ಕೋಸ್ಟಲ್‌ವುಡ್ to ಸ್ಯಾಂಡಲ್‌ವುಡ್; ಹೀಗಿದೆ ನೋಡಿ 'ಡೆವಿಲ್' ನಟಿ ರಚನಾ ರೈ ಜರ್ನಿ!

By ಅನಿತಾ ಬನಾರಿ

ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಈ ನಟಿ ಸದ್ಯ ಗುರುತಿಸಿಕೊಂಡಿರುವುದು ನಟಿಯಾಗಿ. ಮುದ್ದಾದ ನಟನೆಯ ಮೂಲಕ ಸಿನಿಪ್ರಿಯರ ಮನ ಸೆಳೆದಿರುವ ಈಕೆಯ ಹೆಸರು ರಚನಾ ರೈ. ಕರಾವಳಿ ಕುವರಿ ಎಂದೇ ಈಕೆಯ‌ನ್ನು ಕರೆದರೆ ತಪ್ಪಾಗಲಾರದೇನೋ. ಯಾಕೆಂದರೆ ರಚನಾ ರೈ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೆಡಗಿ.

ಕೋಸ್ಟಲ್‌ವುಡ್ ಮೂಲಕ ನಟನೆಯ ನಂಟು ಬೆಳೆಸಿಕೊಂಡ ರಚನಾ ರೈ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡುತ್ತಿದ್ದಾರೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಸರ್ಕಸ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಟನೆಗೆ ಕಾಲಿಟ್ಟರು ರಚನಾ ರೈ. ತನ್ನ ನಟನೆಯ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಸದ್ದು ಮಾಡಿದ ಈ ನಟಿ ನಂತರ ಹಾರಿದ್ದು ಸ್ಯಾಂಡಲ್‌ವುಡ್‌ಗೆ.

Dk shivakumar reaction about attend isha foundation shivaratri

ಧನ್ವೀರ್ ನಟನೆಯ 'ವಾಮನ' ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಂದದ ಹುಡುಗಿ ಚಾಲೆಂಜಿಗ್ ಸ್ಟಾರ್ ದರ್ಶನ್ ತೂಗುದೀಪ್ ಅವರೊಂದಿಗೂ ನಟಿಸುವ ಸುವರ್ಣಾವಕಾಶವನ್ನು ಪಡೆದುಕೊಂಡಿದ್ದಾರೆ. ಹೌದು, ದರ್ಶನ್ ತೂಗುದೀಪ್ ಅಭಿನಯದ ಮುಂದಿನ ಸಿನಿಮಾ 'ಡೆವಿಲ್'ನಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಈಕೆ ಪಡೆದಿದ್ದಾರೆ.

ಸದ್ಯ 'ಡೆವಿಲ್' ಸಿನಿಮಾ ಶೂಟಿಂಗ್ ಶುರುವಾಗಬೇಕಿದೆ. ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರಿಂದ 'ಡೆವಿಲ್' ಸಿನಿಮಾದ ಚಿತ್ರೀಕರಣ ನಿಂತಿತ್ತು. ಈಗ ಜಾಮೀನು ಪಡೆದು ಹೊರಬಂದ ಬಳಿಕವೂ ಸಿನಿಮಾ ಯಾಕೋ ಇನ್ನೂ ಶುರುವಾಗಿಲ್ಲ. ಹೀಗಾಗಿ ರಚನಾ ರೈ ಲುಕ್ ರಿವೀಲ್ ಆಗಿಲ್ಲ.

ಸಿನಿಮಾ ಅನೌನ್ಸ್ ಆಗಿ ವರ್ಷಗಳು ಕಳೆದರೂ ಇನ್ನೂ ಸಿನಿಮಾ ಬಿಡುಗಡೆಯಾಗದೇ ಇದ್ದಾಗ ಸಹಜವಾಗಿ ರಚನಾ ರೈಗೆ ಬೇಸರ ಆಗಿರಬಹುದು. ಆದರೆ ಈಗ ಎಲ್ಲಾ ಸಮಸ್ಯೆಗಳು ದೂರವಾಗಿದ್ದು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ. ಇನ್ನು ಫೆಬ್ರವರಿ 19ರಂದು ರಚನಾ ರೈ ಬರ್ತ್ ಡೇ ಇತ್ತು. ಆ ದಿನ ಸಿನಿಮಾ ತಂಡ ಈ ನಟಿಯ ಫೋಟೋದ ಜೊತೆಗೆ 'ಡೆವಿಲ್' ಚಿತ್ರದ ಟೈಟಲ್ ಕೂಡಾ ಹಾಕಿ ಬರ್ತ್ ಡೇಗೆ ವಿಶ್ ಮಾಡಿತ್ತು.

Dk shivakumar reaction about attend isha foundation shivaratri

ನಟನೆಯ ಹೊರತಾಗಿ ರಚನಾ ರೈ ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಲಾಶ್ರೀ ಎಂಬ ಟ್ಯಾಲೆಂಟ್‌ ಹಂಟ್ ಕಾರ್ಯಕ್ರಮದಲ್ಲಿ ಮೂರು ಸಲ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು ರಚನಾ ರೈ. ಇದರ ಹೊರತಾಗಿ ಕ್ರೀಡಾ ಕ್ಷೇತ್ರದಲ್ಲಿಯೂ ಈಕೆ ಸದ್ದು ಮಾಡಿರುವ ಸುಂದರಿ. ಹೌದು, ಫುಟ್ ಬಾಲ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಕೆಲಸ ಮಾಡಿರುವ ರಚನಾ ರೈ ಚಿತ್ರಕಲೆಯ ಕಲಾವಿದೆಯಾಗಿದ್ದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಮೊದಲೇ ಹೇಳಿದಂತೆ ರಚನಾ ರೈ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದರಿಂದಲೋ ಏನೋ, ಆಕೆಗೆ ಸಾಹಿತ್ಯದತ್ತ ವಿಶೇಷ ಆಸಕ್ತಿ. ಅದಕ್ಕೆ ಅವರು ಬರೆದು ಪ್ರಕಟಿಸಿರುವ 'ಓ ಮೈ ಡಾಗ್' ಪ್ರಸಕ್ತವೇ ಸಾಕ್ಷಿ. ಮಾತ್ರವಲ್ಲ ಆ ಪುಸ್ತಕ ದಾಖಲೆ ಸಂಖ್ಯೆಯಲ್ಲಿ ಮಾರಾಟವೂ ಆಗಿದೆ. ಹೌದು, ರಚನಾ ರೈ ಅವರು ಬರೆದ 'ಓ ಮೈ ಡಾಗ್' ಪುಸ್ತಕ ಸಾವಿರಕ್ಕೂ ಹೆಚ್ಚು ಪ್ರತಿಗಳು ಒಂದೇ ದಿನ ಮಾರಾಟವಾಗಿತ್ತು.

ಒಟ್ಟಿನಲ್ಲಿ ಈ ಕೋಸ್ಟಲ್ ಸುಂದರಿ ರಚನಾ ರೈ ನಟನೆಯ ಮೂಲಕ ಮೋಡಿ ಮಾಡುತ್ತಿದ್ದಾರೆ. ಇದರ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಮಟ್ಟಿಗೆ ಆ್ಯಕ್ಟೀವ್ ಆಗಿರುವ ರಚನಾ ಬಿಡುವು ಸಿಕ್ಕಾಗಲೆಲ್ಲಾ ರೀಲ್ಸ್, ಫೋಟೋಶೂಟ್‌ಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.

ಇನ್ನು ವಾರದ ಹಿಂದೆಯಷ್ಟೇ ಆಕೆ ಹಾಕಿರುವ ಫೋಟೋಗಳನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಆಕೆ ಪಡೆದಿರುವ 35.5 ಸಾವಿರ ಲೈಕ್ಸ್ ಗಳೇ ಸಾಕ್ಷಿ. ಇದರ ಜೊತೆಗೆ ಇನ್ನೂರಕ್ಕೂ ಹೆಚ್ಚು ಕಮೆಂಟ್‌ಗಳು ಈ ಫೊಟೋಗಳಿಗೆ ಬಂದಿದ್ದರೆ ಮೂರು ಸಾವಿರದಷ್ಟು ಜನ ಶೇರ್ ಮಾಡಿರುವುದು ವಿಶೇಷ. ಇಲ್ಲಿಯ ತನಕ ಕೇವಲ 75 ಫೋಸ್ಟ್‌ಗಳನ್ನಷ್ಟೇ ಹಂಚಿಕೊಂಡಿರುವ ರಚನಾಗೆ ಒಂದುಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ.

More from Filmibeat

English summary
Darshan Devil film actress Rachana Rai journey from Coastalwood to Sandalwood
Read more about: actress darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X