Amruthadhaare ; ಜೈಲು ಪಾಲಾದ ಜೈದೇವ್, ಶಕುಂತಲಾ ಇನ್ನೂ ಬದಲಾಗಿಲ್ವಾ ? ಅಂತ್ಯವಾಗುತ್ತಾ ಅಮೃತಧಾರೆ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಬೀದಿಗೆ ಬಿದ್ದಿದ್ದಾನೆ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾನೆ. ಕೊನೆ ಪಕ್ಷ ತನ್ನ ಬೇಬಿ ಆದರೂ ನೆರವಾಗುತ್ತಾಳೆ ಎನ್ನುವ ನಂಬಿಕೆ ಜೈದೇವ್ ಗೆ ಇತ್ತು. ಆದರೆ ಆ ನಂಬಿಕೆಗೆ ಕೂಡ ದ್ರೋಹ ಆಗಿದೆ. ದಿಯಾ ಕಾಲ ಕಸದಂತೆ ಜೈದೇವ್‌ನ ನೋಡುತ್ತಿದ್ದು ಮನೆಗೆ ನುಗ್ಗಿದ್ದ ಕೇಡಿಯನ್ನು ಕತ್ತು ಹಿಡಿದು ಹೊರ ದಬ್ಬಿದ್ದಾಳೆ. ಆದರೂ ಜೈದೇವ್ ಕೊಬ್ಬು ಮಾತ್ರ ಇನ್ನೂ ಕರಗಿಲ್ಲ.

ಮತ್ತೊಂದು ಕಡೆ ಶಕುಂತಲಾಗೆ ಜ್ಞಾನೋದಯವಾಗಿದ್ದು ಗೌತಮ್ ತನ್ನ ಆಸ್ತಿಯನ್ನೆಲ್ಲಾ ಮರಳಿ ಪಡೆದಿದ್ದಾನೆ. ತನ್ನ ಮನೆಯವರೆಲ್ಲರ ಜೊತೆ ದಿವಾನ್ ಮನೆತನದ ಹಳೆಯ ಮನೆಯನ್ನು ಪ್ರವೇಶ ಮಾಡಿದ್ದಾನೆ. ಈ ಹಿಂದೆ ಸೊಸೆಯಾಗಿ ಬಂದಾಗ ಮನಪೂರ್ವಕವಾಗಿ ಈ ಮನೆಗೆ ತುಂಬಿಸಿಕೊಂಡಿರಲಿಲ್ಲ, ಇವತ್ತು ಮನಸಾರೆ ಮನೆ ತುಂಬಿಸಿಕೊಂಡರೆ ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತವಾಗುವುದು ಎಂದು ಶಕುಂತಲಾ ಮನೆ ತುಂಬಿಸಿಕೊಂಡಿದ್ದಾಳೆ. ಸೇರನ್ನು ಒದ್ದು ಭೂಮಿಕಾ ಮನೆ ಪ್ರವೇಶ ಮಾಡಿದ್ದಾಳೆ. ಒಟ್ನಲ್ಲಿ ದಿವಾನ್ ಮನೆಯಲ್ಲಿ ಸಂಭ್ರಮದ ವಾತಾವರಣ ಮತ್ತೆ ಈಗ ಮನೆ ಮಾಡಿದೆ.

Diya s Sends Jaidev to Jail Is This the Amruthadhaare Grand Finale

ಜೈಲು ಪಾಲಾದ ಜೈದೇವ್

ಇದೇ ವೇಳೆ ಜೈದೇವ್ ಮತ್ತೆ ದಿಯಾ ಬೇಬಿ ಮನೆಯ ಬಾಗಿಲು ಬಡಿದಿದ್ದಾನೆ. ಇದರಿಂದ ರೊಚ್ಚಿಗೇಳುವ ದಿಯಾ ಸದ್ಯ ಪೊಲೀಸರನ್ನು ಕರೆಸಿದ್ದಾಳೆ. ಪೊಲೀಸರು ಜೈದೇವ್‌ನ ಎತ್ತಾಕಿಕೊಂಡು ಹೋಗಿದ್ದಾರೆ. ಅಲ್ಲಿಗೆ ಜೈದೇವ್ ಜೈಲು ಪಾಲಾದಂತೆ ಆಗಿದೆ. ಹಾಗಂಥ ''ಅಮೃತಧಾರೆ'' ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆಯಾ ಅಂದುಕೊಳ್ಳುವಂತೆ ಇಲ್ಲ.


ಅಂತ್ಯವಾಗುತ್ತಾ ಅಮೃತಧಾರೆ ?

ಯಾಕೆಂದರೆ ಮಿಂಚು ರಹಸ್ಯ ಇನ್ನೂ ಬಾಕಿ ಇದೆ. ಜ್ಯೋತಿಷಿಯ ಮಾತು ಈಗ ಮನ ಕೆಡಿಸಿದೆ. ಗೌತಮ್ ಜಾತಕದಲ್ಲಿ ಮಗಳಿಂದಲೇ ಕಂಟಕ ಇದೆ ಎಂದು ಜ್ಯೋತಿಷಿ ಹೇಳಿದ್ದಾನೆ. ಇಷ್ಟೇ ಅಲ್ಲ ಮತ್ತೊಂದು ಮಗುಗೆ ಭೂಮಿಕಾ ಜನ್ಮ ನೀಡಲಿದ್ದಾಳೆ ಎಂದು ಕೂಡ ಜ್ಯೋತಿಷಿ ಭವಿಷ್ಯವಾಣಿ ನುಡಿದಿದ್ದಾನೆ.

ಈ ಹಿನ್ನೆಲೆ ಕಳೆದು ಹೋದ ಆ ಮಗಳು ಮಿಂಚುನೇನಾ..? ಅಥವಾ ಆ ಮಗಳು ಗೌತಮ್ ಮತ್ತು ಭೂಮಿಕಾ ಬದುಕಿನಲ್ಲಿ ಪ್ರವೇಶ ಮಾಡಿ ಮುಂದೆ ತೊಂದರೆ ಕೊಡುತ್ತಾಳಾ..? ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ಅಥವಾ ಮುಂದೆ ಹುಟ್ಟುವ ಮಗುವಿನಿಂದ ಅಪಾಯ ಇದೆಯಾ..? ಎಂಬ ಅನುಮಾನ ಕೂಡ ಹಲವರದ್ದು.


ಶಕುಂತಲಾ ಬದಲಾಗಿಲ್ವಾ ?

ಇದೆಲ್ಲದರ ನಡುವೆ ಶಕುಂತಲಾ ಬದಲಾಗಿದ್ದೇನೆ ಎಂದು ಹೇಳಿದರು ಕೂಡ ಪ್ರೇಕ್ಷಕರಿಗೆ ಯಾಕೋ ನಂಬಿಕೆ ಬರುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಇಂದಿನ ಪ್ರೋಮೋ ನೋಡಿ ಹಲವರು ಶಕುಂತಲಾ ಬದಲಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

diya-s-sends-jaidev-to-jail-is-this-the-amruthadhaare-grand-finale

ಪ್ರೇಕ್ಷಕರ ಅಭಿಪ್ರಾಯ

*ಶಕುಂತಲಾ ದೇವಿದು ನಾಟಕಾನೇ ಇರುತ್ತದೆ. ನಂಬಬೇಡಿ

*ಯಾಕೋ ಶಾಕುಂತಲಾ ನಾಟಕ ಮಾಡ್ತಾ ಇದ್ದಾಳೆ ಅನ್ನಿಸುತ್ತಿದೆ ಯಾರು ಇದನ್ನ ನಂಬಬಾರದು ಹಾಗೇ ಮೋಸ ಹೋಗ್ಬಾರ್ದು ಅನ್ನೋದೇ ನನ್ನ ಸಲಹೆ

*ಶಕುಂತಲಾ ಎರಡನೇಯ ಇನ್ನಿಂಗ್ಸ್ ಆರಂಭ ,ಗುಂಡು ಡಕ್ ಔಟ್ ಆಗೋದು ನಿಶ್ಚಿತ,ಚತುರ ನಿರ್ದೇಶಕ

*ಶಕುಂತಲಾ ದು ಡ್ರಾಮಾ ಇನ್ನೂ ಹತ್ತು ವರ್ಷ ಸೀರಿಯಲ್ ಗ್ಯಾರಂಟಿ

*ಶಕುಂತಲಾ ನಾಟಕ ನೋಡಿ ಮೋಸ ಹೋಗಬೇಡಿ ಹಾವುಗೆ ಹಾಲು ಹಾಕಿದ್ದಾರೆ ಅದು ಕಚ್ಚದೇ ಬಿಡುವದಿಲ್ಲ ಹಾಗೆ ಇವಳು ಆದಷ್ಟು ಹುಶಾರಾಗಿ ಇರಬೇಕು ಗೌತಮ್, ಭೂಮಿಕಾ, ಮಲ್ಲಿ, ಮಕ್ಕಳು, ಎಲ್ಲರೂ.. ಯಾವ ಸಮಯದಲ್ಲಿ ಏನು ಮಾಡ್ತಾಳೋ ಗೊತ್ತಿಲ್ಲ. ಅಮ್ಮ ಮಗ ಇಬ್ಬರು ಒಂದಾಗಿ ಮತ್ತೆ ಹೊಸ ಪ್ಲಾನ್ ಮಾಡಬಹುದು ಅದಕ್ಕೆ ನೀವು ಎಲ್ಲರೂ ಹುಶಾರಾಗಿ ಇರಬೇಕು.

ಮುಂದೇನು ..?

ಜೈಲು ಪಾಲಾದ ಜೈದೇವ್ ಅಲ್ಲಿಂದ ತಪ್ಪಿಸಿಕೊಳ್ಳಬಹುದು ಅಥವಾ ಜಾಮೀನು ಪಡೆದು ಹೊರಬರಬಹುದು. ಹೊರ ಬಂದ ನಂತರ ಗೌತಮ್ ಮತ್ತು ಭೂಮಿಕಾ ಮೇಲಿನ ಹಗೆತನ ಮುಂದುವರೆಸಬಹುದು. ಮಿಂಚುನ ಕಿಡ್ನ್ಯಾಪ್ ಕೂಡ ಮಾಡಬಹುದು.ಗೌತಮ್‌ಗೆ ತೊಂದರೆ ಕೊಡಲೂಬಹುದು. ಇನ್ನು ದಿಯಾನ ಸುಮ್ಮನೆ ಅಂತೂ ಜೈದೇವ್ ಬಿಡಲ್ಲ. ಮತ್ತೊಂದು ಕಡೆ ಎಲ್ಲರು ಊಹಿಸಿದಂತೆ ಮಗನ ಮೇಲಿನ ಕುರುಡು ಪ್ರೀತಿ ಮತ್ತೆ ಶಕುಂತಲಾಳ ದಿಕ್ಕು ತಪ್ಪಿಸಬಹುದು.

ಒಟ್ನಲ್ಲಿ ''ಅಮೃತಧಾರೆ'' ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇನ್ನೆಷ್ಟು ದಿನ ''ಅಮೃತಧಾರೆ'' ಮುಂದುವರೆಯುತ್ತೆ..? ಮುಂದೆ ಮತ್ತೆ ಯಾವೆಲ್ಲ ತಿರುವುಗಳು ಎದುರಾಗುತ್ತವೆ..? ಎನ್ನುವುದನ್ನು ಕಾದು ನೋಡಬೇಕಿದೆ.

English summary
Diya sends Jaidev to jail in a high-voltage Amruthadhaare update! Is the show heading toward a climax? Get the latest on Jaidev’s arrest and the shocking turn of events in today's episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X