Don't Miss!
- News
Kashmir Snowfall: ರಾಷ್ಟ್ರೀಯ ಹೆದ್ದಾರಿ ಬಂದ್- ವಿಮಾನಗಳು ವಿಳಂಬ, ರೈಲು ಸೇವೆ ಸ್ಥಗಿತ
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
DKD: ಜುಲೈ 11ರಂದು ಬೆಂಗಳೂರು ತಲುಪಲಿದೆ ಡಾ.ಪುನೀತ್ ರಾಜ್‍ಕುಮಾರ್ ಟ್ರೋಫಿ
ಜೀ ಕನ್ನಡದ ಡಿಕೆಡಿ ರಿಯಾಲಿಟಿ ಶೋ ಗೆದ್ದವರಿಗೆ ಈ ಬಾರಿ ತುಂಬಾ ಅಮೂಲ್ಯವಾದ ಬಹುಮಾನವೊಂದು ಸ್ಪರ್ಧಿಗಳ ಕೈ ಸೇರಲಿದೆ. ಅದು ಅಪ್ಪು ಟ್ರೋಫಿ. ಎಷ್ಟೇ ಹಣ ಸಿಕ್ಕರೂ ಈ ಟ್ರೋಫಿಗೆ ಬೆಲೆ ಕಟ್ಟಲಾಗದು. ಹೀಗಾಗಿಯೇ ಡಿಕೆಡಿ ಸ್ಪರ್ಧಿಗಳು ಸಹ ನಾವೂ ಗೆಲ್ಲಬೇಕು. ಟ್ರೋಫಿ ನಮ್ಮದೆ ಆಗಬೇಕು ಎಂಬ ಹಠ ತೊಟ್ಟಿದ್ದಾರೆ. ಡಾ.ಪುನೀತ್ ರಾಜ್ಕುಮಾರ್ ಟ್ರೋಫಿಗಾಗಿ ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ.
ಡಿಕೆಡಿ ಆರಂಭವಾದಾಗಲಿಂದ ಅಪ್ಪುಗೆ ಒಂದಲ್ಲ ಒಂದು ರೀತಿಯಲ್ಲಿ ಗೌರವ ಕೊಡುತ್ತಾ ಬಂದಿದ್ದಾರೆ. ಆಯ್ಕೆಯಾದವರಿಗೆ ರಾಜರತ್ನ ಪದಕ ಕೊಟ್ಟು ಸ್ವಾಗತ ಮಾಡಿದರು. ಇದೀಗ ಡಾ.ಪುನೀತ್ ರಾಜ್ ಕುಮಾರ್ ಟ್ರೋಫಿ ನೀಡುವ ಮೂಲಕ ದೊಡ್ಡ ಮಟ್ಟದ ಗೌರವ ನೀಡಲು ಸಿದ್ಧವಾಗಿದೆ ಜೀ ಕನ್ನಡ. ಟ್ರೋಫಿ ನೋಡಿದಾಗಿನಿಂದ ಎಲ್ಲರ ಕಣ್ಣು ಮನಸ್ಸು ಅದನ್ನು ಯಾವಾಗ ಸ್ಪರ್ಶಿಸುತ್ತೇವೋ ಎಂದು ಕಾತುರರಾಗಿದ್ದಾರೆ. ಈಗ ಆ ಸಮಯ ಹತ್ತಿರ ಬಂದಿದೆ.
ಡ್ಯಾನ್ಸ್
ಕರ್ನಾಟಕ
ಡ್ಯಾನ್ಸ್
ವೇದಿಕೆಯಲ್ಲಿ
ಶಿವಣ್ಣನ
60ನೇ
ಹುಟ್ಟುಹಬ್ಬದ
ಸೆಲೆಬ್ರೇಷನ್!

ಅಪ್ಪುವಿನಂತೆ ಕಾಣುವ ಟ್ರೋಫಿ
ಅಪ್ಪು ಎಲ್ಲರ ಮನದಲ್ಲೂ ಅಜರಾಮರ. ಅವರಿಲ್ಲ ಎಂಬುದನ್ನು ಇವತ್ತಲ್ಲ ಯಾವತ್ತಿಗೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವರಿಲ್ಲ ಎಂಬುದನ್ನು ನೆನೆದರೆ ಕರುಳು ಕಿತ್ತು ಬರುತ್ತೆ. ನೋವು ಜೋರಾಗುತ್ತೆ. ಅದರ ಬದಲು ಅವರಾಕಿಕೊಟ್ಟ ಹಾದಿ ಬಹಳಷ್ಟಿದೆ. ಅವರಿದ್ದಾಗ ಪ್ರತಿಯೊಂದು ವಿಚಾರಕ್ಕೂ ಅದೇಗೆ ಸಂಭ್ರಮ ಪಡುತ್ತಿದ್ದವೋ? ಈಗಲೂ ಅಭಿಮಾನಿಗಳು ಅಷ್ಟೇ ಸಂಭ್ರಮ ಪಡುತ್ತಾ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಯುತ್ತಿದ್ದಾರೆ. ಅಪ್ಪು ಆಗಮನಕ್ಕೆ ಅದೆಷ್ಟು ಗೌರವ ಕೊಡುತ್ತಿದ್ದರೋ ಇದೀಗ ಅಪ್ಪು ಟ್ರೋಫಿಗೂ ಅಷ್ಟೇ ಗೌರವ ನೀಡುತ್ತಿದ್ದಾರೆ. ಟ್ರೋಫಿಯನ್ನು ಗೌರವದಿಂದ ಕರೆ ತರುತ್ತಿದ್ದಾರೆ. ಅಪ್ಪುವಿನಂತೆ ಸ್ವಾಗತಿಸುತ್ತಿದ್ದಾರೆ.
ಸೆಂಚುರಿ
ಸ್ಟಾರ್
ಶಿವಣ್ಣ
ಹುಟ್ಟುಹಬ್ಬಕ್ಕೆ
60
ಗಂಟೆ
ನಿರಂತರ
ಸಿನಿಮೋತ್ಸವ
!

ನಾಳೆ ನೋಡಬಹುದು ಅಪ್ಪು ಟ್ರೋಫಿ
ಡಿಕೆಡಿ ವೇದಿಕೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚಾಗುತ್ತಿದೆ. ಗೆದ್ದವರ ಕೈ ಸೇರುವ ಅಪ್ಪು ಟ್ರೋಫಿ ಇದೀಗ ಬೆಂಗಳೂರು ತಲುಪಲಿದೆ. ಜುಲೈ 11 ಎಂದರೆ ನಾಳೆ ಅಪ್ಪು ಟ್ರೋಫಿಯ ದರ್ಶನ ಮಾಡಬಹುದು. ಅದಕ್ಕಾಗಿಯೇ ಅದ್ಧೂರಿ ಮೆರವಣಿಗೆ ಹಮ್ಮಿಕೊಂಡಿದ್ದಾರೆ ಅಭಿಮಾನಿಗಳು. ಕುರುಬರಹಳ್ಳಿಯಲ್ಲಿರುವ ಅಖಿಲ ಕರ್ನಾಟಕ ಯುವ ರಾಜ್‍ಕುಮಾರ್ ಸೇನೆಯ ಕೇಂದ್ರ ಕಚೇರಿಗೆ ನಾಳೆ ಅಪ್ಪು ಟ್ರೋಫಿಯ ಆಗಮನವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ರಾಜವಂಶದ ಅಭಿಮಾನಿಗಳು ಬಂದು ಟ್ರೋಫಿಯನ್ನು ಕಣ್ತುಂಬಿಕೊಳ್ಳಲು ಸೂಚಿಸಿದ್ದಾರೆ.

ಅಪ್ಪುಗೆ ಸ್ಪೆಷಲ್ ಗೌರವ ಸಲ್ಲಿಸಿದ್ದ ಡಿಕೆಡಿ
ಗೆದ್ದವರಿಗೆ ಅಪ್ಪು ಟ್ರೋಫಿ ಕೊಡಲು ಡಿಕೆಡಿ ನಿರ್ಧರಿಸಿದೆ. ಇದೆ ಕಾರಣಕ್ಕೆ ಬಹಳ ಗೌರವಯುತವಾಗಿ ಅಪ್ಪು ಟ್ರೋಪಿಯನ್ನು ವೇದಿಕೆ ಮೇಲೆ ತಂದಿತ್ತು. ನೃತ್ಯದ ನಡುವಲ್ಲಿ ಮೇಲೆ ಅಪ್ಪು ಟ್ರೋಫಿ ಇತ್ತು. ಶಿವಣ್ಣ ಅದರ ಬಟ್ಟೆ ಸರಿಸಿ, ಅಪ್ಪು ಟ್ರೋಫಿಯನ್ನು ವೇದಿಕೆ ಮೇಲೆ ತಂದರು. ನಕ್ಷತ್ರಗಳ ನಡುವೆ ಅಪ್ಪು ಕಂಚಿನ ಪ್ರತಿಮೆ ಮಿನುಗುತ್ತಿದೆ. ಒಂದು ಕ್ಷಣ ಆ ಪ್ರತಿಮೆ ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತೆ. ಅಪ್ಪು ನಿಜವಾಗಲೂ ನಮ್ಮನ್ನು ಅಗಲಿದ್ದಾರಾ ಎಂಬ ನೋವು ಮತ್ತೆ ಕಾಡುತ್ತೆ. ದುಃಖ ಉಮ್ಮಳಿಸಿ ಬರುತ್ತದೆ. ಡ್ಯಾನ್ಸ್ ಮಾಡುವ ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಇದೆ. ಪ್ರತಿಮೆ ಬಳಿ ಪವರ್ ಎಂದು ಬರೆಯಲಾಗಿದೆ. ನಿಜಕ್ಕೂ ನ ಪ್ರತಿಮೆ ವೇದಿಕೆ ಮೇಲೆ ಇಳಿಸುವಾಗ ಅಕ್ಷರಶಃ ಅಪ್ಪು ಕೆಳಗಿಳಿದು ಬರುತ್ತಿದ್ದಾರೆಂಬಂತೆ ಭಾಸವಾಗುತ್ತದೆ. ಅಷ್ಟು ಸೊಗಸಾಗಿದೆ ಟ್ರೋಫಿ.
ಟಿವಿಗೆ
'ಜೇಮ್ಸ್':
ಮನೆ
ಮನೆಗೂ
ಬರುತ್ತಿದ್ದಾರೆ
ಪುನೀತ್
ರಾಜ್ಕುಮಾರ್!

ಟ್ರೋಫಿಗಾಗಿ ಅಭಿಮಾನಿಗಳ ವೈಟಿಂಗ್
ಈಗಾಗಲೇ ಡಿಕೆಡಿಯಲ್ಲಿ ಟ್ರೋಫಿಯ ಝಲಕ್ ನೋಡಿದ್ದೇವೆ. ಆ ಟ್ರೋಫಿ ನೋಡುತ್ತಿದ್ದರೆ ಸೇಮ್ ಟು ಸೇಮ್ ಪುನೀತ್ ರಾಜ್ ಕುಮಾರ್ ಅವರೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಹೀಗಾಗಿ ದೊಡ್ಡಮಟ್ಟದಲ್ಲಿ ಅಪ್ಪುವಿನ ಟ್ರೋಫಿ ಹೇಗಿರಬೇಕು ಎಂಬುದು ಎಲ್ಲರಿಗೂ ಇರುವ ಕುತೂಹಲವಾಗಿದೆ. ಹೀಗಾಗಿ ನಾಳೆಯ ಟ್ರೋಫಿ ಆಗಮನದ ಕಾರ್ಯಕ್ರಮದಲ್ಲಿ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.