For Quick Alerts
  ALLOW NOTIFICATIONS  
  For Daily Alerts

  ಡಿಕೆಡಿ 6 ವಿಶೇಷ ಪ್ರತಿಭೆಗಳಿಗೆ 1 ಲಕ್ಷ ಬಹುಮಾನ ನೀಡಿದ ತೋತಾಪುರಿ ಟೀಮ್!

  |

  ಜೀ ಕನ್ನಡದ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ನೋಡಿ ಇಡೀ ಕರ್ನಾಟಕವೇ ಮೆಚ್ಚಿಕೊಂಡಿದೆ. ಡಿಕೆಡಿಯ ಡ್ಯಾನ್ಸಿಂಗ್ ಮಹಾಗುರು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಸಾರಥ್ಯದಲ್ಲಿ ಈ ಸೀಸನ್ ಯಶಸ್ವಿಗೊಂಡಿದೆ. ಈ ಕಾರ್ಯಕ್ರಮ ಕಳೆದ ಶನಿವಾರ (ಸೆಪ್ಟೆಂಬರ್ 24)ದಂದು ಭರ್ಜರಿಯಾಗಿ ಫಿನಾಲೆ ಮುಗಿಸಿದೆ. ಈ ಸೀಸನ್‌ನ ಆರಂಭದಿಂದಲೂ ಕರ್ನಾಟಕದ ಪ್ರತಿಭೆಗಳು ವೀಕ್ಷಕರ ಮನ ಗೆದಿದ್ದರು.

  ಡ್ಯಾನ್ ಕರ್ನಾಟಕ ಡ್ಯಾನ್ಸ್ ಶೋ ಕೊನೆಯ ಹಂತದಲ್ಲೂ ಎಲ್ಲಾ ಪ್ರತಿಭೆಗಳು ಆ ಜೋಷ್ ಅನ್ನು ಮುಂದುವರೆಸಿಕೊಂಡು ಹೋಗಿದ್ದರು. ಮನರಂಜನೆ ಜೊತೆ ಜೊತೆಗೆ ಈ ರಿಯಾಲಿಟಿ ಶೋ ಅನ್ನು ಯಾರು ಗೆಲ್ಲುತ್ತಾರೆ ಅನ್ನೋ ಕುತೂಹಲ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಲೇ ಇತ್ತು.

  ಎಜೆ ಸೊಸೆ ದುರ್ಗಾ ನ್ಯೂ ಲುಕ್‌ಗೆ ಫಿದಾ ಆದ ಫಾಲೋವರ್ಸ್ : ನೀವು ಇಲ್ಲಿರಬೇಕಾದವರಲ್ಲ ಅಂದಿದ್ಯಾಕೆ..?ಎಜೆ ಸೊಸೆ ದುರ್ಗಾ ನ್ಯೂ ಲುಕ್‌ಗೆ ಫಿದಾ ಆದ ಫಾಲೋವರ್ಸ್ : ನೀವು ಇಲ್ಲಿರಬೇಕಾದವರಲ್ಲ ಅಂದಿದ್ಯಾಕೆ..?

  ಈ ಬಾರಿಯ ಡ್ಯಾನ್ ಕರ್ನಾಟಕ ಡ್ಯಾನ್ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ 'ಪವರ್ ಸ್ಟಾರ್ ಟ್ರೋಫಿ'. ಈ ಟ್ರೋಫಿ ಇಡೀ ರಾಜ್ಯದಾದ್ಯಂತ ಸಂಚರಿಸಿ ಅಭಿಮಾನಿಗಳ ಅಪ್ಪುಗೆ ಪಡೆದು ಬಂದಿತ್ತು. ಈ ಮೂಲಕ ಪ್ರತಿಭೆಗಳು ಅಪ್ಪು ಅವರ ಆಶೀರ್ವಾದವನ್ನು ಪಡೆದಂತಾಗಿದೆ. ಡಿಕೆಡಿ ಈ ಸೀಸನ್‌ ಅನ್ನು ಸ್ಪರ್ಧಿಗಳಾದ ಸಧ್ವಿನ್ - ಶಾರಿಕಾ ಜೋಡಿ ಪಡೆದುಕೊಂಡಿದೆ. ಶಿವಣ್ಣ ಕೈಯಿಂದ ಈ ಪ್ರಶಸ್ತಿಯನ್ನು ಪಡೆದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6ರ ವಿಜೇತರಾಗಿದ್ದಾರೆ.

  ಡಿಕೆಡಿ ಫಿನಾಲೆ ಕಾರ್ಯಕ್ರಮದಲ್ಲಿ 'ತೋತಾಪುರಿ' ಟೀಮ್ ಮತ್ತಷ್ಟು ಕಳೆಕಟ್ಟಿತ್ತು. ಇದೇ ಸೆಪ್ಟೆಂಬರ್ 30 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಹಾಗೂ ನಿರ್ಮಾಪಕ ಸುರೇಶ್ ಡಿಕೆಡಿ ವೇದಿಕೆಗೆ ಬಂದಿದ್ದರು.

  ಫಿನಾಲೆ ಕಾರ್ಯಕ್ರಮದ ವೇದಿಕೆಯಲ್ಲೊಂದು ಸಾರ್ಥಕ ಕ್ಷಣಕ್ಕೆ 'ತೋತಾಪುರಿ'ತಂಡ ಕಾರಣವಾಗಿದೆ. ನಿರ್ಮಾಪಕ ಸುರೇಶ್ ಹಾಗೂ ತಂಡ, ನವರಸ ನಾಯಕ ಜಗ್ಗೇಶ್ ಮತ್ತು ಡಾ . ಶಿವರಾಜ್ ಕುಮಾರ್ ಹಾಗೂ 'ತೋತಾಪುರಿ' ಚಿತ್ರತಂಡದ ಸಮ್ಮುಖದಲ್ಲಿ ಡಿಕೆಡಿ -6 ಕಾರ್ಯಕ್ರಮದ ವಿಶೇಷ ಪ್ರತಿಭೆಗಳಾದ ಹೃಷಿಕೇಶ್ ಮತ್ತು ಸಹನಾ ಜೋಡಿಗೆ ತಲಾ 1 ಲಕ್ಷ ರೂ ವನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.

  DKD Season 6 Finale: Totapuri Team Gave 1 Lakh To Hrishikesh And Sahana

  'ತೋತಾಪುರಿ' ಸಿನಿಮಾ ಇದೇ ಸೆಪ್ಟೆಂಬರ್ 30 ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಜಗ್ಗೇಶ್, ಅದಿತಿ ಪ್ರಭುದೇವ ಹಾಗೂ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಿದೆ.

  English summary
  DKD Season 6 Finale: Totapuri Team Gave 1 Lakh To Hrishikesh And Sahana, Know More.
  Tuesday, September 27, 2022, 22:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X