Bombat Bojana: ಬೊಂಬಾಟ್ ಭೋಜನದಲ್ಲಿ ಡಿಕೆಶಿ : ಡಿಸಿಎಂ ಮೇಕಪ್ ಸೈ.. ಡೈಲಾಗ್‌ಗೂ ಜೈ!

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ ಬೊಂಬಾಟ್ ಭೋಜನ ಕಾರ್ಯಕ್ರಮ ಇತ್ತೀಚೆಗೆ 700 ಸಂಚಿಕೆಗಳನ್ನು ಮುಗಿಸಿ, ಯಶಸ್ವಿಯಾಗಿ ಮುನ್ನುಗ್ಗುತ್ತಾ ಇದೆ. ಬರೀ ಅಡುಗೆ ಕಾರ್ಯಕ್ರಮ ಮಾತ್ರವಲ್ಲ, ಹೊಸ ಹೊಸ ಐಡಿಯಾಗಳನ್ನು ಆ ಕಾರ್ಯಕ್ರಮದಲ್ಲಿ ಸಿಹಿಕಹಿ ಚಂದ್ರು ಪರಿಚಯಿಸುತ್ತಾರೆ. ಅದರ ಜೊತೆಗೆ ವಿಭಿನ್ನವಾದ ರುಚಿಯನ್ನು ಸವಿಯುವಂತೆ ಮಾಡುತ್ತಾರೆ. ಇನ್ನು ಅಡುಗೆಗೆ ಇಡುವ ಹೆಸರನ್ನೊಮ್ಮೆ ನೀವೂ ಕೇಳಬೇಕು‌. ಹೀಗೂ ಹೆಸರಿಡಬಹುದಾ ಎಂದು ಪ್ರಶ್ನೆ ಮೂಡುವಂತೆ ಇರುತ್ತದೆ. ಹಬ್ಬ ಹರಿದಿನಗಳಿಗೆಲ್ಲಾ ವಿಶೇಷ ಅತಿಥಿಯ ಜೊತೆಗೆ ವಿಶೇಷ ಅಡುಗೆಯೂ ಇರುತ್ತದೆ.

ಇಂದು (ಆಗಸ್ಟ್ 15) ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶೇಷ ಅತಿಥಿಯೂ ಇದ್ದಾರೆ. ವಿಶೇಷ ಅಡುಗೆಯನ್ನು ಮಾಡಿದ್ದಾರೆ. ಬೊಂಬಾಟ್ ಭೋಜನದ ಇವತ್ತಿನ ವಿಶೇಷ ಅತಿಥಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಆಗಮಿಸಿದ್ದಾರೆ. ಅದರ ಹಿಂದಿನ ತಯಾರಿಯೇ ತುಂಬಾ ಸುಂದರವಾಗಿದೆ.

Bombat Bhojana-DK Shivakumar

ಡಿಸಿಎಂ ಡಿಕೆಶಿಗೆ ಅದ್ದೂರಿ ಸ್ವಾಗತ

'ಬೊಂಬಾಟ್ ಭೋಜನ' ಕಾರ್ಯಕ್ರಮದಲ್ಲಿ ಒಂದೊಂದು ದಿನ ಒಬ್ಬೊಬ್ಬ ಅತಿಥಿ ಬರುತ್ತಾರೆ. ಸೆಲೆಬ್ರೆಟಿಗಳ ಅಡ್ಡವೂ ಇದಾಗಿದೆ. ಅಷ್ಟೇ ಅಲ್ಲ ಬಸುರಿ, ಬಾಣಂತಿಯರಿಗೂ ಬೊಂಬಾಟ್ ಭೋಜನ ಅಡ್ಡಗೆ ಕರೆಸಿ, ಅವರಿಗಿಷ್ಟವಾದ ತಿನಿಸುಗಳನ್ನು, ಆರೋಗ್ಯಕ್ಕೆ ಉತ್ತಮವಾದ ತಿಂಡಿಯನ್ನು ಮಾಡಿ, ತಿನ್ನಿಸಿ, ಹರಸಿ ಕಳುಹಿಸುತ್ತಾರೆ. ಈಗಾಗಲೇ ಸಾಕಷ್ಟು ಸಿನಿಮಾ ಕಲಾವಿದರೂ ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ. ಆದ್ರೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೊದಲ ಬಾರಿಗೆ ರಾಜಕಾರಣಿಯನ್ನು ಕರೆಸಲಾಗಿದೆ.

ತೆರೆ ಹಿಂದಿನ ದೃಶ್ಯ ಹೇಗಿತ್ತು..?

ಕಾರ್ಯಕ್ರಮ ಶುರುವಾಗುವುದಕ್ಕೂ ಮುನ್ನ ಹೇಗಿತ್ತು ಅನ್ನೋದನ್ನು ಸ್ಟಾರ್ ಸುವರ್ಣ ವಿಡಿಯೋ ಮೂಲಕ ಹಂಚಿಕೊಂಡಿದೆ. ಡಿಕೆ ಶಿವಕುಮಾರ್ ಅವರನ್ನು ಬಂದ ಕೂಡಲೇ ಇಡೀ ತಂಡ ಸ್ವಾಗತ ಮಾಡಿದೆ. ಬಳಿಕ ಒಂದಷ್ಟು ಮಾತು, ಹರಟೆಯನ್ನು ಹೊಡೆದಿದ್ದಾರೆ. ಕ್ಯಾಮರಾ ಮುಂದೆ ಬರುವುದಕ್ಕೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೊಂಚ ಮೇಕಪ್‌ ಮಾಡಲಾಗಿದೆ. ಆ ಖುಷಿಯನ್ನು ಡಿಕೆ ಶಿವಕುಮಾರ್ ಅವರು ಕೂಡ ಫೀಲ್ ಮಾಡಿದ್ದಾರೆ.

Bombat Bhojana-DK Shivakumar

ಡಿಕೆಶಿ - ಸಿಹಿಕಹಿ ನಡುವೆ ಒಳ್ಳೆ ಬಾಂಧವ್ಯ

ಸಿಹಿಕಹಿ ಚಂದ್ರು ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಉತ್ತಮ ಬಾಂಧವ್ಯವಿದೆ. ಅದು ಎಲ್ಲರಿಗೂ ಗೊತ್ತಿರುವ ಸಂಗತಿ ಕೂಡ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ನೇಹಿತರು ಭೋಜನದ ಸಮಯದಲ್ಲಿ ಒಂದಾಗಿದ್ದಾರೆ. ಸಿಹಿಕಹಿ ಚಂದ್ರು ಅಡುಗೆ ಮಾಡುವ ತಯಾರಿಯಲ್ಲಿದ್ದರೆ, ನಡು ನಡುವೆ ಹಳೆಯ ನೆನಪುಗಳು, ಇಷ್ಟವಾದ ತಿನಿಸುಗಳ ಬಗ್ಗೆ ಹೀಗೆ ಮಾತುಕತೆ ಸಾಗಿದೆ. ಸದಾ ರಾಜಕೀಯ ಅಂತ ಬ್ಯುಸಿ ಇರುವ ಡಿಕೆ ಶಿವಕುಮಾರ್ ಅವರ ಮೊಗದಲ್ಲಿ ಒಂದಷ್ಟು ನಗು ಮೂಡಿದೆ. ಆ ಖುಷಿ ನೋಡುಗರನ್ನು ಖುಷಿ ಪಡಿಸಿದೆ.

ಡಿಕೆಶಿಗೆ ಇಷ್ಟವಾದ ತಿಂಡಿ ಯಾವುದು?

ಡಿಕೆ ಶಿವಕುಮಾರ್ ಹಾಗೂ ಸಿಹಿಕಹಿ ಚಂದ್ರು ಅವರ ಬಾಂಧವ್ಯ ಚೆನ್ನಾಗಿರುವ ಕಾರಣ ಡಿಕೆ ಶಿವಕುಮಾರ್ ಅವರಿಗೆ ಏನಿಷ್ಟ ಅನ್ನೋದು ಸಹಜವಾಗಿಯೇ ಗೊತ್ತಿದೆ. ಅದಕ್ಕಾಗಿಯೇ ಅವರೇಕಾಳು ಚಿತ್ರಾನ್ನ, ಮಶ್ರೂಮ್, ಜಾಮೂನು, ಕಡಲೇಬೀಜದಲ್ಲಿ ಒಂದು ಸ್ಪೆಷಲ್ ಪದಾರ್ಥವನ್ನು ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿನ್ನಲು ಕೊಟ್ಟಾಗ ಚಿತ್ರಾನ್ನ ಹಾಗೂ ಕಡಲೇಬೀಜದ ಮಸಾಲೆಯನ್ನು ಸವಿದಿದ್ದಾರೆ. ಆ ರುಚಿಗೆ ಮುಳುಗಿ, ಸುಮ್ಮನೆ ತಿಂದಿದ್ದಾರೆ. ಬಳಿಕ ಸಿಹಿಕಹಿ ‌ಚಂದ್ರು ಪ್ಲೇಟ್‌ಗೂ ಮಸಾಲೆ ಯುಕ್ತ ಕಡಲೇ ಬೀಜವನ್ನು ಬಡಿಸಿದ್ದಾರೆ.

More from Filmibeat

English summary
DK Shivakumar guest for Star Suvarna Bombat Bhojana
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X