DKD; ಕಾಲೇಜಲ್ಲಿದ್ದಾಗ ಶ್ರೀಮುರುಳಿ ಅಷ್ಟೊಂದು ಫ್ಲರ್ಟ್ ಮಾಡ್ತಾ ಇದ್ರಾ? ಶಿವಣ್ಣ ರಿಯಾಕ್ಷನ್ ನೋಡಿ!
ಜೀ ಕನ್ನಡದಲ್ಲಿ ಡಿಕೆಡಿ ರಿಯಾಲಿಟಿ ಶೋ ಬರ್ತಿದೆ. ಈ ಶೋನಲ್ಲಿ ಶಿವಣ್ಣ ಸ್ಪೆಷಲ್ ಗೆಸ್ಟ್. ಇಂದಿನ ಸ್ಪೆಷಲ್ ಎಪಿಸೋಡ್‌ನಲ್ಲಿ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರುಳಿ ಹೈಲೆಟ್ ಆಗಿದ್ದಾರೆ. ಇವರಿಬ್ಬರು ಅಣ್ಣ ತಮ್ಮ ಎಂಬುದು ಮಾತ್ರ ಗೊತ್ತು. ಆದರೆ ಅಣ್ಣ ತಮ್ಮನ ನಡುವೆ ಬಾಂಧವ್ಯ ಹೇಗಿರುತ್ತೆ ಎಂಬುದು ಎಲ್ಲರಿಗೂ ಅಷ್ಟಾಗಿ ಗೊತ್ತಿರಲ್ಲ. ಅದರಲ್ಲೂ ಚಿಕ್ಕವಯಸ್ಸಿನಿಂದಲೂ ಜೊತೆಗೆ ಬೆಳೆದ ಇಬ್ಬರಿಗೂ ಇಬ್ಬರ ಬಗ್ಗೆ ಚೆನ್ನಾಗಿಯೇ ಅರಿವಿರುತ್ತದೆ. ಇದೀಗ ಜೀ ಕನ್ನಡ ವೇದಿಕೆಯಲ್ಲಿ ಅದೆಲ್ಲವೂ ಹೊರಗೆ ಬಂದಿದೆ.
ಇಬ್ಬರ ಲೈಫ್ ಜರ್ನಿ ಬಗ್ಗೆ ಯಾರಿಗೂ ಗೊತ್ತೇ ಇರದಷ್ಟು ವಿಚಾರಗಳನ್ನು ಜೀ ಕನ್ನಡ ಅನಾವರಣ ಮಾಡಿದೆ. ಒಂದಷ್ಟು ನಗು, ಒಂದಷ್ಟು ಎಮೋಷನ್ ಕ್ರಿಯೇಟ್ ಆಗಿದೆ. ಅಂದಿನ ಕಾಲದಲ್ಲಿ ಇಬ್ಬರು ಪಟ್ಟ ಕಷ್ಟದ ಬಗ್ಗೆಯೂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ವೇದಿಕೆ ಮೇಲೆ ಸಹೋದರರಿಗೆ ಗೇಮ್
ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಒಂದು ಸ್ಪೆಷಲ್ ಗೇಮ್ ಆಡಿಸಿದ್ದಾರೆ. ವಿಜಯ್ ಮತ್ತು ರಾಘು ಇಬ್ಬರನ್ನು ಕೂರಿಸಿ ಫೋಟೋ ಇರುವ ಬೋರ್ಡ್ ಕೊಟ್ಟಿದ್ದಾರೆ. ಬಾಲ್ಯದ ನೆನಪುಗಳ ಪ್ರಶ್ನೆ ಕೇಳಿದಾಗ ಅದಕ್ಕೆ ಯಾರು ಸೂಕ್ತ ಆಗುವವರ ಫೋಟೋ ತೋರಿಸಬೇಕು. ಅದರಲ್ಲಿ ಮೊದಲ ಪ್ರಶ್ನೆ ಚಿಕ್ಕ ವಯಸ್ಸಿನಲ್ಲಿ ಯಾರೂ ಹೆಚ್ಚು ಬೈಸ್ಕೊಳ್ತಾ ಇದ್ದದ್ದು ಎಂಬ ಪ್ರಶ್ನೆಗೆ ಶ್ರೀಮುರುಳಿ ಫೋಟೋ ತೋರಿಸಿದ್ದಾರೆ ರಾಘು. ಬಳಿಕ ವಿವರಣೆ ನೀಡಿದ್ದು, 'ಮುರಳಿ ಕಂಡ್ರೆ ಮುದ್ದು ಜಾಸ್ತಿ ತರಲೆನೂ ಜಾಸ್ತಿ. ತರಲೆ ಮಾಡಿದಾಗ ಸಿಕ್ಕಿ ಹಾಕಿಸಿಬಿಡ್ತಾ ಇದ್ದೆ' ಎಂದು ರಾಘು ಹೇಳಿದ್ರೆ, ಅದಕ್ಕೆ ಮುರುಳಿ ಅವರು, 'ಇವನು ಆಚೆ ಮಾತ್ರ ಶ್ರೀರಾಘವೇಂದ್ರ ಸ್ವಾಮಿ. ಒಳಗೆ ಸರಿಯಾಗಿ ಹಾಕೊಟ್ಟು ಬಿಡ್ತಾ ಇದ್ದ ಮಾಮ' ಎಂದು ಅಂದಿನ ಸತ್ಯ ಹೇಳಿದ್ದಾರೆ.
ಕಾಲೇಜಲ್ಲಿ ಮುರುಳಿ ಫ್ಲರ್ಟ್ ಅಂತೆ
ಇನ್ನು ಕಾಲೇಜಿನಲ್ಲಿ ತುಂಬಾ ಫ್ಲರ್ಟ್ ಯಾರು ಎಂಬ ಮಾತಿಗೆ ಜೋಶ್ ಆಗಿ ಉತ್ತರ ಕೊಟ್ಟಿದ್ದಾರೆ ಶಿವಣ್ಣ. ಅನುಶ್ರೀ ಆ ಪ್ರಶ್ನೆ ಕೇಳಿದ್ದೆ ತಡ, ಮುರುಳಿ, ಮುರುಳಿ ಅಂತ ಕಿರುಚಿದ್ದಾರೆ. ಶಿವಣ್ಣ ಹೇಳಿದ ಜೋಶ್ ಕಂಡು ವೇದಿಕೆ ಮೇಲಿದ್ದವರೆಲ್ಲ ನಕ್ಕು ನಲಿದಿದ್ದಾರೆ.

ಚೆನ್ನೈ ದಿನಗಳನ್ನು ನೆನೆದ ರಾಘು
ಶ್ರೀಮುರುಳಿ ಮತ್ತು ವಿಜಯ್ ರಾಘವೇಂದ್ರ ವಿಚಾರದಲ್ಲಿ ಭಾವುಕ ಜೀವಿ ಎಂದಾಕ್ಷಣಾ ನಮಗೆಲ್ಲ ರಾಘು ಇರಬಹುದು ಎಂದೇ ತಿಳಿಯುತ್ತೀವಿ. ಆದರೆ ರಾಘು ಹೇಳಿದ್ದು, ಶ್ರೀಮುರುಳಿ ಎಂದು. 'ಒಮ್ಮೆ ಚೆನ್ನೈನಲ್ಲಿದ್ದಾಗ, ನಾನಿದ್ದ ಸ್ಥಳ ನೋಡಿನೇ ಶ್ರೀಮುರುಳಿ ಕುಗ್ಗಿ ಹೋಗಿದ್ದ. ನೀನು ಇಲ್ಲೆಲ್ಲ ಇರಬೇಡ ಬಂದು ಬಿಡು ಎಂದಿದ್ದ. ಆದರೆ ಅವನು ಮುಂಬೈನಲ್ಲಿ ಪಟ್ಟ ಕಷ್ಟವನ್ನ ಮಾತ್ರ ಯಾರ ಬಳಿಯೂ ಹೇಳಿರಲಿಲ್ಲ' ಎಂದು ಹೇಳಿದ್ದಾರೆ.
ಅಣ್ಣ ತಮ್ಮಂದಿರ ಗಟ್ಟಿ ಬಾಂಧವ್ಯ
ಈ ಅಣ್ಣ ತಮ್ಮನ ನಡುವೆ ತುಂಬಾ ಒಳ್ಳೆಯ ಬಾಂಧವ್ಯವಿದೆ. ಅಣ್ಣನನ್ನು ತಮ್ಮ ಹೊಗಳುತ್ತಾರೆ, ತಮ್ಮನನ್ನು ಅಣ್ಣ ಹೊಗಳುತ್ತಾರೆ. ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಕೊಡಲ್ಲ. ಇವರನ್ನ ನೋಡಿ ರಿಯಲ್ ಅಣ್ಣ ತಮ್ಮಂದಿರು ಕಲಿಯುವುದು ಬಹಳ ಇದೆ. ಮಾದರಿಯ ಅಣ್ಣ ತಮ್ಮಂದಿರೇ ಸರಿ. ಇಡೀ ಕುಟುಂಬವೇ ಎಲ್ಲರಿಗೂ ಸಪೋರ್ಟಿವ್ ಆಗಿದೆ ಎಂದೇ ಶ್ರೀಮುರುಳಿ ಹೇಳಿದ್ದಾರೆ.


Click it and Unblock the Notifications











