಲಿದೆ. ಹೀಗಾಗಿ, ಈ ವಿಶೇಷ ದಿನಕ್ಕೆ ನೀವು ಗಿಫ್ಟ್ ಕೊಡಬೇಕು ಎಂದು ತಾಕೀತು ಹಾಕಿದ್ದಾರೆ.

ಶ್ರುತಿ ತಲೆಕೆಡಿಸಿ, ದಿವಾಕರ್ ಕ್ಯಾಪ್ಟನ್ ಆಗುವುದನ್ನು ತಪ್ಪಿಸಿದ ಅನುಪಮಾ.!

Diwakar wife demands gift for their Wedding Anniversary

ಅಷ್ಟಕ್ಕೂ, ದಿವಾಕರ್ ಬಳಿ ಮಮತಾ ಅವರು ಇಟ್ಟಿರುವ ಬೇಡಿಕೆ ಏನು ಗೊತ್ತಾ? ''ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು'' ಎನ್ನುವುದು ಮಮತಾ ಅವರ ಡಿಮ್ಯಾಂಡ್ ಆಗಿದೆ. 'ಮನೆಯಿಂದ ಹೊರ ಬರಬೇಕಾದರೇ ನೀವು ಬಿಗ್ ಬಾಸ್ ಗೆದ್ದು ಬರಲೇ ಬೇಕು' ಎಂದು ಕೋರಿಕೆ ಇಟ್ಟು ಹೋಗಿದ್ದಾರೆ.

ಬರೀ ಓಳು ಬಿಟ್ಟು ಚೆನ್ನಾಗಿ ಕಾಗೆ ಹಾರಿಸಿದ ದಿವಾಕರ್.!

ಇನ್ನು ಎಂಟು ಜನ ಸ್ಪರ್ಧಿಗಳು ಮನೆಯಲ್ಲಿದ್ದಾರೆ. ಫಿನಾಲೆ ಸುತ್ತಿಗೆ ಮೂರ್ನಾಲ್ಕು ವಾರಗಳು ಮಾತ್ರ ಬಾಕಿಯಿದೆ. ಬಿಗ್ ಬಾಸ್ ಗೆದ್ದು ದಿವಾಕರ್ ತಮ್ಮ ಪತ್ನಿ ಕೋರಿಕೆ ನೆರವೇರಿಸುತ್ತಾರ? ಕಾದುನೋಡಬೇಕಿದೆ.

English summary
Bigg Boss show is almost getting over. At this time, contestants family members visits Bigg House. Diwakar wife had also visited Bigg House & spoke to Diwakar. Diwakar wife demands a gift for their Wedding Anniversary. What is that gift? To know read this story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X