DKD: ಅನುಶ್ರೀ- ಅರ್ಜುನ್ ಜನ್ಯ ಆಟೋದಲ್ಲಿ ರೊಮ್ಯಾಂಟಿಕ್ ಸವಾರಿ ಹೇಗಿತ್ತು?

By ಎಸ್ ಸುಮಂತ್

ಡಿಕೆಡಿ ಕಾರ್ಯಕ್ರಮದಲ್ಲಿ ವೆರೈಟಿ ಆಫ್ ಡ್ಯಾನ್ಸ್ ಗೇನು ಕಡಿಮೆ ಇಲ್ಲ. ಪ್ರತಿ ವಾರವೂ ಮೈ ಝುಮ್ಮೆನ್ನಿಸುವ ಡ್ಯಾನ್ಸ್ ನಡೆಯುತ್ತಲೆ ಇರುತ್ತದೆ. ಅದೆಲ್ಲೂ ಇತ್ತೀಚೆಗೆ ದಿಶಾ ಮತ್ತು ಗಗನ್ ಕಾಂಬಿನೇಷನ್ ಸಖತ್ ಹಿಟ್ ಕಾಂಬಿನೇಷನ್ ಎನಿಸುತ್ತಿದೆ. ಪ್ರತಿ ವಾರವೂ ಗಗನ್ ಮತ್ತು ದಿಶಾ ಡ್ಯಾನ್ಸ್ ಎಲ್ಲರನ್ನೂ ಮೋಡಿ ಮಾಡದೆ ಇರದು. ಈ ವಾರದ ಪರ್ಫಾಮೆನ್ಸ್ ಕೂಡ ಜಡ್ಜ್‌ಗಳನ್ನೇ ನಿಬ್ಬೆರಗಾಗಿಸಿದೆ.

ಡ್ಯಾನ್ಸ್ ಮಾಡುವ ಕಲೆಯೊಂದಿದ್ದರೆ ಎಂಥಾ ರಿಸ್ಕಿ ಟಾಸ್ಕ್‌ ಅನ್ನು ಈಸಿಯಾಗಿ ಸ್ವೀಕರಿಸಿ ಬಿಡುತ್ತಾರೆ. ಅಂಥ ಉದಾಹರಣೆಗಳು ಡಿಕೆಡಿಯಲ್ಲಿ ಆಗಾಗ ಕಾಣಸಿಗುತ್ತವೆ. ಮೈ ಝುಮ್ಮೆನ್ನಿಸುವ ಸ್ಟೆಪ್‌ಗಳ ಜೊತೆಗೆ ಈ ಜಾಗದಲ್ಲೂ ಕುಣಿಯಬಹುದಾ ಎಂಬ ಆಶ್ಚರ್ಯ ಮೂಡಬೇಕು. ಅಷ್ಟು ಒಳ್ಳೊಳ್ಳೆ ಪರ್ಫಾಮರ್ ಡಿಕೆಡಿನಲ್ಲಿದ್ದಾರೆ. ಆದರೆ ಈ ವಾರದ ಪರ್ಫಾಮೆನ್ಸ್‌ಗೆ ರಕ್ಷಿತಾ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಕೆಲಸದ ಮಧ್ಯೆ ಡ್ಯಾನ್ಸ್ ಮಾಡೋದು ಹೇಗೆ?

ಕೆಲಸದ ಮಧ್ಯೆ ಡ್ಯಾನ್ಸ್ ಮಾಡೋದು ಹೇಗೆ?

ಮಾರುಕಟ್ಟೆ ಅಂದರೆ ಹೇಗಿರುತ್ತೆ? ಯಾವಾಗಲೂ ಗಿಜಿ ಗಿಜಿ ಇರುತ್ತೆ. ಜೊತೆಗೆ ಆಟೋದಲ್ಲಿ ಬಂದ ತರಕಾರಿಯನ್ನುಇಳಿಸಿಕೊಳ್ಳುವುದರಲ್ಲೇ ಎಲ್ಲಾ ಬ್ಯುಸಿಯಾಗಿರುತ್ತಾರೆ. ಅಷ್ಟೇ ಅಲ್ಲ ತರಕಾರಿ ಇರುವ ಟ್ರೇಗಳೇನು ಕಡಿಮೇನಾ ಮಣ ಬಾರ ಇರುತ್ತದೆ. ಅದನ್ನು ಇಳಿಸಿ, ಕೆಳಗಿಟ್ಟು ಸುಧಾರಿಸಿಕೊಂಡರೆ ಸಾಕು ಎಂಬಂತ ಸ್ಥಿತಿ ಇರುತ್ತದೆ. ಇಲ್ಲೂ ಖುಷ್ ಖುಷಿಯಾಗಿ ಡ್ಯಾನ್ಸ್ ಮಾಡುತ್ತಾ ಕೆಲಸ ಮಾಡುವುದನ್ನು ಇವತ್ತಿನ ಡಿಕೆಡಿಯಲ್ಲಿ ತೋರಿಸಿದ್ದಾರೆ. ಮಾರ್ಕೆಟ್ ಥೀಮ್‌ನಲ್ಲಿ ದಿಶಾ - ಗಗನ್ ಹೆಜ್ಜೆ ಹಾಕಿದ್ದಾರೆ.

ಗಗನ್ ಡ್ಯಾನ್ಸ್ ಮೆಚ್ಚಲೇಬೇಕು

ಡಿಕೆಡಿನಲ್ಲಿ ಮೈನವಿರೇಳುವಂತ ಸ್ಟೆಪ್‌ಗಳನ್ನ ಪ್ರತಿ ವಾರ, ಎಲ್ಲರ ಪರ್ಫಾಮೆನ್ಸ್‌ನಲ್ಲಿ ನೋಡ್ತೇವೆ. ಆದರೆ ಈ ವಾರ ದಿಶಾ ಮತ್ತು ಗಗನ್ ಪರ್ಫಾಮೆನ್ಸ್ ನಡುಕ ಹುಟ್ಟಿಸಿದ್ದೆ ಬೇರೆ ವಿಚಾರಕ್ಕೆ. ಮಾರ್ಕೆಟ್‌ಗಳಲ್ಲಿ ತರಕಾರಿ, ಹೂ ಹಾಕುವ ಟ್ರೇಗಳು ತುಂಬಾ ಬಾರ ಇರುತ್ತವೆ. ಅದನ್ನು ಎತ್ತುವುದಕ್ಕೆ ಶಕ್ತಿವಂತರೆ ಆಗಬೇಕು. ಆದರೆ ಆ ಟ್ರೇಗಳನ್ನೇ ಬಳಸಿಕೊಂಡು ಗಗನ ಮತ್ತು ದಿಶಾ ನೃತ್ಯ ಮಾಡಿದ್ದಾರೆ. ದಿಶಾ ಟ್ರೇ ನೆಲದ ಮೇಲೆ ದೂಕಿದಾಗ, ಗಗನ್ ಎಗರಿ ಬೀಳುವುದನ್ನು ನೋಡಿದರೆ ಜಸ್ಟ್ ಮಿಸ್ ಎಂದು ಎದ್ದು‌ಕುಳಿತುಕೊಳ್ಳುವ ಹಾಗೆ ಆಗುತ್ತೆ. ಇನ್ನು ದಿಶಾ ಕೈನಲ್ಲಿರುವ ಟ್ರೇಯಿಂದ ತಲೆ ಮೇಲೆತ್ತಿ ಹೂ ಚೆಲ್ಲುವುದಿದೆಯಲ್ಲ ಅದನ್ನು ಒಂದು ಕ್ಷಣ ಹಾರ್ಟ್ ನಿಂತ ಹಾಗೆ ಆಗಿ ಬಿಡುತ್ತದೆ. ಅಪ್ಪಿ ತಪ್ಪಿ ತಲೆಯ ಮೇಲೆ ಬಿದ್ದರೆ ಮುಗೀತು.

ಗಗನ್ ಗೆ ಹೊಗಳಿದ ಕ್ರೇಜಿ ಕ್ವೀನ್

ಗಗನ್ ಗೆ ಹೊಗಳಿದ ಕ್ರೇಜಿ ಕ್ವೀನ್

ಇವತ್ತು ಗಗನ್ ಮಾಡಿದ್ದು ಅಂತಿತ್ತ ಪರ್ಫಾಮೆನ್ಸ್ ಅಲ್ಲ. ಚಲಿಸುವ ಆಟೋ ಮೇಲೂ ತನ್ನ ನೃತ್ಯದ ಕಲೆ ತೋರಿದ್ದಾನೆ. ಆಟೋದ ಸಣ್ಣ ಸಣ್ಣ ಕಂಬಿ ‌ಮೇಲೆ ನಿಂತು ಮೂಳೆಯೇ ಇಲ್ಲವೇನೋ ಎಂಬಂತೆ ಡ್ಯಾನ್ಸ್ ಮಾಡಿದ್ದಾನೆ. ಗಗನ್ ಮತ್ತು ದಿಶಾ ದೇಚಮ್ಮ ಡ್ಯಾನ್ಸ್‌ಗೆ ಜಡ್ಜ್‌ಗಳು ಫಿದಾ ಆಗಿದ್ದಾರೆ. ಗಗನ್ ಪ್ಲೆಕ್ಸಿಬಲ್‌ಗೆ ರಕ್ಷಿತಾ ಹೊಗಳಿದ್ದಾರೆ. ಡ್ಯಾನ್ಸ್‌ನ ಮೂಲಕ ಹೇಳಲು ಹೊರಟ ಕಥೆಗೆ ರಕ್ಷಿತಾ ಮೆಚ್ಚುಗೆ ಸೂಚಿಸಿದರೆ, ಅರ್ಜುನ್ ಜನ್ಯಾ ಕೂಡ ಗಗನ್‌ಗೆ ಶಬ್ಬಾಶ್‌ಗಿರಿ ತಿಳಿಸಿದ್ದಾರೆ. ಕಥೆಗೆ ತಕ್ಕನಾಗಿ ಡ್ಯಾನ್ಸ್ ಮಾಡಿ ಅದಕ್ಕೊಂದು ರೂಪ ಕೊಟ್ಟು ಬಿಡುತ್ತೀಯಾ ಅಂದಿದ್ದಾರೆ.

ಅನುಶ್ರೀ-ಜನ್ಯ ಆಟೋ ಸವಾರಿ ಹೇಗಿತ್ತು?

ಅನುಶ್ರೀ-ಜನ್ಯ ಆಟೋ ಸವಾರಿ ಹೇಗಿತ್ತು?

ದಿಶಾ ಮತ್ತು ಗಗನ್ ಆಟೋ ಬಳಕೆ ಮಾಡಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಇದೇ ಆಟೋ ಮೇಲೆ ಅರ್ಜುನ್ ಜನ್ಯ ಮತ್ತು ಅನುಶ್ರೀ ರೋಮ್ಯಾಂಟಿಕ್ ಮೂಡ್‌ನಲ್ಲಿ ಒಂದು ರೌಂಡ್ ಹಾಕೊಂಡು ಬಂದಿದ್ದಾರೆ. ಹಾಗೆ ಒಂದೆರಡು ಸ್ಟೆಪ್ ಹಾಕಿ ಬಂದಿದ್ದಾರೆ. ಆಟೋದಲ್ಲಿ ಎಷ್ಟೆಲ್ಲಾ ಆಟ ಆಡಿಲ್ಲ ಎಂದು ರೇಗಿಸುತ್ತಾ, ಗಗನ್ ಮತ್ತು ದಿಶಾ ಪರ್ಫಾಮೆನ್ಸ್ ಗೆ ಎಲ್ಲರೂ ಚಪ್ಪಾಳೆಯ ಸುರಿಮಳೆ ಸುರಿಸಿದ್ದಾರೆ. ಅಷ್ಟೇ ಅಲ್ಲ ಕಮೆಂಟ್ ಬಾಕ್ಸ್‌ನಲ್ಲಿ ಅವರಿಬ್ಬರ ಪರ್ಫಾಮೆನ್ಸ್‌ಗೆ ಫುಲ್ ಮಾರ್ಕ್ ಸಿಕ್ಕಿದೆ.

More from Filmibeat

English summary
zee kannada DKD Reality Show Written Update on July 16th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X